ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೬ ಶ್ರೀಮದ್ಭಾಗವತವು [ಅಧ್ಯಾ. ೫೭. ಸುತಿದ್ದ ಭೀಷ್ಮ, ಕೃಪ, ವಿದುರ, ಗಾಂಧಾರಿ, ಮೊದಲಾದವರನ್ನು ಕಂಡು ಮಾತಾಡಿಸಿ, ಅವರೊಡನೆ ಸಮಾನದುಃಖವನ್ನು ನಟಿಸುತ್ತ, “ ಅಯ್ಯೋ ! ಪಾಂಡವರಿಗೆ ಎಂತಹ ದುರ್ಗತಿಯುಂಟಾಯಿತು” ಎಂದು ತಾನೂ ವಿಲವಿ ಸುತಿದ್ದನು. ಇದೇ ಸಮಯದಲ್ಲಿ, ಇತ್ತಲಾಗಿ ದ್ವಾರಕೆಯಲ್ಲಿ ಕೃಷ್ಣನಿಲ್ಲದ ಸಮಯವನ್ನು ನೋಡಿ, ಆಕ್ಕೂರಕೃತವರ್ಮರೆಂಬ ಯಾದವರಿಬ್ಬರೂ * ಕೂರಬುದ್ಧಿಯುಳ್ಳ ಶತಧನ್ವನೆಂಬವನ ಬಳಿಗೆ ಬಂದು ಹೀಗೆಂದು ಉದ್ಯೋಧಿಸುವರು. “ ಅಯ್ಯಾ ! ಮಿತ್ರನೇ ! ಸತ್ರಾಜಿತ್ತು ನಿನಗೆ ಮಾಡಿ ದ ಮೋಸವನ್ನು ನೋಡಿದೆಯಾ? ತನ್ನ ಮಗಳನ್ನು ನಿನಗೆ ಕೊಡುವುದಾಗಿ ಹೇಳಿ, ಕೃಷ್ಣನಿಗೆ ಕೊಟ್ಟುಬಿಟ್ಟಿರುವನು ! ಆದುದರಿಂದ ಈಗಲೇ ನಾವು ಏನಾದರೂ ಉಪಾಯದಿಂದ, ಅವನಲ್ಲಿರುವ ಸ್ಯಮಂತಕರತ್ನ ವನ್ನ ಪ ಹರಿಸಿಬಿಡಬೇಕು” ಎಂದನು. ಅವರ ಪ್ರೇರಣೆಯಿಂದ ಶತಧನ್ವನ ಬುದ್ಧಿಯು ಕದಲಿತು, ಅವನಿಗೆ ಲತ್ವ ದಲ್ಲಿ ಆಸೆ ಹುಟ್ಟಿತು. ಅವನಿಗೆ ಕೊನೆಗಾಲವು ಸಮೀಪಿಸಿದುದರಿಂದಲೇ ಈವಿಪರೀತಬುದ್ದಿಯು ಹುಟ್ಟಿತು.ಆ ಪಾಪಾತ್ಮನು ಅಂತಃಪುರದಲ್ಲಿ, ಮೈಮರೆತು ಮಲಗಿದ್ದ ಸತ್ರಾಜಿತನ್ನು , ಕಟುಕನು ಪಶು ವನ್ನು ಕೊಲ್ಲುವಂತೆ ಕೊಂದು, ಆತನ ಅಂತಃಪುರ ಸ್ತ್ರೀಯರೆಲ್ಲರೂ ಕ ಣ್ಣಾರೆ ನೋಡುತ್ತ ದಿಕ್ಕು ಕಾಣದೆ ಅಳುತ್ತಿರುವಾಗಲೇ, ಅವನಲ್ಲಿದ್ದ ರತ್ನ ವನ್ನೂ ಅಪಹರಿಸಿಕೊಂಡು ಹೋದನು. ಸತ್ಯಭಾಮೆಯು, ತನ್ನ ತಂದೆ ಯ ಮರಣವನ್ನು ನೋಡಿ ಸಂಕಟವನ್ನು ತಡೆಯಲಾರದೆ « ಹಾಜನ ಕಾ ! ಜನಕಾ ! ಕೆಟ್ಟೆನು ! ಇನ್ನೇನುಗತಿ !” ಎಂದು ಗೋಳಿಡುತ್ತಿದ್ದಳು. ಆಮೇಲೆ ಆ ಸತ್ಯಭಾಮೆಯು ತನ್ನ ತಂದೆಯ ಮೃತದೇಹವನ್ನು ಒಂದು ಎಣ್ಣೆಯ ಕೊ ಪರಿಗೆಯಲ್ಲಿಡಿಸಿ, ಹಸ್ತಿನಾವತಿಗೆ ಹೋಗಿ, ನಡೆದ ಸಂಗತಿಯನ್ನು ತನ್ನ ಪತಿ ಯಾದ ಕೃಷ್ಣನಿಗೆ ತಿಳಿಸಿದಳು. ಸತ್ವಜ್ಞನಾದ ಕೃಷ್ಣನು ಮೊದಲೇ ಈ ವೃತ್ತಾಂತವನ್ನು ಬಲ್ಲವನಾಗಿದ್ದರೂ, ಮನಷ್ಯಶೀಲೆಯನ್ನು ನಟಿಸುತ್ತ ಅ

  • ಕೂರನಾದ ಶತಧನ್ವನನ್ನು ಕೊಲ್ಲುವುದಕ್ಕಾಗಿ ಕೃಷ್ಣನೇ ಆ ಯಾದವ `ರಿಗೆ ಈ ಬುದ್ಧಿಯನ್ನು ಹುಟ್ಟಿಸಿರಬೇಕೆಂದೂಹ್ಯವು.