ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪e ಶ್ರೀಮದ್ಭಾಗವತವು [ಅಧ್ಯಾ, ೫೬. ಆ ಕೃಷ್ಣನಲ್ಲಿ ತನಗುಂಟಾದ ಭಕ್ತಿಯಿಂದ ಪರವಶನಾಗಿ « ಅದ್ಭುತಮಹಿ ಮೆಯುಳ್ಳ ಆಕೃಷ್ಣನಿಗೆ ನಮಸ್ಕಾರವು, ಆಪ್ರಮೇಯಸ್ವರೂಪನಾಗಿಯೂ, ಜಗತ್ಕಾರಣನಾಗಿಯೂ, ' ಸ್ವರೂಪಸ್ಸಭಾವಗಳಲ್ಲಿ ವಿಕಾರವಿಲ್ಲದವನಾ ಗಿಯೂ, ಸತ್ಯಾಂತರಾತ್ಮನಾಗಿಯೂ ಇರುವ ಆ ಭಗವಂತನಿಗೆ ನಮಸ್ಕಾ ರವು”, ಎಂದು ಧ್ಯಾನಿಸುತ್ತ ನಿಂತುಬಿಟ್ಟನು. ಹೀಗೆ ಅಕರನೂ ತಿರಸ್ಕ ರಿಸಿ ಬಿಟ್ಟಮೇಲೆ, ಶತಧನ್ವನು ಬೇರೆ ಉಪಾಯವೇನೂ ತೋರದೆ, ತನ ಲ್ಲಿದ ಸ್ಯಮಂತಕಮಣಿಯನ್ನು ಅಕ್ರೂರನ ಕೈಗೆ ಕೊಟ್ಟು, ನೂರುಯೋಜನಗಳ ದೂರದಿಂದಾಚೆಗಿರುವ ಯಾವುದೋ ಒಂದು ದೇಶಕ್ಕೆ ಹೋಗಿ ಅವಿತು ಕೊಂಡನು. ಇಷ್ಟರಲ್ಲಿ ರಾಮಕೃಷ್ಣರಿಬ್ಬರೂ ಗರುಡಧ್ವಜವುಳ್ಳ ತಮ್ಮ ರಥವನ್ನೇರಿ, ವೇಗದಿಂದ ಕುದುರೆಗಳನ್ನು ನಡೆಸಿಕೊಂಡು, ಆ ಶತಧನ್ವನ ದಾರಿ ಯನ್ನು ಹಿಂಬಾಲಿಸಿಹೊರಟರು. ಕೃಷ್ಣನು ತನ್ನ ಮಾವನನ್ನು ಕೊಂದ ಆ ಶತಧನ್ಯನನ್ನು ಹೇಗಾದರೂ ಸಂಹರಿಸಬೇಕೆಂದು ದೃಢಸಂಕಲ್ಪದಿಂದಿದ್ದನು. ಶತಧನ್ಯನು ಬಹುದೂರದವರೆಗೆ ಪಲಾಯನಮಾಡಿ, ಕೊನೆಗೆ ವಿಥಿಲಾಪ ಣದ ಉಪವನಕ್ಕೆ ಬರುವಷ್ಟರಲ್ಲಿ, ಅವನ ಕುದುರೆಗಳು ನಡೆಯಲಾರದೆ ಅಲ್ಲಿ ಬಿದ್ದುಹೋದುವು. ಆಮೇಲೆ ಆ ಶತಧನ್ವನು ಕಾಲುವಡೆಯಿಂದಲೇ ಓಡ ಲಾರಂಭಿಸಿದನು. ಕೃಷ್ಣನೂ ಹಾಗೆಯೇ ಕಾಲುನಡೆಯಿಂದ ಅವನನ್ನು ಬೆನ್ನಟ್ಟಿ ಹೋಗಿ, ಸ್ವಲ್ಪ ಕಾಲದೊಳಗಾಗಿಯೇ ಅವನನ್ನು ಹಿಡಿದು, ತೀಕ್ಷ ಧಾರೆಯುಳ್ಳ ತನ್ನ ಚಕ್ರದಿಂದ ಅವನ ತಲೆಯನ್ನು ಕತ್ತರಿಸಿ ಕೆಡಹಿದನು. ಕೃಷ್ಣನು ಸರಜ್ಞನಾಗಿದ್ದರೂ, ಬಲರಾಮನ ಮಾತಿಗಾಗಿ ಆ ಶತಧನ್ವನ ಬಟ್ಟೆಗಳೆಲ್ಲವನ್ನೂ ಶೋಧಿಸಿ ಸ್ವಲ್ಪಹೊತ್ತಿನವರೆಗೆ ಹುಡುಕುತಿದ್ದು, ಅಲ್ಲಿ ರತ್ನವನ್ನು ಕಾಣದೆ, ಬಲರಾಮನಬಳಿಗೆ ಬಂದು ಆಶಾಭಂಗವನ್ನು ನಟಿ ಸುತ್ತ (ಅಣ್ಣಾ! ನಾವು ನಿಷ್ಟ್ರಯೋಜನವಾಗಿ ಆ ಶತಧನ್ಯನನ್ನು ಕೊಂದ ಹಾಗಾಯಿತು. ಅವನಲ್ಲಿ ಈಗ ರತ್ನ ವೇನೂ ಕಾಣಲಿಲ್ಲ ! ಈಗ ಮಾಡುವು ದೇನು ?” ಎಂದನು. ಆಗ ಬಲರಾಮನು, ( ಕೃಷ್ಣಾ ! ಆ ಶತಧನ್ವನು ಬೇರೆ ಯಾವನಲ್ಲಿಯೋ ಆ ರತ್ನ ವನ್ನು ಬಚ್ಚಿಟ್ಟಿರಬೇಕು. ಆದುದರಿಂದ ನೀನು ತಿರುಗಿ ದ್ವಾರಕಾಪುರಕ್ಕೆ ಹೋಗಿ, ಅಲ್ಲಿ ಚೆನ್ನಾಗಿ ಹುಡುಕಿನೋಡು! ನಾನು