ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೯ ಅಧ್ಯಾ ೫೭.] ದಶಮಸ್ಕಂಧವು. ಈಗಲೇ ಮಿಥಿಲಾಪುರಿಗೆ ಹೋಗಿ, ಅಲ್ಲಿ ವಿದೇಹರಾಜನನ್ನು ನೋಡ ಬೇಕೆಂದಿರುವೆನು. ಇನ್ನು ನಾನು ಹೋಗುವೆನು.” ಎಂದು ನೆಟ್ಟಗೆ ಮಿಥಿಲಾ ಪುರಿಗೆ ಬಂದು ಬಿಟ್ಟನು. ಅಲ್ಲಿ ಮಿಥಿಲರಾಜನು ಬಲರಾಮನನ್ನು ಕಂಡೊಡನೆ ಅತ್ಯಾದರದಿಂದ ಸತ್ಕರಿಸಿ ಮನ್ನಿಸಿದನು. ಬಲರಾಮನು ಅಲ್ಲಿಯೇ ಕೆಲವು ವರುಷಗಳವರೆಗೆ ವಾಸಮಾಡುತ್ತಿದ್ದನು. ಈ ಕಾಲದಲ್ಲಿಯೇ ಧೃತ ರಾಷ್ಟ್ರನ ಮಗನಾದ ದುರೊಧನನು ಬಲರಾಮನಲ್ಲಿ ಗದಾಯುದ್ಧವನ್ನು ಕ್ರಮವಾಗಿ ಕಲಿತನು, ಇಷ್ಟರಲ್ಲಿ ಇತ್ತಲಾಗಿ ಕೃಷ್ಣನು ದ್ವಾರಕೆಗೆ ಬಂದು, ತಾನು ಶತಧನ್ವನನ್ನು ಕೊಂದುಬಂದ ವೃತ್ತಾಂತವನ್ನೂ, ಅಲ್ಲಿ ತನಗೆ ಸ್ಯಮಂತಕರುವು ಸಿಕ್ಕದೆ ಹೋದುದನ್ನೂ ಸತ್ಯಭಾಮೆಗೆ ತಿಳಿಸಿದನು. ಮತ್ತು ಅಲ್ಲಿ ತಾನೇ ಮುಂದಾಗಿ ನಿಂತು ಶತಧನ್ಯನಿಗೆ, ಅವನ ಬಂಧುಗಳಿಂದ ಅಪರಕ್ರಿಯೆಗಳನ್ನು ಕ್ರಮವಾಗಿ ಮಾಡಿಸಿದನು. ಶತಧನ್ವನು ಕೃಷ್ಣ ನಿಂದ ಹತನಾದ ಸಂಗತಿಯು, ಅಕ್ಷರಕೃತವರ್ಮರಿಗೂ ತಿಳಿಯಿತು. ಶತಧನ್ಯನನ್ನು ಆ ಕಾರಕ್ಕೆ ಪ್ರೇರಿಸಿದವರು ಅವರೇ ಆದುದರಿಂದ, ಕೃಷ್ಣ ನಿಗೆ ಆ ಸಂಗತಿಯು ತಿಳಿದುಬಂದರೆ, ತಮ್ಮನ್ನೇನುಮಾಡುವನೋ ಎಂಬ ಭಯದಿಂದ, ಅವರಿಬ್ಬರೂ ಅಕ್ಷಣವೇ ದ್ವಾರಕೆಯನ್ನು ಬಿಟ್ಟು, ಎತ್ತಿಯೊ ತಲೆತಪ್ಪಿಸಿಕೊಂಡು ಓಡಿಹೋದರು. ಆಕರನು ದ್ವಾರಕೆಯನ್ನು ಬಿಟ್ಟು ಹೊರಟುಹೋದಕೂಡಲೆ, ಅಲ್ಲಿನ ಜನರಿಗೆ ಆಕಾಶದಲ್ಲಿಯೂ, ಭೂಮಿಯಲ್ಲಿಯೂ, ಅವರವರ ಶರೀರಗಳಲ್ಲಿಯೂ, ನಾನಾವಿಧವಾದ ಮಹೋತ್ಪಾತಗಳು ಕಂಡು ಬಂದುವು. « ಓ ಪರೀಕ್ಷಿದ್ರಾಜಾ ! ಅಕ್ಕೂ ರನು ಬಿಟ್ಟು ಹೋದುದರಿಂದ ಅಲ್ಲಿ ಉತ್ಪಾತಗಳುಂಟಾದುವೆಂದು ಕೆಲವರು ಆಡಿಕೊಳ್ಳುತಿದ್ದರು. ಇದು ಭ್ರಮೆಯಹೊರತು ವಾಸ್ತವವೆಂದು ತೋರ ಲಿಲ್ಲ. ತಮ್ಮ ನಿವಾಸಮಾತ್ರದಿಂದಲೇ ಸಮಸ್ತದೋಷಗಳನ್ನೂ ನೀಗಿಸ ತಕ್ಕ ಮಹರ್ಷಿಗಳಿಗೂ ಯಾವನು ಆಶ್ರಯಭೂತನಾಗಿರುವನೋ, ಅಂತಹ ಕೃಷ್ಣನೇ ಸಾಕ್ಷಾತ್ತಾಗಿ ವಾಸಮಾಡುತ್ತಿರುವಾಗ, ಅಲ್ಲಿ ಉತ್ಪಾತಗಳು ಕಾಣುವುದೆಂದರೇನು ? ಇದಲ್ಲದೆ ಕೆಲವುವೃದ್ಧರು ಹಿಂದೆ ಕಾಶಿಯಲ್ಲಿ ಬಹು ಕಾಲದವರೆಗೆ ಮಳೆಯಿಲ್ಲದೆ ಹೋಗಲು, ಕಾಶೀರಾಜನು ತನ್ನಲ್ಲಿಗೆ ಬಂದ