ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೮.] ದಶಮಸ್ಕಂಧವು. ೨೧೫೧ ಹಾಗಿರಲಿ ! ನಿನಗೆ ಕ್ಷೇಮವಷ್ಟೆ? ನಿನ್ನ ಯಜ್ಞಕಾರಗಳೆಲ್ಲವೂ ಅವಿಚ್ಛಿನ್ನ ವಾಗಿ ನಡೆಯುತ್ತಿರುವುದಷ್ಟೆ ? ಎಂದು ನಾನಾವಿಧಗಳಾದ ಪ್ರಿಯ ವಾಕ್ಯಗಳಿಂದ ಆ ಆಕರನನ್ನು ಪ್ರೋತ್ಸಾಹಿಸಿದ ಮೇಲೆ, ಆಕ್ರನು ತನ್ನ ಬಟ್ಟೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಸೂರತೇಜಸ್ಸುಳ್ಳ ಆ ರತ್ನವನ್ನು ತೆಗೆದು ಕೃಷ್ಣನ ಕೈಗೆ ಕೊಟ್ಟನು. ಕೃಷ್ಣನು ತನ್ನ ಬಂಧುಗಳೆಲ್ಲರಿಗೂ ಅದನ್ನು ತೋರಿಸಿ, ತನ್ನ ಮೇಲಿನ ಅಪವಾದವನ್ನು ತಪ್ಪಿಸಿಕೊಂಡು, ಆ ಮೇಲೆ ತಿರುಗಿ ಅದನ್ನು ಅಕ್ರೂರನ ಕೈಗೇ ಕೊಟ್ಟು ಬಿಟ್ಟನು. ಓ ಪರೀಕ್ಷೆ ದ್ರಾಜಾ ! ಸರೈಶ್ವರನಾದ ಆ ಭಗವಂತನ ಸ್ಯಮಂತಕಾಹರಣವೆಂಬ ಈ ವೃತ್ತಾಂತವು ಸಮಸ್ತಪಾಪನಿವಾರಕವಾದುದು, ಮಂಗಳಕರವಾದುದು, ಈ ಉಪಾಖ್ಯಾನವನ್ನು ಭಕ್ತಿಯಿಂದ ಕೇಳುವವರೂ, ಹೇಳುವವರೂ, ಮನಸ್ಸಿನಿಂದ ಧ್ಯಾನಿಸುವವರೂ, ಆ ಕೃಷ್ಣನಂತೆಯೇ ತಮ್ಮ ಮೇಲೆ ಬಿದ್ದ ವೃಧಾಪವಾದಗಳನ್ನು ತಪ್ಪಿಸಿಕೊಂಡು ಮನಶ್ಯಾಂತಿಯನ್ನು ಹೊಂದುವರು. ಇದು ಐವತ್ತೇಳನೆಯ ಅಧ್ಯಾಯವು. ಶ್ರೀಕೃಷ್ಣನು ಕಾಳಿಂದಿ, ಮಿತ್ರವಿಂದೆ, ಸತ್ಯೆಯಂಖ ) ವರನ್ನು ಮದಿವೆಯಾದುದು, "I ಓ ಪರೀಕ್ಷಿದ್ರಾಜಾ ! ಆಮೇಲೆ ಶ್ರೀಕೃಷ್ಣನು, ಪಾಂಡವರು, ತಾವು ಅರಗಿನ ಮನೆಯಲ್ಲಿ ದಗ್ಧರಾದಂತೆ ಜನರೆಲ್ಲರಿಗೂ ನಂಬಿಕೆ ಹುಟ್ಟಿಸಿ, ದ್ರುಪದನ ಪಟ್ಟಣಕ್ಕೆ ಬಂದು ಸೇರಿರುವರೆಂಬ ಸುದ್ದಿಯನ್ನು ಕೇಳಿ, ಸಾತ್ಯಕಿ ಮೊದಲಾದವರೊಡನೆ ಹೊರಟು, ಆ ಪಾಂಡವರನ್ನು ನೋಡಬೇಕೆಂದು ತಿರುಗಿ ಇಂದ್ರಪ್ರಸ್ಥಕ್ಕೆ ಬಂದನು, ಸಲ್ವೇಶ್ವರನಾದ ಕೃಷ್ಣನು ಬಂದು ದನ್ನು ನೋಡಿ ಪಾಂಡವರೆಲ್ಲರೂ, ಹೋಗಿದ್ದ ಪ್ರಾಣವೇ ತಿರುಗಿ ಬಂದಂತೆ ಸಂತೋಷಗೊಂಡು,ಪ್ರತ್ಯುತ್ಥಾನಮಾಡಿ, ಅವನನ್ನು ಪ್ರೀತಿಯಿಂದಾಲಿಂಗಿಸಿ ಕೊಂಡರು. ಆ ಭಗವಂತನ ದೇಹಸ್ಪರ್ಶದಿಂದ ಪಾಪವಿಮುಕ್ತರಾಗಿ, ಮಂದಹಾಸವಿಶಿಷ್ಟವಾದ ಆ ಕೃಷ್ಣನ ಮುಖಕಮಲವನ್ನು ನೋಡುತ್ತ ಸಂತೋಷಸಾಗರದಲ್ಲಿ ಮುಳುಗಿದಂತಾದರು. ಆಗ ಕೃಷ್ಣನು ಯುಧಿಷಿ 136 B.