ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫೨ ಶ್ರೀಮದ್ಭಾಗವತವು [ಅಧ್ಯಾ ೫೮, ರನಿಗೂ, ಭೀಮನಿಗೂ, ಪಾದಾಭಿವಂದನವನ್ನು ಮಾಡಿದನು. ತನಗೆ ಸಮಾ ನಸ್ಕಂಧನಾದ ಅರ್ಜುನನ್ನು ಆಲಿಂಗಿಸಿಕೊಂಡನು. ತನಗೆ ನಮಸ್ಕಾರ ಡಿದ ನಕುಲಸಹದೇವರಿಬ್ಬರನ್ನೂ ಶುಭಾಶೀದ್ವಾದಗಳಿಂದ ಮನ್ನಿಸಿ ದನು, ಪಂಚಪಾಂಡವರೂ ಆಗ ಕೃಷ್ಣನಿಗೆ ಉತ್ತಮಾಸನವನ್ನು ಕೊಟ್ಟು ಕುಳ್ಳಿರಿಸಿದರು. ಹೊಸಮದುಮಗಳಾದ ಬ್ರೌಪದಿಯ, ಲಜ್ಜೆ ಯೊಡನೆ ಮುಂದೆ ಬಂದು, ಶ್ರೀ ಕೃಷ್ಣನ ಪಾದಗಳನ್ನು ಹಿಡಿದು ನಮಸ್ಯ ರಿಸಿದಳು ಕೃಷ್ಣನೊಡನೆ ಬಂದಿದ್ದ ಸಾತ್ಯಕಿ ಮೊದಲಾದವರೂ ಕೂಡ, ಪಾಂಡವರಿಂದ ಯಥೋಚಿತವಾಗಿ ಸತ್ಕರಿಸಲ್ಪಟ್ಟು ಉಚಿತಾ ಸನದಲ್ಲಿ ಕುಳಿತಿದ್ದರು. ಸ್ವಲ್ಪ ಹೊತ್ತಿನಮೇಲೆ ಕೃಷ್ಣನು ತನ್ನ ಅತ್ತೆಯಾದ ಕುಂತಿಗೆ ನಮಸ್ಕರಿಸುವುದಕ್ಕಾಗಿ ಅವಳ ಬಳಿಗೆ ಹೋದನು. ಕೃಷ್ಣನನ್ನು ಕಂಡೊಡನೆ ಕುಂತಿದೇವಿಯು, ಸಂತೋಷದಿಂದ ಕಣ್ಣುಗಳಲ್ಲಿ ಆನಂದ ಬಾಷ್ಪವನ್ನು ಸುರಿಸುತ್ತ, ಆತನನ್ನಾ ಲಂಗಿಸಿ, ವಸುದೇವನೇ ಮೊದಲಾದ ತನ್ನ ಬಂಧುಗಳ ಕ್ಷೇಮವನ್ನು ವಿಚಾರಿಸಿದಳು. ಕೃಷ್ಣನೂ ಕೂಡ ಆ ಕುಂತಿ ಯ ಮತ್ತು ಅವಳ ಸೊಸೆಯ ಕ್ಷೇಮವನ್ನು ವಿಚಾರಿಸಿದನು. ಹೀಗೆ ಕುಶಲ ಪ್ರಶ್ನೆಗಳಾಗುವಾಗ, ಕುಂತಿಯು ಕಣ್ಣುಗಳಲ್ಲಿ ಧಾರೆಧಾರೆಯಾಗಿ ನೀರು ಸುರಿಸುತ್ಯ, ಸಮಸ್ಯ ದುಃಖನಿವಾರಕನಾದ ಆ ಶ್ರೀ ಕೃಷ್ಣನನ್ನು ನೋಡಿ, ಹಿಂದೆ ತನಗುಂಟಾದ ಅನೇಕಕಷ್ಟಗಳನ್ನು ಸ್ಮರಿಸಿಕೊಂಡು, ಗದ್ಯವಸ್ವರ ದಿಂದ ಹೀಗೆಂದು ಹೇಳುವಳು, ಕೃಷ್ಣಾ ! ನೀನು ಬಂಧಪ್ರೇಮವನ್ನಿಟ್ಟು ಯಾವಾಗ ನಮ್ಮನ್ನು ಸ್ಮರಿಸುತ್ತಿರುವೆಯೋ, ಆಗಲೇ ನಮ್ಮ ಕಷ್ಟಗಳೆಲ್ಲ ವೂ ನೀಗಿತಂದಲ್ಲದೆ ಬೇರೆಯಲ್ಲ. ನೀನೊಬ್ಬನೇ ನಮಗೆ ದಿಕ್ಕು! ಹಿಂದೆ ನೀನು ನಮ್ಮ ಕಷ್ಟವನ್ನು ವಿಚಾರಿಸುವುದಕ್ಕಾಗಿ, ನಮ್ಮ ಜ್ಞಾತಿಯಾದ ಆಕ್ಕೂರ ನನ್ನು ಕಳುಹಿಸಿದಾಗಲೇ ನಮ್ಮ ಸಂಕಟಗಳೆಲ್ಲವೂ ನೀಗಿದುವು. ನಿನಗೆ ತನ್ನವರೆಂದೂ, ಇತರರೆಂದೂ ಭೇದಬುದ್ಧಿಯಿಲ್ಲದುದರಿಂದ, ಸತ್ವಸು ಕೃತ್ರೆನಿಸಿಕೊಂಡಿರುವೆ. ಸಮಸ್ತಲೋಕಗಳಿಗೂ ಆಂತರಾತ್ಮನಾದ ನಿನಗೆ ಆ ವಿಧವಾದ ಭೇದಬುದ್ಧಿಯಿಲ್ಲದಿರುವುದೇನೂ ಆಶ್ಚರವಲ್ಲ. ಹೀಗೆ ನೀನು ಸತ್ವಸಮನಾಗಿದ್ದರೂ, ನಿನ್ನನ್ನು ಮರೆಯದೆ ಯಾವಾಗಲೂ ಸ್ಮರಿ