ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫೫ ಅಧ್ಯಾ, ೫೮.] ದಶಮಸ್ಕಂಧವು. ದ್ರಾಜಾ ! ಈ ಮಯನಿರ್ಮಿತವಾದ ಸಭೆಯಲ್ಲಿಯೇ ದುರ್ಯೋಧನನು, ನೀರೆಂದೂ, ನೆಲವೆಂದೂ ತಿಳಿಯದೆ, ಬುದ್ಧಿ ಭ್ರಮದಿಂದ ಮೋಸಹೋಗಿ ಅವಮಾನಪಟ್ಟನು. ಈ ಕಾರಗಳೆಲ್ಲವೂ ಕೃಷ್ಣನು ಇಂದ್ರಪ್ರಸ್ಥದಲ್ಲಿದ್ದಾ ಗಲೇ ನಡೆದುವು. ವರ್ಷಾಕಾಲದ ಆ ನಾಲ್ಕು ತಿಂಗಳುಗಳು ಕಳೆದಮೇಲೆ ಶ್ರೀಕೃಷ್ಣನು, ಧರ್ಮರಾಜನ ಮತ್ತು ಇತರಬಂಧುಮಿತ್ರರ ಅನುಜ್ಞೆ ಯನ್ನು ಪಡೆದು, ಸಾತ್ಯಕಿ ಮೊದಲಾದವರೊಡನೆ ಅಲ್ಲಿಂದ ಹಿಂತಿರುಗಿದನು. ದ್ವಾರಕಿಗೆ ಬಂದಮೇಲೆ, ಒಂದಾನೊಂದು ಶುಭಮಾಸದ ಶುಭನಕ್ಷತ್ರದಲ್ಲಿ ಗ್ರಹಬಲಸಂಪತ್ತಿಯಿಂದ ಕೂಡಿದ ಶುಭಮುಹೂರ್ತದಲ್ಲಿ, ಆ ದ್ವಾರಕಾ ವಾಸಿಗಳೆಲ್ಲರಿಗೂ ನೇತ್ರಾನಂದವುಂಟಾಗುವಂತೆ ಕಾಳಿಂದಿಯನ್ನು ವಿವಾಹ ಮಾಡಿಕೊಂಡನು. ಓ ಪರೀಕ್ಷಿದ್ರಾಜಾ ! ಇನ್ನೊಂದು ವೃತ್ತಾಂತವನ್ನು ತಿಳಿಸುವೆನು ಕೇಳು. ಅವಂತೀದೇಶದಲ್ಲಿ ವಿಂದಾನುವಿಂದರೆಂಬ ಇಬ್ಬರು ರಾಜರಿದ್ದರು. ಅವರು ದುರ್ಯೋಧನನಿಗೆ ವಶವರ್ತಿಗಳಾಗಿದ್ದರು. ಇವರಿಗೆ ಮಿತ್ರವಿಂದೆ ಯೆಂಬ ತಂಗಿಯೊಬ್ಬಳಿದ್ದಳು. ಇವರ ತಾಯಿಗೆ ರಾಜಾಧಿದೇವಿಯೆಂದು | ಹೆಸರು. ಆಕೆಯು ಕೃಷ್ಣನಿಗೆ ಅತ್ತೆಯಾಗಿದ್ದುದರಿಂದ, ತನ್ನ ಮಗಳಾದ ಮಿತ್ರವಿಂದೆಯನ್ನು ಕೃಷ್ಣನಿಗೇ ಕೊಡಬೇಕೆಂದಿದ್ದಳು, ಆ ಮಿತ್ರವಿಂದೆಗೂ ಕೃಷ್ಣನಲ್ಲಿಯೇ ವಿಶೇಷವಾದ ಅನುರಾಗವು ಹುಟ್ಟಿತು. ವಿಂದಾನು ವಿಂದರಿಬ್ಬರೂ ದುರ್ಯೋಧನನ ಪಕ್ಷದವರಾದುದರಿಂದ, ತಮ್ಮ ತಂಗಿಗುಂ ಟಾದ ಆ ಅಭಿಪ್ರಾಯವನ್ನು ತಪ್ಪಿಸುವುದಕ್ಕೆ ಯತ್ನಿ ಸುತಿದ್ದರು, ಇಷ್ಟರಲ್ಲಿ ಕೃಷ್ಣನು, ಆ ರಾಜರೆಲ್ಲರೂ ಕಣ್ಣಿದಿರಿಗೆ ನೋಡುತ್ತಿರುವಾಗಲೇ, ಅವಳನ್ನು ಬಲಾತ್ಕಾರದಿಂದಪಹರಿಸಿಕೊಂಡು ಅವಳ ಕೋರಿಕೆಯಂತೆ ತಾನೇ ವಿವಾಹವಾದನು. - ಓ ಪರೀಕ್ಷಿದ್ರಾಜಾ! ಕೋಸಲದೇಶಕ್ಕೆ ನಗ್ನ ಜಿತ್ತೆಂಬ ರಾಜನೊಬ್ಬ ನಿದ್ದನು. ಆತನು ಬಹಳ ಧಾರ್ಮಿಕನು, ಅವನಿಗೆ ಪರಮಸುಂದರಿಯಾದ ಸತ್ಯೆಯೆಂಬೊಬ್ಬ ಕನ್ಶಿಯಿದ್ದಳು. ಅವಳಿಗೆ ವಿವಾಹಕಾಲವು ಸಮೀಪಿಸಿತು. ಅವಳ ವಿವಾಹಕ್ಕಾಗಿ ಒಂದು ವಿಚಿತ್ರವಾದ ಪದ್ಧತಿಯು ಏರ್ಪಟ್ಟಿತು.