ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫೭ ಅಧ್ಯಾ, ೫೮.] ದಶಮಸ್ಕಂಧವು. ಸೀನನಾದ ಕೃಷ್ಣನು, ಮೇಘುಘುಂಭೀರಧ್ವನಿಯಿಂದ,ಮಂದಹಾಸಪೂರಕ ವಾಗಿ ಹೀಗೆಂದು ಹೇಳುವನು (4 ಓ ನರೇಂದ್ರಾ ! ಲೋಕದಲ್ಲಿ ಸ್ವಧರ್ಮ ದಲ್ಲಿರತಕ್ಕ ನಮ್ಮಂತಹ ಕ್ಷತ್ರಿಯರು ಪರರಲ್ಲಿ ಯಾಚಿಸುವುದು ಬಹಳ ನಿಂದ್ಯವಾಗಿದ್ದರೂ, ಈಗ ನಾನು ನಿನ್ನ ಬಂಧುತ್ವವನ್ನು ಕೋರಿ,ನಿನ್ನ ಕನ್ಯ ಯನ್ನು ಯಾಚಿಸುತ್ತಿರುವೆನು, ಆದರೆ ಸೀನು, ಈ ನಿನ್ನ ಮಗಳ ವಿವಾಹ ಕ್ಯಾಗಿ ಏರ್ಪಡಿಸಿರುವ ಕನ್ಯಾಶುಲ್ಕವನ್ನು ಮಾತ್ರ ನಾವು ಕೊಡತಕ್ಕವರಲ್ಲ” ಎಂದನು. ಅದಕ್ಕಾ ರಾಜನು “ ಓ : ನಾಥಾ ! ಸಮಸ್ತಕಲ್ಯಾಣಗುಣ ಗಳಿಗೂ ನಿಧಿಯಾಗಿ, ಸಾಕಾಲಕ್ಷ್ಮಿದೇವಿಯನ್ನೇ ಎದೆಯಲ್ಲಿ ಧರಿಸಿರತಕ್ಕ ನಿನಗಿಂತಲೂ ನನ್ನ ಮಗಳಿಗೆ ಉತ್ತಮವರನು ಎಲ್ಲ ಸಿಕ್ಕುವನು ? ಹಾಗಿ ದರೂ, ನಾವು ಕ್ಷತ್ರಿಯರಾದುದರಿಂದ, ಮೊದಲು ಮಾಡಿದ ನಿರ್ಣಯಕ್ಕೆ ತಪ್ಪಿ ನಡೆ ಯಲಾರೆವು, ಈ ನನ್ನ ಮಗಳಿಗೆ ತಕ್ಕ ವರನಾರೆಂಬುದನ್ನು ತಿಳಿ ಯುವುದಕ್ಕಾಗಿ,ನಾನೊಂದು ಸಿಯಮವನ್ನು ಮಾಡಿರುವೆನು.ಅದರಿಂದ ಪುರು ಷರ ಶಕ್ತಿಯನ್ನು ಪರೀಕ್ಷಿಸಿದಮೇಲೆಯೇ ಈ ಆನೆಯನ್ನು ವಿವಾಹಮಾಡಿ ಕೊಡಬೇಕಾಗಿರುವುದು, ಇರೋ'! ನನ್ನಲ್ಲಿ ಏಳು ವೃಷಭಗಳುಂಟು. ಇವುಗ ಇನ್ನು ನಿಗ್ರಹಿಸುವುದಕ್ಕೆ ಇದುವರೆಗೆ ಯಾವ ಕ್ಷತ್ರಿಯರ ಸಮರ್ಥರಾಗ ಶಿಲ್ಲ. ಅನೇಕರಾಜಕುಮಾರರು ಇರ್ದಗಿ ಪ್ರಯತ್ನ ಪಟ್ಟು, ವಿಫಲ ಪ್ರಯತ್ನರಾಗಿ ಮೈಮುರಿದು ಹೊರಟು ಹೋದರು. ಈಗ ನೀನಾದರೂ ಇವುಗಳನ್ನು ನಿಗ್ರಹಿಸಿದ ಪಕ್ಷದಲ್ಲಿ, ನನ್ನ ಮಗಳಿಗೆ ವರನಾಗಬಹುದು” ಎಂದನು. ಇದನ್ನು ಕೇಳಿದೊಡನೆ ಕೃಷ್ಣನು, ನಡುದಟ್ಟಿಯನ್ನು ಬಿಗಿ ದು, ತನ್ನ ಆಕಾರವನ್ನು ಏಳುವಿಧವಾಗಿ ಮಾಡಿಕೊಂಡು, ಲೀಲಾ ಮಾತ್ರದಲ್ಲಿಯೇ ಆ ಏಳುವೃಷಭಗಳ ಕೊಂಬುಗಳನ್ನು ಮುರಿದು, ಅವುಗಳ ಹೆಮ್ಮೆಯನ್ನಡಗಿಸಿ, ಸಣ್ಣ ಮಕ್ಕಳು ಮರದ ಬೊಂಬೆಗಳನ್ನು ಬಿಗಿದು ಕಟ್ಟು ವಂತೆ, ಅವುಗಳನ್ನು ಹಗ್ಗಗಳಿಂದ ಬಿಗಿದು ಎಳೆದಾಡಿದನು. ಆಗ ರಾಜನು ಕೃಷ್ಣನ ಮಹಿಮೆಗೆ ಆಶ್ಚರಗೊಂಡು, ತನ್ನ ಮಗಳನ್ನು ಸಂತೋಷಪೂರಕ ವಾಗಿ ವಿವಾಹಮಾಡಿಕೊಟ್ಟನು. ಕೃಷ್ಣನೂಕೂಡ, ತನಗೆ ಅನುರೂಪಳಾದ ಕನ್ಯಯು ದೂರೆತುದಕ್ಕಾಗಿ ಸಂತೋಷದಿಂದ ಅವಳನ್ನು ಸ್ವೀಕರಿಸಿದನು.