ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫೮ ಶ್ರೀಮದ್ಭಾಗವತವು (ಅಧ್ಯಾ. ೫೮. ರಾಜಪತ್ನಿ ಯರೂ ತಮ್ಮ ಮಗಳಿಗೆ ಇಷ್ಟವಾದ ವರನು ಲಭಿಸಿದ ನೆಂದು ಪರಮಾನಂದಭರಿತರಾದರು. ಆ ಪಟ್ಟಣದಲ್ಲಿ ಎಲ್ಲೆಲ್ಲಿ ನೋಡಿ ದರೂ ಮಹೋತ್ಸವಗಳು ನಡೆಸಲ್ಪಟ್ಟವು. ಶಂಖ, ಭೇರಿ, ಆನಕ ಮೊದ ಲಾದ ವಾದ್ಯಗಳೂ, ಗಾನಗಳೂ, ಬ್ರಾಹ್ಮಣರ ಆಶೀದ್ವಾದಗಳೂ ನಾನಾ ಕಡೆಯಿಂದ ಹೊರಡುತಿದ್ದುವು. ಆ ಪಟ್ಟಣದಲ್ಲಿರುವ ಸ್ತ್ರೀಪುರುಷರೆಲ್ಲರೂ, ವಸ್ತ್ರಾಭರಣಗಳಿಂದಲಂಕೃತರಾಗಿ, ಆ ವಿವಾಹಮಹೋತ್ಸವವನ್ನು ಕೊಂ ಡಾಡಿದರು. ಆಗ ನಗ್ನ ಜಿತ್ತು, ಹತ್ತು ಸಾವಿರಧೇನುಗಳನ್ನೂ ,ಸ್ವರ್ಣಾಲಂಕಾರ ಭೂಷಿತರಾದ ಮೂರುಸಾವಿರಮಂದಿ ಸುವಾಸಿನಿಯರನ್ನೂ, ಒಂಬತ್ತು ಸಾವಿರ ಆನೆಗಳನ್ನೂ, ಆ ಅನೆಗಳಿಗೆ ನೂರರಷ್ಟು ರಥಗಳನ್ನೂ , ಆ ರಥಗ ಳಿಗೆ ನೂರನಷ್ಟು ಕುದುರೆಗಳನ್ನೂ, ಆ ಕುದುರೆಗಳಿಗೆ ನೂರರಷ್ಟು ಪದಾತಿ ಗಳನ್ನೂ ಬಳುವಳಿಯಾಗಿ ಕೊಟ್ಟು ಈ ದೊಡ್ಡ ಸೈನ್ಯದೊಡನೆ, ಆ ದಂ ಪತಿಗಳನ್ನು ರಥದಲ್ಲಿ ಕುಳ್ಳಿರಿಸಿ, ಅವರ ಪಟ್ಟಣಕ್ಕೆ ಕಳುಹಿಸಿಕೊಟ್ಟನು. ಹೀಗೆ ಕೃಷ್ಣನು ರಾಜಸ್ಯೆಯನ್ನು ಕರೆದುಕೊಂಡು ದ್ವಾರಕೆಗೆ ಹೊರಟು ಬರುತ್ತಿರುವಾಗ, ಹಿಂದೆ ಇದೇಕಾರಕ್ಕಾಗಿ ಪ್ರಯತ್ನಿಸಿ ಆಶಾಭಂಗಹೋಂ ದಿದ ಕೆಲವು ರಾಜರು ದಾರಿಯಲ್ಲಿ ಕೃಷ್ಣನನ್ನು ತಡೆದರು. ಆಗ ಅರ್ಜುನನು ತನ್ನ ಗಾಂಡೀವಧನುಸ್ಸನ್ನು ತೆಗೆದುಕೊಂಡು, ಸಿಂಹವು ಕ್ಷುದ್ರಮೃಗಗ ಳನ್ನು ಹೇಗೋ ಹಾಗೆ ಅವರೆಲ್ಲರನ್ನೂ ಜಯಿಸಿ ಓಡಿಸಿಬಿಟ್ಟನು. ಕೃಷ್ಣನೂ ಸುಖವಾಗಿ ಆ ಬಳುವಳಿಗಳೊಡನೆ ದ್ವಾರಕೆಗೆ ಬಂದು ಅಲ್ಲಿ ಸತ್ಯಾದೇವಿ ಯೊಡನೆ ಸಂತೋಷದಿಂದ ರವಿಸುತಿದ್ದನು. ಓ ಪರೀಕ್ಷಿದ್ರಾಜಾ ! ಆದರಿಂದಾಚೆಗೆ ಕೃಷ್ಣನು, ಭದ್ರೆಯೆಂಬ ಮ ತೊಬ್ಬಳನ್ನು ಮದಿವೆಮಾಡಿಕೊಂಡನು. ಈ ಭದ್ರೆಯೆಂಬವಳು ಈತನಿಗೆ ಅತ್ತೆಯಾದ ಶ್ರುತಕೀರ್ತಿಯೆಂಬವಳ ಮಗಳು. ಆಕೆಯ ತಂದೆ ಕೇಕಯ ರಾಜನು. ಅವಳಿಗೆ ಸಂತರ್ದನನೇ ಮೊದಲಾದ ಕೆಲವುಮಂದಿ ಸಹೋದರ ರಿದ್ದರು. ಆ ಸಹೋದರರೆಲ್ಲರೂ ಮನಃಪೂರೈಕವಾಗಿಯೇ ಕೃಷ್ಣನಿಗೆ ಆಕೆಯನ್ನು ಕೊಟ್ಟು ವಿವಾಹಮಾಡಿದರು.