ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೯.] ದಶಮಸ್ಕಂಧವು. ೨೧೫೯ ಅದರಿಂದಾಚೆಗೆ ಕೃಷ್ಣನು, ಗರುಡನು ಅಮ್ಮತವನ್ನು ಹೇಗೋಹಾಗೆ ಮದ್ರರಾಜನ ಮಗಳಾದ ಲಕ್ಷಣೆಯೆಂಬ ಕನ್ಯಾರತ್ನ ವನ್ನು ತನ್ನ ಸಾಹಸ ದಿಂದ ಕೈವಶಮಾಡಿಕೊಂಡು ಅವಳನ್ನೂ ಮದಿವೆಯಾದನು. ಓ ಪರೀ ಕಿದ್ರಾಜಾ ! ಹೀಗೆಯೇ ಕೃಷ್ಣನಿಗೆ, ಇನ್ನೂ ಸಾವಿರಾರುಮಂದಿ ಪತ್ನಿ ಯರಾದರು. ಭೂದೇವಿಯ ಮಗನಾದ ನರಕಾಸುರನನ್ನು ಕೊಂದು, ಅವನ ಸೆರೆಯಲ್ಲಿದ್ದ ಅನೇಕಸುಂದರೀಮಣಿಯರನ್ನೂ ತಾನೇ ವಿವಾಹಮಾಡಿಕೊಂ ಡನು, ಇದು ಐವತ್ತೆಂಟನೆಯ ಅಧ್ಯಾಯವು. w+ ನರಕಾಸುರವಧೆ, ww ಆಗ ಪರೀಕ್ಷಿದ್ರಾಜನು ಶುಕಮುಸಿಯನ್ನು ಕುರಿತು, “ಓ ಮುನೀಂ ದ್ರಾ ! ಕೃಷ್ಣನು ನರಕಾಸುರನನ್ನು ಕೊಂದ ಕಾರಣವೇನು? ಆ ನರಕಾ ಸುರನು ಯಾವಾಗ, ಯಾವ ಕಾರಣಕ್ಕಾಗಿ ಸ್ತ್ರೀಯರನ್ನು ಸೆರೆಯಲ್ಲಿರಿಸಿದ್ದ ನು ? ಕೃಷ್ಣನು ಅಲ್ಲಿ ತೋರಿಸಿದ ಪರಾಕ್ರಮವೆಂತದು?” ಎಂದನು. ಅದಕ್ಕೆ ಶುಕಮುನಿ ಯು ರಾಜೇಂದ್ರಾ ! ಕೇಳು! ಆ ನರಕಾಸುರನ ಪರಾಕ್ರಮವು ಮಹಾದ್ಭುತವಾದುದು. ಒಮ್ಮೆ ಆತನು, ವರುಣನ ರಾಜಚಿಹ್ನ ವಾದ ಚಕ್ರವನ್ನೂ, ಅದಿತಿದೇವಿಯ ಕಿವಿಯೋಲೆಗಳನ್ನೂ ಬಲಾತ್ಕಾರದಿಂದ ಕಿತ್ತು ತಂದನು. ಮೇರುಪವ್ವತದಲ್ಲಿದ್ದ ಮಣಿಪರತವೆಂಬ ಸ್ಥಾನ ವನ್ನು ಅಲ್ಲಿಂದ ಸಾಗಿಸಿಬಿಟ್ಟನು. ದೇವೇಂದ್ರನು ಆ ನರಕಾಸುರನ ದು ಸ್ಟೇಷ್ಮೆಗಳನ್ನು ನೋಡಿ ಸಹಿಸಲಾರದೆ, ಕೃಷ್ಣನಿಗೆ ತಿಳಿಸಲು, ಕೃಷ್ಣನು * ತನ್ನ ಪತ್ನಿ ಯಾದ ಸತ್ಯಭಾಮೆಯನ್ನೂ ತನ್ನೊಡನೆ ಕರೆದುಕೊಂಡು,ಗರು

  • ಇಲ್ಲಿ ಕೃಷ್ಣನು ಸತ್ಯಭಾಮೆಯನ್ನು ತನ್ನೊಡನೆ ಕರೆದುಕೊಂಡು ಹೋ ಗುವುದಕ್ಕೆ ಮೂರುಕಾರಣಗಳುಂಟು, ಯುದ್ದ ದರ್ಶನಕ್ಕಾಗಿ ಕುತೂಹಳಪಡುತಿದ್ದ ಆಕೆಯ ಮನಸ್ಸಂತೋಷಾರವೆಂಬುದೊಂದು, ಅವಳು ಭೂದೇವಿಯ ಅಂಶಭೂತೆ ಯಾದುದರಿಂದ, ಅವಳ ಅನುಜ್ಞೆಯನ್ನು ಪಡದೇ ಭೂಪತ್ರನಾದ ನರಕಾಸುರನನ್ನು ಕೊಲ್ಲಬೇಕೆಂಬುದೊಂದು, ಅವಳಿಗೆ ಪಾರಿಜಾತವನ್ನು ತರಿಸಿಕೊಂಡುವುದೊಂದು. ಈ ಮೂರು ಕಾರಣಗಳನ್ನು ಹೇಳುವರು, ನರಕಾಸುರನ ಪಟ್ಟಣಕ್ಕೆ ಅಭೇದ್ಯ