ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬೦ ಶ್ರೀಮದ್ಭಾಗವತವು [ಅಧ್ಯಾ ೫೯ ಡಾರೂಢನಾಗಿ ಆ ನರಕಾಸುರನ !ರಾಜಧಾನಿಯಾದ ಪ್ರಾಗೈತಿಷಪುರ ಕ್ಕೆ ಬಂದನು. ಓ ಪರೀಕ್ಷಿದ್ರಾಜಾ ! ಆ ಪಟ್ಟಣದ ಸನ್ನಿವೇಶವಾದರೋ ಅದ್ಭುತವಾದುದು, ಗಿರಿದುರ್ಗ, ಜಲದುರ್ಗ, ಅಗ್ನಿ ದುರ್ಗ, ಶಸ್ತ್ರದು ರ್ಗ, ವಾಯುದುರ್ಗಗಳೆಂಬ ಐದುಬಗೆಯ ದುರ್ಗಗಳಿಂದ ಆ ಪಟ್ಟಣವು ಎಂತವರಿಗೂ ಪ್ರವೇಶಿಸಲಸಾಧ್ಯವಾಗಿರುವುದು, ಮತ್ತು* ಮುರಪಾಶಗಳೆಂ ಬ ಸಾವಿರಾರುಪಾಶಗಳು ಆ ಪಟ್ಟಣದ ಸುತ್ತಲೂ ಭಯಂಕರವಾಗಿ ಸುತ್ತಿಕೊಂಡಿರುವುವು. ಹೀಗೆ ಎಂತವರಿಗೂ ದುರ್ಭೇದ್ಯವಾದ ಆ ನರಕಾ ಸುರನ ಪಟ್ಟಣವನ್ನು ಪ್ರವೇಶಿಸುವಾಗ, ಕೃಷ್ಣನು ಮೊದಲು ಅದರ ಸುತ್ತಿನ ಗಿರಿದುರ್ಗಗಳನ್ನು ತನ್ನ ಗದೆಯಿಂದ ಭೇದಿಸಿದನು, ಅದರಿಂದಾ ಚೆಗೆ ಕ್ರಮವಾಗಿ ಆ ಪಟ್ಟಣದ ಶಸ್ತಾವರಣಗಳನ್ನು ತನ್ನ ಬಾಣಗಳಿಂದ ಲೂ, ಆಗ್ನಾವರಣವನ್ನು ತನ್ನ ಚಕ್ರದಿಂದಲೂ, ಜಲಾವರಣ ವನ್ನೂ , ವಾತಾವರಣವನ್ನೂ , ಮುರಪಾಶಗಳನ್ನೂ ತನ್ನ ಕತ್ತಿಯಿಂದಲೂ ಭೇದಿಸಿದನು, ಆಮೇಲೆ ತನ್ನ ಮಹಾಗಣೆಯಿಂದ ಆ ಪಟ್ಟಣದ ಸುತ್ತಿನ ಪ್ರಾಕಾರಗಳನ್ನು ಭೇದಿಸಿ,ಮುಂದೆ ಹೋಗಿ ,ತನ್ನ ಪಾಂಚಜನ್ಯವೆಂಬ ಶಂಖ ವನ್ನು ಧ್ವನಿಮಾಡಿದನು. ಈ ಶಂಖಧ್ವನಿಯಿಂದ, ಅಲ್ಲಿನ ಬೇರೆ ಬೇರೆ ಯಲ ತ್ರದ ಕಟ್ಟುಗಳೆಲ್ಲವೂ ಸಡಿಲಿದುವು. ಮುರನರಕಾದಿಗಳ ಹೃದಯವೂ ಭೇಟಿ ಸುವಂತಾಯಿತು. ಪ್ರಳಯ ಕಾಲದ ಸಿಡಿಲಿನಂತೆ ಭಯಂಕರವಾದ ಈ ಶಂಖ ಧ್ವನಿಯನ್ನು ಕೇಳಿದೊಡನೆ, ಆ ಪಟ್ಟಣದಲ್ಲಿ ಅದುವರೆಗೆ ನಿಂತ ನಾಗಿ ಮಲಗಿದ್ದ ಐದುತಲೆಯುಳ್ಳ ಮುರಾಸುರನೆಂಬ ರಾಕ್ಷಸನು, ತಟ್ಟನೆ ಎಚ್ಚರ ಗೋಂಡು, ತಾನು ಮಲಗಿದ್ದ ಜಲಶಯ್ಕೆಯಿಂದ ಮೇಲೆದ್ದು ಬಂದನು. ಕಾಲ ಸೂಯ್ಯನಂತೆಯೂ, ಕಾಲಾಗ್ರಿ ಯಂತೆಯೂ ದುಸ್ಸಹವಾದ ತೇಜಸ್ಸುಳ್ಳ ಆ ರಾಕ್ಷಸನು, ತನ್ನ ಐದುಮುಖಗಳಿಂದ ಮೂರುಲೋಕವನ್ನೂ ಒಂದೇ ಗಳಾದ ಐದುದುರ್ಗಗಳಿದ್ದುದರಿಂದ, ಅದನ್ನು ದಾಟುವುದಕ್ಕಾಗಿ ಗರುಡಾರೂಢ ನಾಗಿ ಹೋದುದು.

  • ಮುರ ಪಾಶಗಳೆಂದರೆ ಮರಾಸುರನಿಂದ ನಿರ್ಮಿತಗಳಾದ ಪಾಶಗಳು, ಇವು, . ಸಮೀಪಕ್ಕೆ ಬಂದ ಶತ್ರುಗಳ ಮೈಗೆ ಬಲವಾಗಿ ಸುತ್ತಿಕೊಂಡು, ಅವರನ್ನು ಕೆಡಹಿ ಕೊಲ್ಲುತಿದ್ದುವು.