ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೩ ಶ್ರೀಮದಾ ಗವತವ - [ಅಧ್ಯಾ. ೫೯, ಮೇತನಾದ ಶ್ರೀ ಕೃಷ್ಣನನ್ನು ಅನೇಕವಿಧವಾಗಿ ಸತ್ಕರಿಸಿ ಪೂಜಿಸಿದರು. ಅಲ್ಲಿ ಕೃಷ್ಣನು ತನ್ನ ಪ್ರಿಯಪತ್ನಿ ಯಾದ ಸತ್ಯಭಾಮೆಯ ಪ್ರೇರಣೆಯಿಂದ ನಂದನವನದಲ್ಲಿದ್ದ ಪಾರಿಜಾತವೃಕ್ಷವನ್ನು ಕಿತ್ತು ಗರುಡನಮೇಲೇರಿಸಿ ಕೊಂಡು ಹಿಂತಿರುಗಿದನು. ಇದನ್ನು ನೋಡಿ ಸಹಿಸಲಾರದೆ ಇಂ ದ್ರಾದಿದೇವತೆಗಳೆಲ್ಲರೂ ಇದಿರಿಸಿ ನಿಲ್ಲಲು, ಅವರೆಲ್ಲರನ್ನೂ ಪರಾಭವಿಸಿದನು. ಆ ಪಾರಿಜಾತವೃಕ್ಷವನ್ನು ಸತ್ಯಭಾಮಾದೇವಿಯ ಗೃಹೋದ್ಯಾನದಲ್ಲಿ ನಡಿಸಿ ದನು, ನಂದನವನದಲ್ಲಿದ್ದ ಭಮರಗಳೆಲ್ಲವೂ ಕೂಡ, ಆ ವೃಕ್ಷದ ವಾಸನೆ ಗಾಗಿ ಅದನ್ನೇ ಹಿಂಬಾಲಿಸಿ ಬಂದುಬಿಟ್ಟುವು, ಕೊನೆಗೆ ಪರಾಜಿತನಾದ ಇ೦ ದ್ರನು,ಕೃಷ್ಣನಲ್ಲಿಯೇ ಶರಣಾಗತನಾಗಿ,ಅವನ ಪಾದಗಳನ್ನು ಹಿಡಿದು ನಮ ಸ್ಕರಿಸಿ, ದೇವತೆಗಳಿಗೆ ಸಾಭೀಷ್ಟಪ್ರದವಾದ ಆ ಪಾರಿಜಾತವನ್ನು ಹಿಂತಿ ರುಗಿಕೊಡಬೇಕೆಂದು ದೈನ್ಯದಿಂದ ಯಾಚಿಸಿದಮೇಲೆ, ಕೃಷ್ಣನು ಆದನು ಇಂದ್ರನಿಗೆ ಹಿಂತಿರುಗಿಕೊಟ್ಟುಬಿಟ್ಟನು. ಇದರಿಂದ ಇಂದ್ರನು ಕೃತಾರ ನಾಗಿ ಸಂತೋಷದಿಂದಿದ್ದನು. ಓ ಪರೀಕ್ಷಿದ್ರಾಜಾ ! ಆ ಇಂದ್ರಾ ದಿದೇವತೆಗಳ ಮೌಡ್ಯವನ್ನು ನೋಡಿದೆಯಾ ? ಅಲ್ಪವಾದ ಆ ಪಾರಿಜಾ ತವೃಕ್ಷಕ್ಕಾಗಿ, ಪರಮಪುರುಷಾ‌ಪ್ರದನಾದ ಕೃಷ್ಣನೊಡನೆ ವಿರೋಧವ ನ್ನು ಬೆಳೆಸಿದುದಲ್ಲದೆ, ಆ ಕೃಷ್ಣನಲ್ಲಿ ಶರಣಾಗತಿಯನ್ನು ಮಾಡಿ, ಅವನು ಪ್ರಸನ್ನನಾಗಿರುವಾಗಲೂ, ಅವನಿಂದ ತಾವು ಪಡೆಯಬೇಕಾದ ಉತ್ತಮ ಪುರುಷಾರವೇನೆಂಬುದನ್ನು ತಿಳಿಯದೆ, ಆ ಪಾರಿಜಾತವೃಕ್ಷವು ಸಿಕ್ಕಿದಮಾ ತ್ರಕ್ಕೆ ಸಂತುಷ್ಟರಾಗಿ ಹೊರಟುಹೋದರು. ಇದು ತಮೋಗುಣಜನ್ಯವಾದ ಅಜ್ಞಾನವಲ್ಲದೆ ಬೇರೇನು ? ಅದು ಹಾಗಿರಲಿ! ಕೃಷ್ಣನು ನರಕಾಸುರನ ಗೃಹದಿಂದ ಹದಿನಾರುಸಾವಿರಮಂದಿ ರಾಜಕಯರನ್ನೂ ದ್ವಾರಕೆಗೆ ಕಳುಹಿಸಿದ್ದನಲ್ಲವೆ ? ಅವರೆಲ್ಲರಿಗೂ ತನ್ನ ಸಂಕಲ್ಪಶಕ್ತಿಯಿಂದ ಬೇರೆಬೇರೆ ಅರಮನೆಗಳನ್ನು ಮಾಡಿ,ಅವರನ್ನು ಪ್ರತ್ಯೇ ಕವಾಗಿ ಇರಿಸಿದ್ದನು. ತಾನೂ ಅಷ್ಮೆ ಆಕೃತಿಗಳನ್ನು ತಾಳಿ, ಶುಭಮುಹೂ ರ್ತದಲ್ಲಿ ಅವರನ್ನು ವಿವಾಹಮಾಡಿಕೊಂಡು, ಆಯಾಮನೆಗಳಲ್ಲಿ ಅವರವ ರೊಡನೆ ವಿಹರಿಸುತಿದ್ದನು.ಹೀಗೆ ಏಕಕಾಲದಲ್ಲಿ ಅನೇಕರೂಪಗಳನ್ನು ತಾಳಿ,