ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೯.) ದಶಮಸ್ಕಂಧವು. ೨೧೬೭ ಆ ಸ್ತ್ರೀಯರೊಬ್ಬೊಬ್ಬರ ಗೃಹದಲ್ಲಿಯೂ ಯಾವಾಗಲೂ ನೆಲೆಗೊಂಡು, ಪ್ರಾಕೃತಜನದಂತೆ ಕುಟುಂಬ ಧರವನ್ನಾಚರಿಸುತ್ತಿದ್ದರೂ, ಆ ಕೃಷ್ಣನು ತನ್ನ ಅಸಾಧಾರಣ ದಿವ್ಯ ಪ್ರಭಾವವನ್ನು ಬಿಡದೆ ತಾನು ನೈಜಾನಂದ ಸರಿ ಪೂರ್ಣನಾಗಿದ್ದರೂ, ಆ ಮನೆಗಳಲ್ಲಿರುವ ಈಡು ಜೊಡಿಲ್ಲದ ಭೋಗ ಸಾಮಗ್ರಿಗಳಿಂದ ಆನಂದಿಸುವಂತೆ ನಟಿಸುತ್ತಿದ್ದನು. ಓ ಪರೀಕ್ಷಿದ್ರಾಜಾ ! ಹೀಗೆ ಆ ಕೃಷ್ಣನು, ಅನೇಕರೂಪಗಳಿಂದ ಆ ಸ್ತ್ರೀಯರೊಡನೆ ಕಲೆತು ಅವರನ್ನು ಯಾವಾಗಲೂ ಸಂತೋಷಗೊಳಿಸುತಿದ್ದುದು ಅವನ ಮಹಿಮೆಗೆ ಒಂದು ವಿಶೇಷವೆಂದು ತಿಳಿಯಬೇಡ ! ಏಕೆಂದರೆ, ಆತನು ತನ್ನ ಭಕ್ತರಿಗೆ ಅವರವರ ಇಷ್ಟಾನುಸಾರವಾದ ರೂಪಗಳಿಂದ ಗೋಚರಿಸತಕ್ಕವನು. ಇದ ಲ್ಲದೆ, ಯೋಗೀಶ್ವರನಾದ ಆ ಕೃಷ್ಣನು ಸತ್ಕಾಂತರಾತ್ಮನಾದುದರಿಂದ ಯಾವಾಗಲೂ, ಎಲ್ಲಾ ವಸ್ತುಗಳ ಒಳಗೂ, ಹೊರಗೂ ವ್ಯಾಪಿಸಿ ರತಕ್ಕವನು.ಎಲ್ಲರ ಹೃದಯದಲ್ಲಿಯೂಸದಾನೆಲೆಗೊಂಡಿರುವವನು.ಭಕ್ತಿಪ ರಿಪಾಕವುಳ್ಳವರಿಗೆ, ಒಳಗೂ, ಹೊರಗೂ ನಾನಾಕಡೆಗಳಲ್ಲಿಯೂ ನೂರಾರು ರೂಪಗಳಿಂದ ಆಗಾಗ ಗೋಚರಿಸತಕ್ಕವನು.ಹೀಗೆ ಸತ್ವವ್ಯಾಪಿಯಾದ ಆಭ ಗವಂತನ ಸಮಾಗಮವನ್ನು ಈಗ ಈ ಸ್ತ್ರೀಯರಿಗೆ ಹೊಸದೆಂದು ಹೇಳ ಬಹುದೆ ? ಹೀಗೆ ಬ್ರಹ್ಮಾದಿಗಳಿಗೂ ಅಗೋಚರನಾದ ಆಕೃಷ್ಣನೇ ತಮಗೆ ಕೈಹಿಡಿದ ಪತಿಯಾಗಿದ್ದು, ತಮ್ಮನ್ನು ಸಂತೋಷಪಡಿಸುತ್ತಿದ್ದಾಗ, ರಾಜ ಕನೈಯರ ಭಾಗ್ಯವನ್ನೇನೆಂದು ಹೇಳಬಹುದು ? ಆ ಸ್ತ್ರೀಯರೆಲ್ಲರೂ, ಸಾಕ್ಷಾ ಲಕ್ಷ್ಮಿನಾಥನೇ ತಮಗೆ ನಾಥನಾದುದರಿಂದ ಪರಮಾನಂದಭರಿತರಾಗಿ, ಎಣೆಯಿಲ್ಲದ ಅನುರಾಗದಿಂದಲೂ, ನಗೆನೋಟಗಳಿಂದಲೂ, ದೇಹಸ್ಪರ್ಶದಿಂ ದಲೂ, ಪ್ರಿಯವಾಕ್ಯಗಳಿಂದಲೂ ಅವನನ್ನು ಸಂತೋಷಪಡಿಸುತಿದ್ದರು. ನೂರಾರುಮಂದಿ ಗೌಡಿಯರು ತಾವು ಹೇಳಿದ ಕೆಲಸವನ್ನು ಮಾಡುವುದಕ್ಕೆ ಕೈಕಟ್ಟಿ ನಿಂತಿದ್ದಾಗಲೂ,ಅವರುತಮ್ಮ ಕೈಯಿಂದತಾವೇ ಕೃಷ್ಣನಿಗೆ ದಾಸ್ಯ ವನ್ನು ಮಾಡುತ್ತಿದ್ದರು. ಆಕೃಷ್ಣನನ್ನು ಕಂಡೊಡನೆ ಇದಿರೆದ್ದು ಬಂದು ಕೈ 137 B.