ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬೮ ಶ್ರೀಮದ್ಭಾಗವತವು [ಅಧ್ಯಾ, ೩೦, ಕೊಟ್ಟು ಕರೆತರುವುದು! ಸುಖಾಸನವನ್ನು ತಂದಿಡುವುದು ! ಆರ್ಫ್ಯುಪಾ ದ್ಯಾದಿಗಳನ್ನು ತಂದೊಪ್ಪಿಸುವುದು' ತಾಂಬೂಲವನ್ನು ಮಡಿಸಿಕೊಡುವುದು! ಕಾಲೊತ್ತುವುದು, ಬೀಸುವುದು, ಹೂಗಂಧಗಳನ್ನು ತಂದು ಅವನ ದೇಹವನ್ನ ಲಂಕರಿಸುವುದು, ತಲೆಬಾಚುವುದು, ಹಾಸಿಗೆಹಾಸುವುದು, ಎಣ್ಣೆಯೊತ್ತಿ ಅ Wಂಗನವನ್ನು ಮಾಡಿಸುವುದು, ಉಪಹಾರಗಳನ್ನು ತಂದಿಡುವುದು, ಇವೇನೊ ದಲಾದ ಉಪಚಾರಗಳನ್ನೆಲ್ಲಾ ತಾವಾಗಿಯೇ ನಡೆಸುತಿರು, ಇಲ್ಲಿಗೆ ಐವ ತೊಂಭತ್ತನೆಯ ಅಧ್ಯಾಯವು. w+4 ರುಕ್ಕಣೀಕೃಷ್ಣರ ವಿನೋದಸಂಭಾವು ನಗಳು.++ ಓ ಪರೀಕ್ಷಿಬಾಜಾ ! ಅದರಿಂದಾಚೆಗೆ ಒಮ್ಮೆ ರಕ್ರಿಣೀದೇವಿಯು, ಮಂಚದಮೇಲೆ ಸುಖವಾಗಿ ಕುಳಿತಿದ್ದ ತನ್ನ ಪತಿಯಾದ ಕೃಷ್ಣನನ್ನು ಬೀಸ ಣಿಗೆಯಿಂದ ಬೀಸು, ತನ್ನ ಸಖಜನರಿಂದಲೂ ಅವನಿಗೆ ಬೇಕೆಬೇಕಾದ ಉಪಚಾರಗಳನ್ನು ಮಾಡಿಸುತಿದ್ದಳು. ಯಾವನು ತನ್ನ ಲೀಲಾರ್ಥವಾಗಿಯೇ ಈ ಸಮಸ್ಯಜಗತ್ತಿನ ಸೃಷ್ಟಿಸ್ಥಿತಿಸಂಹಾರಗಳನ್ನು ನಡೆಸುತ್ತಿರುವನೋ, ಯಾವನು ಜನಾಟಗಳಿಲ್ಲದವನಾಗಿದ್ದರೂ, ಲೋಕದಲ್ಲಿ ಧರಮಾದೆಯ ನ್ನು ರಕ್ಷಿಸುವುದಕ್ಕಾಗಿ, ಯದುಕುಲದಲ್ಲಿ ಕ್ಷತ್ರಿಯಕುಮಾರನಾಗಿ ಅವತರಿ ನಿರುವನೋ, ಅಂತಹ ಸಾಕ್ಷಾತ್ಪರಮಪುರುಷನು, ಈ ರುಕ್ಕಿಣಿಯ ಉಪಚಾರ ಗಳನ್ನು ಸಂತೋಷದಿಂದ ಕೈಕೊಳ್ಳುತ್ತ, ಮಂಚದಮೇಲೆ ಕುಳಿತಿದ್ದನು. ಆ ಶಯನಗೃಹದ ಸೊಬಗನ್ನು ಕೇಳಬೇಕೆ?ವಿಚಿತ್ರವಾದ ಮೇಲುಕಟ್ಟುಗಳು! ಅದರ ಸುತ್ತಲೂ ಮುತ್ತಿನ ಜಾಲರಿಗಳು ! ಗೋಡೆಯಸುತ್ತಲೂ ರತ್ತ ದೀಪ ಗಳು ! ಅಲ್ಲಲ್ಲಿ ಭ್ರಮರಝಂಕಾರವಿಶಿಷ್ಟವಾಗಿ ತೂಗಾಡುತ್ತಿರುವ ಮಲ್ಲಿ ಗೆಯ ಹಾರಗಳು ! ಬೆಳಗಾಗುತ್ತಿರುವಾಗ ಸಂಧ್ಯಾರಾಗದಿಂದ ಕೂಡಿ ದ ಚಂದ್ರಕಿರಣಗಳು ಗವಾಕ್ಷರಂಧಗಳಿಂದ ಹೊರಟುಬಂದು, ಆ ಮನೆಯ ಅಂಗಳಕ್ಕೆ ಆಪೂತ್ವಶೋಭೆಯನ್ನು ಬೀರುತ್ತಿರುವುವು! ಗೃಹೋದ್ಯಾ