ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೦.] ದಶಮುಸ್ಕಂಧವು. ೨೧೬೯ ನದಲ್ಲಿರುವ ಪಾರಿಜಾತವೃಕ್ಷದ ಸುವಾಸನೆಯೊಡನೆ ಕಲೆತು, ಬೆಳಗಿನಗಾಳಿ ಯು ತಣ್ಣಗೆ ಬೀಸುತ್ತಿರುವುದು. ಆಗರುಗಂಧವುಳ್ಳ ಧೂಪದ ಹೊಗೆಯು ಗವಾಕ್ಷರಂಧ್ರಗಳಿಂದ ಹೊರಟುಬರುತ್ತಿರುವುದು.ಇಂತಹ ದಿವ್ಯಭವನದಲ್ಲಿ, ಹಾಲಿನ ನೊರೆಯಂತೆ ಶುಭವಾದ ಮೇಲುಹೊದ್ದಿಕೆಯುಳ್ಳ ಮಂಚದಮೇ ಲೆ, ಕೃಷ್ಣನು ಸಂತೋಷದಿಂದ ಕುಳಿತಿದ್ದನು. ಆಗ ರುಕ್ಷ್ಮಿಣೀದೇವಿಯು. ಸಕಲಜಗದೀಶ್ವರನಾದ ಆ ತನ್ನ ಪತಿಯನ್ನು ಪಚರಿಸುವುದಕ್ಕಾಗಿ, ತನ್ನ ಸಖಿ ಯ ಕೈಯಲ್ಲಿದ್ದ ಭತ್ತ ಬಂಡವುಳ್ಳ ಚಾಮರವನ್ನು ತಾನೇ ಕೈಗೆ ತೆಗೆದುಕೊಂ ಡು, ಕೃಷ್ಣನಿಗೆ ಶ್ರಮಪರಿಹಾರವಾಗುವಂತೆ ಬೀಸತೊಡಗಿದಳು,ಅವಳು ಚಾ ಮರವನ್ನು ಹಿಡಿದು ಬೀಸುತ್ತಿರುವಾಗ,ಅವಳ ಕೈಬಳೆ ಮತ್ತು ಕಾಲಂದುಗೆಗಳ ಫಲಧ್ವನಿ ! ಬೆರಳುಗಳಲ್ಲಿ ರತ್ನಖಚಿತಗಳಾದ ಉಂಗುರಗಳ ಕಾಂತಿ! ಸ್ತ್ರ ನಾಗ್ರದಲ್ಲಿ ಕುಂಕುಮದ ಬಣ್ಣದಿಂದ ಕೂಡಿ ತೂಗಾಡುತ್ತಿರುವ ಮುತ್ತಿನ ಸರಗಳು ! ನಿತಂಬಪ್ರದೇಶದಲ್ಲಿ ಝಗಝಗಿಸುತ್ತಿರುವ ರತ್ನ ದ ಡಾಬು! ಇವುಗಳಿಂದ ಅಪೂಶೋಭೆಯನ್ನು ಬೀರುತ್ತಿದ್ದಳು. ಓ ಪರೀಕ್ಷಿದ್ರಾಜಾ! ಆ ರುಕ್ಷ್ಮಿಣಿಯು ಸಾಕ್ಷಾನ್ಮಹಾಲಕ್ಷ್ಮಿ ಯಲ್ಲದೆ ರಾಜಕುಲದವಳಲ್ಲ!ಆ ಭಗವಂ ತನು ಯಾವಯಾವ ಅವತಾರದಲ್ಲಿ ಯಾವಯಾವ ರೂಪಗಳನ್ನು ಕೈಕೊ ಳ್ಳುವನೋ, ಅದಕ್ಕೆ ತಕ್ಕಂತೆ ಅವಳೂ ಬೇರೆಬೇರೆ ಆಕಾರದಿಂದವತರಿಸತಕ್ಕ ವಳು. ಹೀಗೆ ತನಗೆ ಅನುರೂಪವಾದ ಮನುಷ್ಯರೂಪದಿಂದ ಜನಿಸಿ, ತನ್ನ ನ್ನು ವರಿಸಿದ ಮಹಾಲಕ್ಷ್ಮಿ ಸ್ವರೂಪಿಣಿಯಾದ ಆರುಸ್ಮಿಣಿಯನ್ನು ನೋಡಿ ಕೃಷ್ಣನುಮಂದಹಾಸದಿಂದ, ನಕ್ಕನು.ಮುಂಗುರುಳುಗಳಿಂದಲೂ,ಕಿವಿಯೋ ಲೆಗಳಿಂದಲೂ, ಕಂಠದಲ್ಲಿ ಪದಕಗಳಿಂದಲೂ, ಶೋಭಿತೆಯಾಗಿ,ಅಮೃತಧಾರೆ ಯಂತೆ ಮುಖದಲ್ಲಿ ಮಂದಹಾಸವನ್ನು ಬೀರುತ್ತ ನಿಂತಿದ್ದ ರುಕ್ಕಿಣಿಯನ್ನು ನೋಡಿ ಹೀಗೆಂದು ಹೇಳುವನು. ಓ ರುಕ್ಕಿಣಿ ! ನೀನಾದರೋ ರಾಜಕು ಲದಲ್ಲಿ ಹುಟ್ಟಿದವಳು, ಲೋಕಪಾಲರಂತೆ ಭಾಗ್ಯ ಸಮೃದ್ಧಿಯಿಂದ ಕೂಡಿದ ವರಾಗಿಯೂ, ಅದ್ಭುತಪರಾಕ್ರಮವುಳ್ಳವರಾಗಿಯೂ, ರೂಪ, ಕುಲ, ಔದಾ ಕ್ಯಾದಿಗಳಿಂದ ಮೇಲೆನಿಸಿದವರಾಗಿಯೂ ಇದ್ದ ಅನೇಕರಾಜಾಧಿರಾಜರು,ನಿನ್ನ ರೂಪಕ್ಕೆ ಮೋಹಿಸಿ, ತಾವಾಗಿ ನಿನ್ನನ್ನು ಪ್ರಾರ್ಥಿಸಿದರು! ಅದರಲ್ಲಿಯೂ