ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೦ ಶ್ರೀಮದ್ಭಾಗವತವು [ಅಞ್ಞಾ, 40. ಶಿಶುಪಾಲನೇನು ಸಾಮಾನ್ಯನೆ ? ಅವನ ಪರಾಕ್ರಮವೂ, ಪ್ರಖ್ಯಾತಿಯೂ ಅಪಾರವಾದುದು, ಮತ್ತು ಅವನು ಮೈಕೊಬ್ಬಿ ಕಾಮಮದದಿಂದಿದ್ದವನು. ಅವನ ಸೌಭಾಗ್ಯವನ್ನು ನೋಡಿಯೇ ನಿನ್ನ ಸಹೋದರರೂ,ನಿನ್ನ ತಾಯಿತಂ ದೆಗಳೂ ಅವನಿಗೇ ನಿನ್ನನ್ನು ಕೊಟ್ಟು ವಿವಾಹಮಾಡಬೇಕೆಂದು'ದೃಢಸಂಕಲ್ಪ ರಾಗಿದ್ದರು. ಅಂತವನನ್ನು ನೀನು ವರಿಸದೆ ಹೋದೆಯಲ್ಲ! ನಿನ್ನ ಹುಚ್ಚುತನ ವನ್ನೇನೆಂದು ಹೇಳಬಹುದು? ನಿನಗೆ ಸತ್ವವಿಧದಲ್ಲಿಯೂ ಅನುರೂಪ ರಾಗಿದ್ದ ಆ ರಾಜಾಧಿರಾಜರೆಲ್ಲರನ್ನೂ ನಿರಾಕರಿಸಿ ಬಂದೆಯಲ್ಲ ! ಎಲೆ ಸು ಭ್ರು ! ನಮ್ಮ ಸ್ಥಿತಿಯನ್ನು ನೋಡು! . ನಾವು ಆ ರಾಜರಿಗೆ ಭಯಪಟ್ಟಿ ಸಮುದ್ರಮಧ್ಯದ ಯಾವುದೋ ಒಂದು ದ್ವೀಪದಲ್ಲಿ ಅವಿತುಕೊಂಡಿರುವೆವು. ಇದಲ್ಲದೆ ಬಲಾಡ್ಯರಾದ ಆ ರಾಜರ ದ್ವೇಷಕ್ಕೂ ಪಾತ್ರರಾಗಿರುವೆವು, ನಮಗೆ ರಾಜಸಿಂಹಾಸನವನ್ನೇರುವುದಕ್ಕೂ ಯೋಗ್ಯತೆಯಿಲ್ಲ.ಹೀಗೆ ಯಾವವಿಧದಲ್ಲಿ ಯೂ ನಿನಗೆ ಅನುರೂಪನಲ್ಲದ ನನ್ನನ್ನು ಕೈಹಿಡಿದ ನಿನಗೆ ಯಾವವಿಧದಲ್ಲಿ ಸುಖವುಂಟು ? ಇದರಮೇಲೆ ನಮ್ಮ ಕುಲವೋ ಇಂತದೆಂದು ನಿರ್ಣಯಿಸು ವುದಕ್ಕೇ ಸಾಧ್ಯವಿಲ್ಲ. ನಮ್ಮ ಜಾತಿಯಾವುದೆಂದು ಯಾರಿಗೂ ತಿಳಿಯದು. ಕೆಲವರು ವಸುದೇವಪುತ್ರನೆಂದು ತಿಳಿದಿರುವರು, ಮತ್ತೆ ಕೆಲವರು ಗೊಲ್ಲ ನಾದ ನಂದನ ಮಗನೆಂದು ಹೇಳುವರು. ನಾವು ಆಗಾಗ ನಡೆಸಿದ ಕಾರ್ ಗಳೂ ಲೋಕವಿರುದ್ಧವಾಗಿಯೇ ತೋರುತ್ತಿರುವುವು. ಹೀಗೆ ಹದ್ದು ಮೀರಿ ನಡೆಯತಕ್ಕ ನಮ್ಮಂತವರನ್ನು ನಂಬಿದ ಸ್ತ್ರೀಯರಿಗೆ ಯಾವವಿಧದಲ್ಲಿ ಸುಖ ವುಂಟು?!ನಾವು ಯಾವುದಕ್ಕೂ ಗತಿಯಿಲ್ಲದ ಬಡವರು, ಅಂತಹ ಬಡಜನರ ಸ್ಟೇ ವಿಶೇಷವಾಗಿ ಪ್ರೀತಿಸತಕ್ಕವರು, ಸಾಮಾನ್ಯವಾಗಿ ಲೋಕದಲ್ಲಿ ಭಾಗ್ಯವಂತರು ನಮ್ಮನ್ನು ಮನಸ್ಸಿನಿಂದಲಾದರೂ ಸ್ಮರಿಸಲಾರರು. ಲೋಕದಲ್ಲಿ, ಕುಲದಲ್ಲಿಯೂ, ಐಶ್ವರದಲ್ಲಿಯೂ, ರೂಪದಲ್ಲಿಯೂ, ಸಮಾ ನರಾಗಿದ್ದವರಲ್ಲಿಯೇ ಪರಸ್ಪರಸ್ನೇಹವೂ, ವಿವಾಹಸಂಬಂಧವೂ ಚೆನ್ನಾಗಿ ಶೋಭಿಸುತ್ತಿರುವುದೇಕೊರತು, ಈ ವಿಷಯಗಳಲ್ಲಿ ತಾರತಮ್ಯವು ಕಂಡುಬಂ

  • ಯಯಾತಿಶಾಪದಿಂದ ಯಾದವಕುಲದವರಿಗೆ ರಾಜಸಿಂಹಾಸನವನ್ನೇರುವ ಅಹರ್ತೆಯಿಲ್ಲವೆಂದು ಪೂರಕಥೆ.