ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೪.] ಪ್ರಥಮಸ್ಕಂಧವು. ಯಾಗಾದಿಕರ್ಮಗಳಲ್ಲದೆ ಬೇರೆಯಲ್ಲವೆಂದು ನಿಶ್ಚಯಿಸಿಕೊಂಡನು. ಆ ವೇದ ಗಳೆಲ್ಲವೂ ಒಂದೇರೂಪವಾಗಿರುವುದನ್ನು ನೋಡಿ, ಅದನ್ನು ಬೇರ್ಪಡಿಸಿ ತಿಳಿಸು ವುದಕ್ಕಾಗಿ,ಋಕ್ಕು, ಯಜುಸ್ಸು, ಸಾಮ, ಅಥದ್ವಣಗಳೆಂಬ ನಾಲ್ಕು ವಿಭಾಗಗ ಳಾಗಿ ಅದನ್ನು ವಿಭಾಗಿಸಿಟ್ಟನು. ಇತಿಹಾಸಪುರಾಣಗಳನ್ನೂ ಬೇರೆಯಾಗಿ ವಿಭಾಗಿಸಿದನು. ಇದು ಐದನೆಯ ವೇದವೆನಿಸಿಕೊಂಡಿತು. ಹೀಗೆ ವಿಭಾಗಿಸಿಟ್ಟ ಮೇಲೆ ಅವೆಲ್ಲವನ್ನೂ ತನ್ನ ಶಿಷ್ಯರಿಗೆ ಉಪದೇಶಿಸಿದನು.ಆಶಿಷ್ಯರಲ್ಲಿ ಪೈಲನೆಂ ಬ ಮಹರ್ಷಿಯು ಮಗೈದವನ್ನೂಜೈಮಿನಿಯು ಸಾಮವೇದವನ್ನೂ ಗ್ರಹಿ ಸಿದನು. ವೈಶಂಪಾಯನನು ಯಜುಲ್ವೇದದಲ್ಲಿ ಪಾರಂಗತನಾದನು. ವರುಣ ಪುತ್ರನಾದ ಸುಮಂತುವೆಂಬವನು ಆಧರೂಣವೇದವನ್ನು ಗ್ರಹಿಸಿದನು. ನನ್ನ ತಂ ದೆಯಾದ ರೋಮಹರ್ಷಣನು'ಇತಿಹಾಸಪುರಾಣಗಳಲ್ಲಿ ಪಾರಂಗತನಾದನು. ಈ ಶಿಷ್ಯರೆಲ್ಲರೂ ಆಯಾ ವೇದಶಾಖೆಗಳೆಲ್ಲವನ್ನೂ ಶ್ರದ್ದೆಯಿಂದಪಠಿಸಿದರು. ಅವರಿಂದ ಅವರ ಶಿಷ್ಯ ಪ್ರಶಿಷ್ಯರುಗಳಿಗೂವ್ಯಾಪಿಸಿ, ಈಗಲೂ ಅನೇಕಶಾಖೆಗೆ ಳಾಗಿ ಹರಡಿರುವುವು. ಹೀಗೆ ಹೀನವತ್ಸಲನಾದ ವ್ಯಾಸಮಹಾಮುನಿಯು ಸಾ ಮಾನ್ಯವಾಗಿ ಮಂದಬುದ್ದಿಗಳಿಗೂಕೂಡ ಸುಲಭಗ್ರಾಹ್ಯವಾಗುವಂತೆ ವೇದ ಗಳನ್ನು ವಿಭಾಗಿಸಿಟ್ಟು ದರಿಂದಲೇ ವ್ಯಾಸನೆಂಬ ಪ್ರಸಿದ್ದಿಯನ್ನು ಹೊಂದಿದ ನು. ಆಮೇಲೆ ಈ ವ್ಯಾಸಮಹಾಮುನಿಯು ಸ್ತ್ರೀಯರಿಗೂ, ಶೂದ್ರರಿಗೂ, ಬ್ರಹ್ಮಚಯ್ಯಾಟಪಾಪಗಳನ್ನು ನಡೆಸಿದವರಿಗೂ ಈ ವೇದಗಳಲ್ಲಿ ಅಧಿಕಾರವಿಲ್ಲ ದುದನ್ನೂ , ಈ ವೈದಿಕಕರ್ಮಗಳಿಂದ ಸಿದ್ಧಿಸತಕ್ಕ ಶ್ರೇಯಸ್ಸಿಗೆ ಅವ ರು ಪಾತ್ರರಾಗದಿರುವುದನ್ನೂ ನೋಡಿ, ಅವರಿಗಾಗಿಯೇ ಭಾರತವೆಂಬ ಉ ಪಾಖ್ಯಾನವನ್ನು ರಚಿಸಿದನು. ಎಲೈ ಮಹರ್ಷಿಗಳೆ!ಹೀಗೆ ವೇದವ್ಯಾಸಮಹ ರ್ಷಿಯು ಸಮಸ್ತ ಜನರ ಶ್ರೇಯಸ್ಸಿಗಾಗಿ ಅನೇಕ ಕಾರ್ಯಗಳನ್ನು ನಡೆಸಿಟ್ಟ ರೂ, ಆತನ ಮನಸ್ಸಿಗೆ ಇನ್ನೂ ಸಮಾಥಾನವು ಹುಟ್ಟದೆಹೋಯಿತು. ತನ್ನ ಮನಸ್ಸಿಗೆ ಪೂರ್ಣವಾದ ಸಮಾಧಾನವುಂಟಾಗದಿದ್ದುದರಿಂದ, ಆ ಸರಸ್ವ ತೀನದೀತೀರದಲ್ಲಿ ರಹಸ್ಯವಾಗಿ ಕುಳಿತು, ತನ್ನ ತಾನು ಚಿಂತಿಸುವನು, ಆಹಾ! ನಾನು ದೃಢವಾದ ವ್ರತವನ್ನು ಹಿಡಿದು,ನಿಷ್ಕಪಟವಾದ ಮನಸ್ಸಿನಿಂದ, ಗು ರುಗಳನ್ನೂ, ಅಗ್ನಿ ಹೋತ್ರವನ್ನೂ ಪೂಜಿಸಿದೆನು. ವೇದಗಳನ್ನು ವಿಭಾಗಿಸಿಟ್ಟೆ