ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಥ್ಯಾ. ೫ } ಪ್ರಥದುಸ್ಕಂಧವು w+ ವಾಸ ನಾರದ ಸಂವಾದವು. ಹೀಗೆ ನಾರದನು ವ್ಯಾಸನಿಂದ ಯಥಾವಿಧಿಯಾಗಿ ಪೂಜಿಸಲ್ಪಟ್ಟ ಮೇಲೆ, ಅವರಿಬ್ಬರೂ ಸುಖಾಸೀನರಾಗಿದ್ದರು. ಆಗ ಮಹಾಕೀರ್ತಿವಂತನಾದ ನಾರದನು, ತನ್ನಿ ಡಿರಾಗಿ ಸುಖಾಸೀನನಾಗಿ ಕುಳಿತಿದ್ದ ವ್ಯಾಸಮಹರ್ಷಿ ಯನ್ನು ನೋಡಿ ಮಂದಹಾಸಪೂರ್ವಕವಾಗಿ ಎಲೈ ಋಷಿಶ್ರೇಷ್ಟನೆ ! ಓ ಮಹಾತ್ಮನೆ ! ನಿನ್ನ ಮನಸ್ಸು ನಿಂತವಾಗಿರುವುದಷ್ಟೆ ? ತಿಳಿಯಬೇಕಾದ ಧರ್ಮಗಳೆಲ್ಲವನ್ನೂ ತಿಳಿದಿರುವೆ ! ಲೋಕೋಪಕಾರಾಗ್ಗವಾಗಿ ಸಾರ್ಥಗ ಇನ್ನೂ ವಿವರಿಸತಕ್ಕ ಮಹಾದ್ಭುತವಾದ ಭಾರತವೆಂಬ ಗ್ರಂಥವನ್ನು ರಚಿ ಸಿದೆ ! ಇದರಿಂದಲೇ ನಿನ್ನ ಜ್ಞಾನವಿಶೇಷವು ಹೊರಪಡುವುದು. ಆದ್ಯಂತ ಶೂನ್ಯವಾಗಿರುವ ವೇದಗಳೆಲ್ಲವನ್ನೂ ಓದಿ, ಆ. ವೇದಾರ್ಥಗಳೆಲ್ಲವನ್ನೂ ವಿಚಾರಿಸಿರುವೆ ? ಹೀಗಿದ್ದರೂ ನೀನು ಕೃತಕೃತ್ಯನಲ್ಲದವನಂತೆ ಹೀಗೇಕೆ ಚಿಂತಿಸುತ್ತಿರುವೆ?” ಎಂದನು. ಅದಕ್ಕಾವ್ಯಾಸನು 'ಎಲೈ ಮುನೀಂದ್ರನೆ ! ನೀನು ಹೇಳಿದುದೆಲ್ಲವೂ ನಿಜವು. ಹಾಗಿದ್ದರೂ ನನ್ನ ಆತ್ಮವು ತೃಪ್ತಿಯಿಲ್ಲದೆ ಕಳವಳಿಸುತ್ತಿರುವುದು. ಇದಕ್ಕೆ ಕಾರಣವೇನೆಂದು ನನಗೇ ತೋರಲಿಲ್ಲ. ನೀನೋ ದಿವ್ಯಜ್ಞಾನವುಳ್ಳವನು. ಸಮಸ್ತಲೋಕಗಳಿಗೂ ಸೃಷ್ಟಿಕರ್ತನಾ ದ ಚತುರ್ಮುಖಬ್ರಹ್ಮನ ಶರೀರದಲ್ಲಿ ಸಾಕ್ಷಾತ್ತಾಗಿ ಹುಟ್ಟಿದವನು, ಸತ್ವ ಜ್ಞನು ಆದುದರಿಂದ ನಿನ್ನಿಂದಲೇ ನಾನು ಅದರ ಕಾರಣವನ್ನು ತಿಳಿಯಬೇಕಾ ಗಿರುವುದು. ನನ್ನ ಮನಸ್ಸಿಗೆ ತೃಪ್ತಿಯಿಲ್ಲದಿರುವುದಕ್ಕೆ ಕಾರಣವೇನೆಂಬುದನ್ನು ನಿನೇ ಯೋಚಿಸಿ ಹೇಳಬೇಕು. ಉತ್ತಮೋತ್ತಮನಾಗಿ, ಸರೂನಿಯಾಮಕನಾ ದ ಭಗವಂತನು, ಸತ್ಯಾದಿಗುಣಗಳ ಸಂಬಂಧವಿಲ್ಲದೆ ತನ್ನ ಸಂಕಲ್ಪ ಮಾತ್ರದಿಂ ದಲೇ ಸಮಸ್ತಲೋಕಗಳನ್ನೂ ಸೃಷ್ಟಿಸುವನು.ಅವುಗಳನ್ನು ತಾನೇರಕ್ಷಿಸುತ್ತಿ ರುವನು.ಕೊನೆಗೆ ತಾನೇ ಅವುಗಳನ್ನು ಸಂಹರಿಸುವನು. ಸತ್ಯಾಂತರಾಮಿಯಾ ದ ಆತನಿಗೆ ತಿಳಿಯದೆ ನಡೆಯತಕ್ಕ ವಿಷಯಗಳೆಂದೂ ಇಲ್ಲವು. ಅಂತಹ ಪರ ಮಪುರುಷನನ್ನೇ ನೀನು ಉಪಾಸನಮಾಡಿ ವಶಪಡಿಸಿಕೊಂಡವನಾದುದರಿಂದ, ಪ್ರಾಣಿಗಳಲ್ಲಿ ಅಂತರ್ಗತವಾದ ಸಮಸ್ತರಹಸ್ಯವನ್ನೂ ನೀನು ತಿಳಿಯಬಲ್ಲೆ! ಇದಲ್ಲದೆ ನೀನು ಸೂ‌ನಂತೆ ತ್ರಿಲೋಕಸಂಚಾರಿಯಾದುದರಿಂದ ಹೊರಗಿನ