ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು. [ಅಧ್ಯಾ. * ಹಿಡಿದರೆ ನಿನ್ನ ಬುದ್ಧಿಗೇ ಅದೊಂದುನನತೆಯನ್ನು ತೋರಿಸುವುದು ಮುಖ್ಯ ವಾಗಿ ನೀನು ಸಮಸ್ತಭೂತಗಳಿಗೂಹಿತವನ್ನು ಮಾಡಬೇಕೆಂದು ಪ್ರಯತ್ನಿಸಿ ಅವರಿಗೆ ಅಹಿತವನ್ನೇ ಮಾಡಿದಂತಾಯಿತು. ಹೇಗೆಂದು ಕೇಳುವೆಯಾ? ಜನರಿ ಗೆ ಸಹಜವಾಗಿಯೇ ಅರಕಾಮಗಳಲ್ಲಿ ಪ್ರೀತಿಯು ಹೆಚ್ಚು !ಈ ಪ್ರಯತ್ನದಲ್ಲಿ ಯೇ ಅವರು ತಾಪತ್ರಯಗಳಿಗೆ ಸಿಕ್ಕಿ ನರಳುತ್ತಿರುವರು, ಇಂತವರನ್ನು ಆ ದಾರಿಯಿಂದ ತಪ್ಪಿಸುವುದು ನಿನ್ನ ಮಖ್ಯಕಾಧ್ಯವಾಗಿದ್ದರೂ, ನೀನು ಅವರಿಗೆ ಆ ವಿಧಗಳಾದ ಅರ್ಥಕಾಮಗಳಲ್ಲಿಯೇ ಇನ್ನೂ ಅಭಿರುಚಿಯನ್ನು ಹೆಚ್ಚಿಸು ವಂತೆ, ಅವುಗಳಿಗೆ ಸಾಧಕಗಳಾದ ದರಗಳನ್ನು ಬೋಧಿಸುವುದಕ್ಕಾಗಿ ಭಾರತವನ್ನು ರಚಿಸಿದಂದಾಯಿತು. ಇದೇ ನಿನ್ನಿಂದ ನಡೆದ ದೊಡ್ಡ ತಪ್ಪು ! (ನಾನು ಹೇಳಿದ ಮಾತ್ರಕ್ಕೇನು ? ಜನರು ತಮ್ಮ ತಮ್ಮ ಅಭಿರುಚಿಯಿದ್ದಂತೆ ಪರಮಪುರುಷಾರ್ಥದಲ್ಲಿಯೇ ಪ್ರವರ್ತಿಸಬಾರದೆ? ನಾನೂ ಭಾರತದಲ್ಲಿ ಒಂ ದೊಂದು ಕಡೆಯಲ್ಲಿ ಅರ್ಧ ಕಾಮಗಳ ಹೇಯತ್ವವನ್ನು ತಿಳಿಸಿಯೇಇರುವೆ ನು ! ಇನ್ನು ನನ್ನಲ್ಲಿ ದೋಷವೇನು?' ಎಂದು ನೀನು ಸಮಾಧಾನವ ನ್ನು ಹೇಳಬಹುದು! ಎಲೈ ಮುನಿವರನೆ!ಅದುಹಾಗಲ್ಲ! ನೀನಾದರೋ ಲೋ ಕದಲ್ಲಿ ಸತ್ವಜ್ಞನೆಂದು ಹೆಸರುಗೊಂಡವನು. ಎಲ್ಲರೂ ನಿನ್ನಂತೆಯೇ ಸೂಕ್ಷ್ಮ ಜ್ಞಾನವುಳ್ಳವರಲ್ಲ! ಆದುದರಿಂದ ನೀನು ಭಾರತದಲ್ಲಿ ಧರ್ಮಾರ್ಥಕಾಮಗಳ ನ್ನೇ ವಿಶೇಷವಾಗಿ ವಿಸ್ತರಿಸಿ ಪ್ರತಿಪಾದಿಸಿರುವುದನ್ನು ನೋಡಿದರೆ, ಅಲ್ಪಜ್ಞ ರಾದ ಇತರಜನರು, ಅರ್ಥಕಾಮಗಳೇ ಉತ್ತಮಪುರುಷಾರ್ಥಗಳೆಂದೂ, ಆದ ನ್ನು ಕೈಗೂಡಿಸುವುದಕ್ಕಾಗಿ ನಡೆಸತಕ್ಕ ಧರ್ಮಗಳೇ ಉತ್ತಮಧರ್ಮಗಳೆಂ ದೂ ನಂಬುವರೇಹೊರತು ನೀನು ಎಲ್ಲಿಯೋ ಒಂದೆರಡು ಕಡೆಗಳಲ್ಲಿ ಅವುಗಳ ನ್ನು ಖಂಡಿಸಿದ್ದ ಮಾತ್ರಕ್ಕೆ, ಇದೇ ನಿನ್ನ ಮುಖ್ಯಾಭಿಪ್ರಾಯವೆಂಬುದನ್ನು ತಿಳಿ ದುಕೊಳ್ಳಲಾರರು.ಲೋಕದಲ್ಲಿ ಎಲ್ಲಿಯೂ ಕೆಲವು ನಿಪುಣಬುದ್ದಿಯುಳ್ಳವರು ಮಾತ್ರ ನಿವೃತ್ತಿಧರ್ಮನಿಷ್ಠೆಯಿಂದ ಆಭಗವಂತನ ಅಪಾರಮಹಿಮೆಗಳನ್ನು ಸುಖವಾಗಿ ತಿಳಿದುಕೊಳ್ಳಬಲ್ಲರು. ಅಂತವರು ಬಹಳವಿರಳರು ರಜಸ್ಸುಮೋದ ಲಾದ ಗುಣಗಳಿಂದ ಹುಟ್ಟಿದ ರಾಗಾದಿಗಳಲ್ಲಿ ಪ್ರವರ್ತಿಸಿ, ಆತ್ಮಸ್ವರೂಪ ಜ್ಞಾನವಿಲ್ಲದವರಿಗೆ ಆ ಪರಮಾತ್ಮನ ಮಹಿಮೆಗಳು ಸುಲಭವಾಗಿ ತಿಳಿಯಲಾ