ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಥ್ಯಾ. ೫.] ಪ್ರಥಮಸ್ಕಂಧವು. ರವು. ಈ ಅಜ್ಞತೆಯಿಂದ ಕೆಟ್ಟು ಹೋಗತಕ್ಕವರೇ ಲೋಕದಲ್ಲಿ ಬಹಳ ಮಂದಿಯಿರುವುದರಿಂದ ಅಂತವರೆಲ್ಲರಿಗೂ ಸುಲಭವಾಗಿ ತಿಳಿಯುವಂತೆ ಅರ್ಥಕಾಮಗಳಲ್ಲಿರುವ ನ್ಯೂನತೆಯನ್ನೂ , ಭಗವದ್ದು ನಾನುಭವವೇ ಮನು ಷ್ಯರಿಗೆ ನಿರತಿಶಯಪುರುಷಾರ್ಥವೆಂಬುದನ್ನೂ , ನೀನು ಒಂದು ದೊಡ್ಡ ಪ್ರ ಬಂಧದಮೂಲಕವಾಗಿ ತಿಳಿಸಬೇಕು, ಇದಲ್ಲದೆ ಲೋಕದಲ್ಲಿ ಮನುಷ್ಯನು ತಾ ನು ಫಲಾಪೇಕ್ಷೆಯಿಂದ ನಡೆಸಬೇಕಾದಧರ್ಮವನ್ನು ಬಿಟ್ಟ ಮೇಲೆ,ಶ್ರೀಹರಿಯ ಪಾದಾರವಿಂದವನ್ನು ಸ್ಮರಿಸುವುದಕ್ಕೆ ಮೊದಲೇ ಮೃತಿಹೊಂದಿದರೂ ಆ ವಸಿಗೆ ಅದರಿಂದಕೆಡುಕುಗಳೇನೂ ಉಂಟಾಗಲಾರದು. ಹರಿಚರಣಸ್ಮರಣೆಯೇ ಇಲ್ಲದೆ ತನ್ನ ಧರ್ಮಗಳನ್ನೇ ಚೆನ್ನಾಗಿ ನಡೆಸುತ್ತಿದ್ದವನಿಗೂಕೂಡ,ಯಾವ ವಿ ಧವಾದ ಶ್ರೇಯಸ್ಕ ಕೈಗೂಡದು.ಮೇಲಿನ ಬ್ರಹ್ಮಲೋಕಾಡಿಗಳಲ್ಲಿಯೂ ಕೆಳಗೆಪಾತಾಳಲೋ ಕಾಲಗಳಲ್ಲಿಯೂ ತೊಳಲುತ್ತಿರುವ ಜೀವಗಳಿಗೆ, ಪರಬ್ರ ಹ್ಮಾನಂದರೂಪವಾದ ಮೋಕ್ಷಸುಖವು ಭಗವದ್ಭಕ್ತಿಯಿಂದಹೊರತು ಬೇರೆ ಯಾವಉಪಾಯದಿಂದಲೂ ಲಭಿಸಲಾರದು. ಆದುದರಿಂದ ನಿಪುಣಬುದ್ದಿಯು “ವರು ಅಂತವರಿಗೆ ಆ ಶಾಶ್ವತಸುಖವನ್ನು ಪಡೆಯವುದಕ್ಕೆ ಬೇಕಾದ ಉಪಾಯವನ್ನು (ಭಕ್ತಿಯನ್ನು ತಿಳಿಸುವುದಕ್ಕಾಗಿಯೇ ಪ್ರಯತ್ನಿಸಬೇಕು. ಇದೇ ಲೋಕೋಪಕಾರವಲ್ಲದೆ ಬೇರೆಯಲ್ಲವು. ವಿಷಯಸುಖಗಳನ್ನು ಯಾವ ಉಪಾಯಾಂತರದಿಂದಲಾದರೂ ಸಾಧಿಸಬಹುದು. ದುಃಖವೆಂಬುದ ನ್ನು ನಾವು ಕೊರಡಿದ್ದರೂ ಅದು ಪೂರೈಕರ್ಮಗಳಿಂದ ತನಗೆ ತಾನೇ ಬಂದು ಸೇರುವುದು. ಹಾಗೆಯೇ ವಿಷಯಸುಖವೂಕೂಡ ಕರ್ಮಾಧೀನವಾಗಿ ಬಂದು ಸೇರುವುದು ದುರ್ಲಕವಾದ ವೇಗವುಳ್ಳ ಕಾಲಗತಿಯಿಂದಲೂ, ಪ್ರಾಚೀನ ಕರ್ಮಗಳಿಂದಲೂ ಬದ್ದರಾಗಿ ತೊಳಲುತ್ತಿರುವವರಿಗೆ, ಪ್ರಯತ್ನವಿಲ್ಲದೆಯೇ ಈ ವಿಷಯಸುಖಗಳು ಆವರಿಸಿಕೊಳ್ಳುವುವು. ಇವೆಲ್ಲವೂ ಕೇವಲದುಃಖಮಿಶ್ರ ವೇ ಹೊರತು ಬೇರೆಯಲ್ಲ. ಎಲೆ ಮುನೀಂದ್ರ : ಶ್ರೀಹರಿಯಲ್ಲಿ ಪರಿಪಕ್ಷವಾದ ಭಕ್ತಿಯುಳ್ಳವನು, ಯಾವಾಗಲೂ ಯಾವವಿಥದಿಂದಲೂ ಸಂಸಾರವೆಂಬ ಕ ಟ್ಟಿನಲ್ಲಿ ಸಿಕ್ಕಿಬೀಳಲಾರನು. ಎಂದಿದ್ದರೂ ಅದನ್ನು ತಪ್ಪದೆ ಬಿಡಿಸಿಕೊಳ್ಳಬಲ್ಲ ನ. ಏಕೆಂದರೆ, ಒಂದಾವರ್ತಿ ಶ್ರೀಹರಿಯ ಪಾದಾರವಿಂದಗಳನ್ನು ಸ್ಮರಿಸಿದ