ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆ೪ ಶ್ರೀಮದ್ಭಾಗವತವು. [ಅಧ್ಯಾ. ೫. ವನಿಗೆ, ಅದರ ರುಚಿಯು ಚೆನ್ನಾಗಿ ತಿಳಿದಿರುವುದರಿಂದ ಬೇರೊಂದೂಅವನನ ನಸ್ಸಿಗೆ ರುಚಿಸದು. ಹಾಗಿದ್ದರೆ ಈಗ ವರ್ಣಿಸಬೇಕಾದ ಭಗವಂತನ ಗುಣಗ ಳಾವುವು?”ಎಂದುಕೇಳುವೆಯಾ?ಕೊನೆಮೊದಲಿಲ್ಲದ ಅವೆಲ್ಲವನ್ನೂ ಹೇಳಿತಿಳಿಸ ಬೇಕೆಂದರೆ ನನ್ನಿಂದ ಸಾಧ್ಯವಿಲ್ಲ!ಒಂದೇಮಾತಿನಿಂದ ಹೇಳುವೆನುಕೇಳು!ಯಾ ವನಿಂದ ಜಗತ್ತಿನ ಸೃಷ್ಟಿ ಸ್ಥಿತಿಸಂಹಾರಗಳು ನಡೆಯುವುವೋ ಆ ಭಗವಂತನು ತಾನೇ ಈ ಜಗತ್ತಾಗಿರುವನು. ಹಾಗಿದ್ದರೂ ಅವನು ಈ ಪ್ರಪಂಚಗಳಿಗಿಂತ ವಿಲಕ್ಷಣನಾಗಿರುವನು. ಈ ತತ್ವವನ್ನು ನೀನೂ ಚೆನ್ನಾಗಿ ತಿಳಿದೇ ಇರುವೆ. ಹಾಗಿದ್ದರೂ ನನ್ನನ್ನು ನೀನು ಪ್ರಶ್ನೆ ಮಾಡಿದುದರಿಂದ ಅದರಲ್ಲಿ ಸ್ವಲ್ಪ ಮಾತ್ರವನ್ನು ತಿಳಿಸಿರುವೆನು. ಎಲೆ ಮಹಾತ್ಮ : ನೀನಾದರೋ ಸಮಸ್ಯ ವಸ್ತುಗಳ ತತ್ವವನ್ನೂ ಯಥಾಸ್ಥಿತವಾಗಿ ತಿಳಿದಿರತಕ್ಕವನು. ಆದುದರಿಂದ ಪರಮಪುರುಷನಾದ ಆ ಪರಮಾತ್ಮನ ಅಂಶವನ್ನು ನಿನ್ನಲ್ಲಿಯೇ ನೀನು ತಿಳಿದುಕೊಳ್ಳಬಹುದು.ಆ ಪರಮಾತ್ಮನಿಗೆ ಕರ್ಮಾಥೀನವಾದಉತ್ಪತ್ತಿಯಲ್ಲಿ ದಿದ್ದರೂ ಲೋಕಕ್ಷೇಮಾರ್ಥವಾಗಿ ಸೈಜ್ಞೆಯಿಂದಲೇ ಹುಟ್ಟುತ್ತಿರವನು. ಆ ಮಹಾತ್ಮನ ಜನ್ಮಗಳನ್ನೂ, ಕರ್ಮಗಳನ್ನೂ , ಗುಣಗಳನ್ನೂ, ನೀನು ಪ್ರ ಬಂಧರೂಪವಾಗಿ ತಿಳಿಸು. ಈ ಕಾರವನ್ನು ಮಾಡಿದಮೇಲೆಯೇ ಕೃತಕೃತ್ಯ ನೆನಿಸಿಕೊಳ್ಳುವೆ. ಆಗಲೇ ನಿನ್ನ ಮನಸ್ಸಿನಲ್ಲಿರುವ ಕೊರತೆಯು ಪೂರ್ಣವಾಗಿ ನೀಗುವುದು. ಲೋಕದಲ್ಲಿ ಮನುಷ್ಯನು ತನ್ನ ನ್ನು ಕೃತಾರ್ಥನನ್ನಾಗಿಮಾಡಿ ಕೊಳ್ಳಬೇಕೆಂದು ನಡೆಸತಕ್ಕ ಉಪವಾಸಾದಿವ್ರತಗಳೂ, ವೇದಾಧ್ಯಯನವೂ, ಯಜ್ಞಯಾಗಾದಿಗಳೂ, ಕೆರೆ, ಬಾವಿ, ಮುಂತಾದ ಧರ್ಮಕಾರ್ಯಗಳೂ, ಜ್ಞಾನ, ದಾನ, ಇವೇ ಮೊದಲಾದ ಸತ್ಕಾರ್ಯಗಳೆಲ್ಲಕ್ಕೂ ನಿರಪಾ ಯವಾದ ಫಲವು ಕೈಗೂಡಬೇಕಾದರೆ ಆ ಭಗವಂತನ ಗುಣಾನುವರ್ಣ ನವೇ ಮುಖ್ಯಸಹಕಾರಿಯೆಂದು ತತ್ವಜ್ಞಾನಿಗಳಾದ ಹಿರಿಯರು ನಿರ್ಣಯಿಸಿ ರುವರು. ಇದರಲ್ಲಿ ರುಚಿಯನ್ನು ಹುಟ್ಟಿಸದ ಯಾವ ಸತ್ಕರ್ಮಗಳೂ ಉತ್ತ ಮಫಲವನ್ನು ಕೈಗೂಡಿಸಲಾರವು. ಇದಕ್ಕೆ ನಿದರ್ಶನವಾಗಿ ನನ್ನ ಪೂರ್ವ ತಾಂತವನ್ನು ಹೇಳುವೆನು ಕೇಳು.