ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

G೬

ಅಧ್ಯಾ ೫. || ಪ್ರಥಮಸ್ಕಂಧವು. ಮುನೀಂ!ನಿನಗೆಭಗವದ್ಭಕ್ತಿಯಿಂದುಂಟಾಗತಕ್ಕ ಲಾಭವು ತಿಳಿಯಿತಲ್ಲವೆ? ಈಶ್ವರಾರ್ಪಿತವಾಗಿ ಮಾಡಿದ ಕರ್ಮಗಳು ಭಕ್ತಿಯೋಗವನ್ನು ಹುಟ್ಟಿಸಿ, ಆ ಮಲಕನ ತಾಪತ್ರಯವಿವೃತ್ತಿಗೆ ಕಾರಣವಾಗುವುದು, ಧರ್ಮಾರ್ಥ ಕಾಮಗಳನ್ನು ದೆ೦ತಿಸಿ ಮಾಡಿದ ಕರ್ಮಗಳು. ತಾಪತ್ರಯಕೇತುವಾದ ಸಂಸದಲ್ಲಿಯೂ ಸಿಕ್ಕಿಸಿ ನಳಿಸುವುದು. ಈ ಸಂಗತಿಯು ನಿನಗೆ ಮೊದಲೇ ತಿಳಿದಿರುವುದಲ್ಲವೊ ? ಶ್ರುತಿ ಸ್ಮತಿ ಮೊದಲಾದುವೂಕೂಡ ಈ ಅರ್ಥವನ್ನ ಸೂಚಿಸುವುವು. ರೋಗಕಾರಣಗಳಾದ ವಸ್ತುಗಳನ್ನ ಓಷಧವೆಂದು ಕುಡಿ ಸಿದಮಾತ್ರಕ್ಕೆ ರೋಗಗಳು ಬಿಟ್ಟು ಹೋಗುವವೆ ? ಎಂದಿಗೂ ಹೋಗಲಾ ರವು ! ಅಪಥ್ಯವಸ್ತುಗಳು ರೋಗಕಾರಣಗಳಾಗುವಂತಯೆ, ಮನುಷ್ಯರ ಕರ್ಮಯೋಗಗಳು ಫಲೋಶದಿಂದ ಕೂಡಿದುವಾಗಿದ್ದರೆ, ಅವು ಸಂಸಾರ ಹೇತುವಾಗದೆ ಬಿತವು ಮತ್ತು ಅವು ಭಗವದರ್ಪಿತಗಳಲ್ಲದಪಕ್ಷದಲ್ಲಿ ಆತ್ಮನಾ ಶಕ ಕಾರಣಗಳಾಗುವುವು. ರೋಗಕಾರಣಗಳಾದ ದ್ರವ್ಯಗಳೇ ಬೇರೆ ಕೆಲ ವು ವಸ್ತುಗಳ ಸಂಬಂಧದಿಂದ ಔಷಧಸಮಾನಗಳಾಗಿ ರೋಗವನ್ನು ಶಮನ ಮಾಡುವುದಕ್ಕೆ ಸಮರ್ಥಗಳಾಗುವಂತೆ, ಈ ಧರ್ಮಾರ್ಥಕಾಮಸಾಧಕಗಳಾ ದ ಕರ್ಮಗಳೇ ಭಗವದರ್ಪಿತಗಳಾದಪಕ್ಷದಲ್ಲಿ ಸಂಸಾರವನ್ನು ನೀಗಿಸುವುವು. (4ಹಾಗಿದ್ದರೆ ಭಗವದರ್ಪಿತಗಳಾದ ಕರ್ಮಗಳೆಲ್ಲವೂ ಸ್ವತಂತ್ರವಾಗಿಯೇ ಮೋಕಪ್ರದವಾಗಬಾರದೆ ? ಅವು ಭಕ್ತಿಯನ್ನು ಹುಟ್ಟಿಸಿ, ಆ ಮೂಲಕವಾಗಿ ಯೇ ಮೋಕಪ್ರವೆಂಬ. *ಕೆ?” ಎಂದರೆ, ಅದಕ್ಕೂ ಸಮಾಧಾನವನ್ನು ಹೇ ಭುವೆನು ಕೇಳು. “ಮೃತ ವು ಬಿದ್ದು ಹೋಗುವವರೆಗೂ ನಾವು ಭಗವಂತನಿ ಗೆ ಸಂತೋಷಕರ , ದ ಕರ್ ಗಳನ್ನು ನಡೆಸುತ್ತಿರಬೇಕು. ಆಗ ಭಗವಂತನಿ ಗುಂಟಾದ ಆಸಂತೋಷವು,ಭಕ್ತಿಯೋಗಕ್ಕಿರತಕ್ಕ ಪ್ರತಿಬಂಧಕಗಳನ್ನು ನೀಗಿ ಸುವುದಕ್ಕೆ ಸಮರ್ಥಗಳಾಗುವುವು. ಆ ಪ್ರತಿಬಂಧಕಗಳು ನೀಗಿದಮೇಲೆ ಭಕ್ತಿ, ಯು ಹುಟ್ಟವುದು.ಕರ್ಮಗಳಿಗೂ, ಭಕ್ತಿಗೂ ಇರುವ ಸಂಬಂಧವು ಈ ರೀತಿ ಯಾದುದು. ಭಕ್ತಿಯೋಗವು ಸಹಕಾರಿಯಾಗದಿದ್ದ ಪಕ್ಷದಲ್ಲಿ ಮೋಕವು ಲ ಭಿಸಲಾರದು.ಭಕ್ತಿಗೆ* ಭಗವದ್ವಚನಾನುಸಾರವಾಗಿ ಮಾಡುವ ವರ್ಣಾಶ್ರ

  • ಇಲ್ಲಿ 'ಯಡ್ಕರೋಮಿ ಯದಶ್ಯಾಸಿ ಯಜುಹೋಮಿ ದದಾಸಿ ಯತೇ| ಯತ್ತ ಸಸ್ಯಸಿ ಕೌಂತೇಯ ತುರುಷ ಮದರ್ಪಣಂ” ಎಂಬುದೇ ಭಗವದ್ವಚನವು.