ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨ ಶ್ರೀಮದ್ಭಾಗವತವು - [ಅಧ್ಯಾ ೬, ಭಗವಂತನನ್ನು ಸಾಕ್ಷಾತ್ಕರಿಸುವುದಕ್ಕಾಗಿ ನಾನು ಬಾರಿಬಾರಿಗೂ ಅನೇಕ ಯತ್ನಗಳನ್ನು ಮಾಡುತ್ತಿರುವಾಗಲೇ, ವೇದವಾಕ್ಕುಗಳಿಗೂ ಅಗೋಚರನಾ ದ ಭಗವಂತನು, ಆಕಾಶಮಾರ್ಗದಿಂದ ಗಂಭೀರವಾಗಿಯೂ, ಇಂಪಾಗಿಯೂ ಇರುವ ಮಾತಿನಿಂದ ನನ್ನ ದುಃಖವೆಲ್ಲವನ್ನೂ ನೀಗಿಸುವಂತೆ ಹೀಗೆಂದುಹೇಳಿದ ನು, 'ನಾರದಾ ! ನೀನು ಎಷ್ಟೆಷ್ಟು ಪ್ರಯತ್ನಗಳನ್ನು ಮಾಡಿದರೂ, ಈ ಜನ್ಮ ದಲ್ಲಿ ನನ್ನನ್ನು ನೋಡುವುದಕ್ಕೆ ಶಕ್ತನಾಗಲಾರೆ! ನನ್ನ ದರ್ಶನಕ್ಕೆ ಪ್ರತಿಬಂಧ ಕಗಳಾದ ಪ್ರಣ್ಯಪಾಪಕರ್ಮಗಳೆಂಬ ಕಟ್ಟಿನಲ್ಲಿ ಸಿಕ್ಕಿಬಿದ್ದವರಿಗೆ, ನಾನು ಗೋ ಚರಿಸಲಾರೆನು ಅಂತಹ ಕುತ್ತಿತಯೋಗಿಗಳಲ್ಲಿ ನೀನೂ ಒಬ್ಬನಾಗಿರುವೆ. ನಾರ ದಾ!ಹಾಗಿದ್ದರೂ ಆರಂಭದಲ್ಲಿ ನಿನಗೆ ನಾನು ಒಂದಾವರ್ತಿ ಕಾಣಿಸಿಕೊಂಡು ದಕ್ಕೆ ಕಾರಣವನ್ನು ಹೇಳುವೆನು ಕೇಳು?ಒಂದಾವರ್ತಿ ನನ್ನನ್ನು ಸಾಕ್ಷಾತ್ಕರಿಸಿ ದ ಮನುಷ್ಯನು, ನನ್ನ ರೂಪವನ್ನು ಎಂದಿಗೂ ಮರೆಯಲಾರನು ಯಾವಾ ಗಲೂ ನನ್ನನ್ನು ನೋಡುತ್ತಿರಬೇಕೆಂದೇ ಅಪೇಕ್ಷಿಸುವನು. ನಪ್ಪ ದರ್ಶನವನ್ನ ಪೇಕ್ಷಿಸುವವನು, ಸವರ್ತನವುಳ್ಳವನಾಗಿ, ಮೆಲ್ಲಮೆಲ್ಲಗೆ ತನ್ನ ಹೃದಯದ ಲ್ಲಿರುವ ರಾಗದ್ವೇಷಾದಿಗಳೆಲ್ಲವನ್ನೂ ನೀಗಿಸಿಕೊಳ್ಳಬಲ್ಲನು.ನೀನು ಹಿಂದೆ ಸ್ವ ಲ್ಪ ಕಾಲದವರೆಗೆ ಆ ಮಹಾತ್ಮರ ಸೇವೆಯಲ್ಲಿದ್ದುದರಿಂದಲೇ ನಿನಗೆ ನನ್ನ ಸ್ಥಿರ ವಾದ ಬುದ್ಧಿಯು ಹುಟ್ಟಿತು: 'ಗಲೂ ನೀನು ನೀಚವಾದ ಈ ಶೂದ್ರದೇಹ ವನ್ನು ತ್ಯಜಿಸಿದಮೇಲೆ,ಕಲ್ಪಾಂತರದಲ್ಲಿ ನನ್ನ ಭಕ್ತನಾಗುವೆ ನನ್ನ ಅನುಗ್ರಹ ಬಲದಿಂದಲೇ ನಿನಗೆ ನನ್ನಲ್ಲಿ ಸ್ಥಿರವಾಗಿರುವ ಈ ಬುದ್ಧಿಯು ಎಂದೆಂದಿಗೂ ಕದಲದು. ಪ್ರಳಯದಲ್ಲಿಯಾದರೂ ನಿನಗೆ ನನ್ನ ಸ್ಮರಣೆಯು ಬಿಟ್ಟು ಹೋಗ ದು”ಎಂದನು. ಕರ್ಮಕೃತವಾದ ದೇಹವಿಲ್ಲದವನಾಗಿಯೂ, * ಆಕಾಶಶರೀರಿ ಯಾಗಿಯೂ, ಸಧ್ವನಿಯಾಮಕನಾಗಿಯೂ, ಸಾಂತರಾಮಿಯಾಗಿಯೂ, ಸರೇಶ್ವರನಾಗಿಯೂ, ಸರಸ್ವತಂತ್ರನಾಗಿಯೂ ಇರುವ ಆಪರಮಾತ್ಮನು, ಈ ಮಾತುಗಳನ್ನು ಹೇಳಿಸುಮ್ಮನಾದಮೇಲೆ, ಆತನ ಕೃಪಾಪಾತ್ರನಾದನಾ ನು,ಹಾಗೆಯೇ ತಲೆಬಗ್ಗಿ ನಮಸ್ಕರಿಸಿ, ಅಲ್ಲಿಂದ ಹಿಂತಿರುಗಿದೆನು.ಹೋದಕಡೆಗಳ

  • ಇಲ್ಲಿ ಆಕಾಶಶರೀರಂ ಬ್ರಹ್ಮ” ಎಂದು ಶ್ರುತಿಯು, ಭಗವಂತನು ಆ ಕಾಶದಂತೆ ಪಕ್ವವ್ಯಾಪಿಯಾಗಿ ಅಗೋಚರನಾಗಿರುವನೆಂದರೆವು.