ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೬ ] ಪ್ರಥಮಸ್ಕಂಧವು. ೧೦೩ ಲೈಲಾ ನಿರ್ಲಜ್ಜನಾಗಿ ಅಭಗವಂತನ ನಾಮಗಳನ್ನು ಕೀರ್ತಿಸುತ್ತ, ಸಮಸ್ತಜ ಗತ್ತಿಗೂ ಮಂಗಳಕರವಾಗಿಯ, ವೇದರಹಸ್ಯವಾಗಿಯೂ ಇರುವ ಭಗವದವ ತಾರಗಳನ್ನೂ ; ಆತನ ವ್ಯಾಪಾರಗಳನ್ನೂ ಎಡೆಬಿಡದೆ ಸ್ಮರಿಸುತ್ತ, ಭೂಮಿ ಯೆಲ್ಲವನ್ನೂ ಸುತ್ತುತ್ತಿದ್ದನು. ಇದರಿಂದ ನಾನು ನಿತ್ಯಸಂತೋಷಿಯಾಗಿ, ವಿಷಯಾಭಿಲಾಷೆಯನ್ನು ಬಿಟ್ಟು, ಮದಮಾತೃಶ್ಯಗಳನ್ನೂ ಅಡಗಿಸಿ, ದೇಹಾ ವಸಾನವನ್ನೇ ನಿರೀಕ್ಷಿಸುತ್ತ ಕಲ್ಪಾಂತರದವಗೆ ಕಾಬವೆನು. ಓ ಮುನೀಂ ದ್ರಾ! ಹೀಗೆ ಶ್ರೀಕೃಷ್ಣ ಪರಮಾತ್ಮನೊಬ್ಬನಲ್ಲಿಯೇ ಬುದ್ಧಿಯನ್ನು ನಿಲ್ಲಿಸಿ ವಿಷಯಾಭಿಲಾಷೆಯನ್ನು ಬಿಟ್ಟು ನಿಷ್ಕಳಂಕವಾದ ಮನಸ್ಸಿನಿಂದ ನನಗೆ, ಗ್ರಾರಬ್ಧಕರ್ಮವು ಮುಗಿಯುವ ಕಾಲವು ಸಮೀಪಿಸಿತು. ಮಿಂಚಿನಂತೆ ಮ ರಣ ಕಾಲವೂ ತಲೆದೋರಿತು.ಸಮಸ್ತ ಜೀವರಾಶಿಗಳ ಲಯಕ್ಕೆ ಸ್ಥಾನವಾಗಿಯೂ ಅಪ್ರಾಕೃತವಾಗಿಯೂ ಇರುವ ಅನಿರುದ್ಯರೂಪಿಯಾದ ಭಗವಂತನ ಶರೀ ರದಲ್ಲಿ ಯಂದುವುದಕ್ಕೆ ನಾನು ಪ್ರಯತ್ನಿಸುತ್ತಿದ್ದಾಗ, ನನ್ನ ಪ್ರಾರಬ್ಬ ವನ್ನು ಕೊನೆಗಾಣಿಸತಕ್ಕ ಮೃತ್ಯುವು ಬಂದೊದಗಿತು. ಪಂಚಭೂತಾತ್ಮ ಕವಾದ ಆ ನನ್ನ ದೇವು ನಾಶಹೊಂದಿತು. ಭಗವಂತನು ಆ ಕಲ್ಪದ ಕೊನೆಗೆ ಜಗತ್ತೆಲ್ಲವನ್ನೂ ಇಲ್ಲಿ ಅವವಾಗಿ ಮಾಡಿಕೊಂಡು, ಸಮುದ್ರ ಜಲ ದಲ್ಲಿ ಶಯಸಿಸಿದನು ಆ ಸಮಯದಲ್ಲಿ ಚತು ' ಬ್ರಹ್ಮನು ಭಗವಂತನ ನಾಭಿಕಮಲದಲ್ಲಿ ಮಲಗಬೇಕೆಂದೆಣಿಸಿವ್ಯಾಗ, ನಾ ನೂ ಆತನ ಪ್ರಾಣಗಳಲ್ಲಿ ಸೇರಿಕೊಂಡಿದ್ದೇನು:ಹೀಗೆಯೇ ಸಹಸ್ರಯುಗಗಳು ಕಳೆದುಹೋದುವು.ಆಮೇ ಲೆ ಬ್ರಹ್ಮನು, ನಾಭಿಕಮಲದಿಂದೆದ್ಯುಸೃಷತ್ಮಕವಾದ ಈ ಪ್ರಪಂಚವ ನ್ನು ಸೃಷ್ಟಿಸುವುದಕ್ಕೆ ಉದ್ದೇಶಿಸುತ್ತಿದ್ದನು. ಆ ಸಮಯದಲ್ಲಿಯೇ ಚತುರ್ಮು ಖಬ್ರಹ್ಮನ ಪಾದದಿಂದ ನಾನೂ, ಮರೀಚಿವಸಿಷ್ಠಾದಿಮಹರ್ಷಿಗಳೂ ಹು ಟಿದೆವು. ವ್ಯಾಸಮುನೀಂದಾ!ಅದರಿಂದೀಚೆಗೆ ಆ ಭಗವದನುಗ್ರಹದಿಂದಲೇ ನಾನು ಸಮಸ್ತಲೋಕಗಳಲ್ಲಿಯೂ ನಿರಂಕುಶವಾದ ಗಮನವುಳ್ಳವನಾಗಿ, ಆ ಖಂಡಬ್ರಹ್ಮಚಯ್ಯವ್ರತವನ್ನು ಸಲಿಸುತ್ತ, ಮೂರುಲೋಕಗಳ ಅಂತರ್ಬಹಿ ಪ್ರದೇಶಗಳೆಲ್ಲವನ್ನೂ ಸುತ್ತುತ್ತಿರುವೆನು, ಪೂರ್ವದಲ್ಲಿ ಬ್ರಹ್ಮನು ನನಗೆ ಇ ದೊಂದು ವೀಣೆಯನ್ನು ಕೊಟ್ಟನು.ಈ ನನ್ನ ವೀಣೆಯು ನಿಷಾದವೇ ಮೊದಲಾ