ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೪ ಶ್ರೀಮತ್ಸಾಗವತವು [ಅಧ್ಯಾ. ೬. ದ ಸಪ್ತಸ್ವರಗಳೆಂಬ ಶಬ್ದಬ್ರಹ್ಮದಿಂದಲಂಕೃತವಾಗಿರುವುದು. ಈವೀಣೆಯ ನ್ನು ನಾನು ಯಾವಾಗಲೂ ಹೀಗೆಯೇ ಕೈಯಲ್ಲಿ ಹಿಡಿದು ನುಡಿಸುತ್ತ,ಸದಾ ಹರಿಕೀರ್ತನಗಳನ್ನು ಗಾನಮಾಡುತ್ತ ಸಂಚರಿಸುತ್ತಿರುವೆನು. ಪುಣ್ಯಶ್ಲೋಕ ನಾಗಿಯೂ, ಪವಿತ್ರವಾದ ಪಾದಪದ್ಮಗಳುಳ್ಳವನಾಗಿಯೂ ಇರುವ ಆ ಭ ಗವಂತನು, ನಾನು ಈ ವೀಣಾಧ್ವನಿಗಳೊಡನೆ ಕೀರ್ತನೆಗಳನ್ನಾರಂಭಿಸಿದ ಕೂಡಲೆ, ಕೂಗಿ ಕರೆಯಲ್ಪಟ್ಟವನಂತೆ ನನ್ನ ಮನಸ್ಸಿನಲ್ಲಿ ಬಂದು ನೆಲಸಿ ನನ ಗೆ ದರ್ಶನವನ್ನು ಕೊಡುವನು. ಎಲೈ ಮುನಿಶ್ರೇಷ್ಟನೆ!ವಿಷಯಾಭಿಲಾಷೆಯಲ್ಲಿ ಆತುರಗೊಂಡಿರತಕ್ಕೆ ಮನುಷ್ಯರನ್ನು ಸಂಸಾರವೆಂಬ ಸಮುದ್ರದಿಂದದಾಟಿ ಸುವುದಕ್ಕೆ ಆ ಭಗವಂತನ ಚರಿತ್ರವರ್ಣನವೊಂದೇ ದೋಣಿಯಂತಿರುವು ದು, ಕಾಮಲೋಭಾಟಗಳಿಂದ ಕೆಟ್ಟುಹೋದ ಮನಸ್ಸು, ಆ ಭಗವಂತ ನ ಸೇವೆಯಿಂದ ಒಡನೆಯೇ ಆ ದುರ್ಗುಣಗಳನ್ನು ನೀಗುವುದು. ಹಸಿವೆ ಯಿಂದ ಆ ದುರ್ಗುಣಗಳು ನೀಗಿ ಹೋಗುವಂತೆ,ಯಮನಿಯವಹಯೋಗ ಮಾರ್ಗಗಳಿಂದಲೂ ನೀಗಲಾರವು.ಎಲೈಮಹರ್ಷಿಯ!ನಿನ್ನ ಕೋರಿಕೆಯಂತೆನ ನ್ಯ ಜನ್ಮಕರಗಳ ರಹಸ್ಯಗಳೆಲ್ಲವನ್ನೂ ನಿನ್ನ ಮನಸ್ಸಿಗೆ ತೃಪ್ತಿಯುಂಟಾಗುವಂ ತೆ ತಿಳಿಸಿದನು. ಇನ್ನು ನಾನು ಹೋಗಿಬರುವೆನು" ,ದನು. ಹೀಗೆಂದು ಹೇಳಿ ನಾರದನು ವೇದವ್ಯಾಸನಅನುಮತಿಯನ್ನು ಪಡೆದು, ತನ್ನ ವೀಣೆಯನ್ನು ನುಡಿ ಸತ್ಯ, ಯಾವಾಗಲೂ ತಾನು ಅನಂದರಸದಲ್ಲಿ ಮಗ್ನನಾಗಿರುವುದಲ್ಲದೆಸಂ ಸಾರತಾಪತ್ರಯದಲ್ಲಿ ಸಿಕ್ಕಿ ನರಳುತ್ತಿರುವ ಈ ಸಮಸ್ತಜಗತ್ತನ್ನೂ ಕೂಡ ತನ್ನ ವೀಣಧ್ವನಿಯಿಂದುಂಟಾದ ಆನಂದರಸದಲ್ಲಿ ಮುಳುಗಿಸುತ್ತಿರುವನು! ಅಬ್ಬಾ! ಆ ಮಹಾತ್ಮನೊಬ್ಬನಲ್ಲವೇ ಲೋಕದಲ್ಲಿ ಧನ್ಯನು! ಇದು ಆರನೆಯ ಅಧ್ಯಾಯವು.