ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧o8 ಅಧ್ಯಾ. ೭.] ಪ್ರಥಮಸ್ಕಂಧವು. ವ್ಯಾಸಮುನಿಯು ಭಾಗವತವನ್ನು ರಚಿಸಿ ಶುಕಮುನಿಗೆ ) .. ಉಪದೇಶಿಸಿದುದು, - ನಾರದನ ಚರಿತ್ರವನ್ನು ಕೇಳಿದಮೇಲೆ ತಿರುಗಿ ಶಾನಕವು ಸೂತಪ್‌ ರಾಣಿಕನನ್ನು ನೋಡಿ, ಓ! ಸೂತಾ ! ನಾರದನು ಹೊರಟುಹೋದಮೇಲೆ ಭಗವಂತನಾದ ವ್ಯಾಸಮುನಿಯು ಮಾಡಿದುದೇನು ? ” ಎಂದು ಕೇಳಿದನು. ಅದಕ್ಕಾಸೂತನು, ಶೌನಕಾ ! ಕೇಳು ! ಅತ್ತಲಾಗಿ ನಾರದನು ಹೊರಟು ಹೋದಮೇಲೆ ವ್ಯಾಸನು ಸರಸ್ವತೀನಗೆ ಪತ್ನಿ ಮತೀರದಲ್ಲಿ ಶಮ್ಯಾಪ್ರಾಸ ವೆಂದು ಪ್ರಸಿಹೋಂದಿದ ತನ್ನಾಶ್ರಮಕ್ಕೆ ಹೋದನು ಆ ಪ ದೇಶವು ವಿಶೇ ಷವಾಗಿ ಬದರೀವೃಕ್ಷಗಳಿಂದ ತುಂಬಿ ತಿಮನೋಹರವಾಗಿದ್ದಿತು. ಋಷಿಗಳೆ ಲ್ಲರೂ ಸತ್ರಯಾಗವನ್ನು ನಡೆಸಬೇಕಾದ ಸ್ಥಾನವೇ ಅದು! ವ್ಯಾಸನು ಈ ಪಣ್ಣ ” ಶ್ರಮಕ್ಕೆ ಬಂದು, ಆಚಮನವನ್ನು ಮಾಡಿ, ಶುದ್ಧವಾಗಿ ಕುಳಿತು, ತನ್ನ ಮನಸ್ಸನ್ನು ವಿಷಯಾಂತರಗಳಿಂದ ಹಿಂತಿರುಗಿಸಿ ಆತ್ಮಸ್ಥವಾಗಿ ನಿಲ್ಲಿಸಿಕೊಂ ಡನು. ಹಾಗೆಯೇ ಧ್ಯಾನಿಸುತ್ತಿರುವಾಗ, ಭಕ್ತಿಯೋಗಬಲದಿಂದ ಮನಸ್ಸು ನಿರ್ಮಲವಾಯಿತು. ಸಾವಧಾನದಿಂದ ನೋಡಲು ಅವನಿಗೆ ಮೊದಲು ಸರ ಮಪುರುಷನ ದರ್ಶನವಾಯಿತು. ಹಾಗೆಯೇ ನೋಡುತ್ತ ಪರಮಪುರುಷನಿಗೆ ಶರೀರಭೂತವಾದ ಯೆ ಯನ್ನು ಕಂಡುಕೊಂಡನು. ಆ ಮಹಾತ್ಮನು ಇನ್ನೂ ಮುಂದೆ ಜ್ಞಾನದೃಷ್ಟಿಯಿಂದ ನೋಡುತ್ತಿರಲು, ಮಾಯೆಗಿಂತಲೂ ಜೀವಾತ್ಮನು ವಿಲಕ್ಷಣವಾಗಿದ್ದು, ಮಾಯೆಯಿಂದಲೇ ತಾನು ಮೋಹಿತ ನಾಗಿ, ತನ್ನ ಸ್ನೇ ಗುಣತ್ರಯಪರಿಣಾಮರೂಪವಾದ ಶರೀರವನ್ನಾಗಿ ತಿಳಿದು ಈ ಭ್ರಮದಿಂದುಂಟಾದ ತಾಪತ್ರಯದಲ್ಲಿ ಸಿಕ್ಕಿ ನರಳುವನೆಂದೂ, ಈ ತಾ ಪತ್ರಯವನ್ನು ನಿವಾರಿಸುವ ಉಪಾಯವನ್ನು ತಿಳಿಯದ ಜನಗಳಿಗೆ, ಭಗವದ್ಮ ಕೈಯಲ್ಲದೆ ಬೇರೆ ಉಪಾಯಾಂತರವಿಲ್ಲವೆಂದೂ ನಿಶ್ಚಯಿಸಿದನು. ಈ ನಿಶ್ಚಯ ವು ಹುಟ್ಟಿದಮೇಲೆ ಲೋಕಹಿತಾರ್ಥವಾಗಿ ಭಾಗವತವೆಂಬ ಸಂಹಿತೆಯನ್ನು ರಚಿಸಿದನು. ಎಲೈ ಮಹರ್ಷಿಗಳೇ! ಈ ಸಂಹಿತೆಯನ್ನು ಕೇಳಿದಮಾತ್ರದಿಂದ ಲೇ ಮನಷ್ಯರಿಗೆ ಮನಸ್ಸಿನಲ್ಲಿರುವ ಶೋಕಮೋಹಾದಿಗಳೆಲ್ಲವನ್ನೂ ನೀಗಿಸತಕ್ಕ ಭಗವದ್ಭಕ್ತಿಯು ಹುಟ್ಟುವುದು.ವ್ಯಾಸನು ತಾನು ಹೇಳಬೇಕಾದ ವಿಷಯ