ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೭.) ಪ್ರಥಮಸ್ಕಂಧವು. ೧೦೭ ಆ ಪುಣ್ಯಚರಿತ್ರವನ್ನು ನೀವು ಸಾವಧಾನವಾಗಿ ಕೇಳಬೇಕು.ಹಿಂದೆ ಪಾಂಡವರಿ ಗೂ, ಕೌರವರಿಗೂ ನಡೆದ ಯುದ್ಧದಲ್ಲಿ, ಉಭಯಪಕ್ಷದಲ್ಲಿಯೂ ಬಹಳಮಂದಿ ವೀರರು ಹತರಾಗಿ ವೀರಸ್ವರ್ಗವನ್ನು ಹೊಂದಿದರು. ಪ್ರಾಯಕವಾಗಿ ಉಭಯ ಸೈನ್ಯಗಳ ನಿಶ್ಲೇಷವಾಗಿ ಹತವಾದುವು. ಕೊನೆಗೆ ಭೀಮನ ಗದಾ ಪ್ರಹಾರ ದಿಂದ ದುರ್ಯೋಧನನಕೊಡ ತೊಡೆಮುರಿದು ಕೆಳಗೆ ಬಿದ್ದಿದ್ದನು.ಆಗ ಕೌ ರವರ ಕಡೆಯಲ್ಲಿ ದ್ರೋಣಪುತ್ರನಾದ ಅಶ್ವತ್ಥಾಮನು, ತನ್ನ ಪ್ರಭುವಾದ ಧೃತರಾಷ್ಟ್ರನಿಗೆ ಪ್ರಿಯವನ್ನು ಲಟುಮಾಡಬೇಕೆಂದು, ಒಂದು ದುರಾಲೋ ಚನೆಯನ್ನು ನಡೆಸಿದನು. ವಾಸ್ತವದಲ್ಲಿ ಈ ಕಾವ್ಯವೇನೋ ಧೃತರಾಷ್ಟ್ರನಿಗೆ ಸಮ್ಮತವಲ್ಲದಿದ್ದರೂ, ಅಶ್ವತ್ಥಾಮನು ಇದರಿಂದ ಆತನನ್ನು ಸಂತೋಷ ಪಡಿಸಬೇಕೆಂದೆಣಿಸಿ, ಬ್ರಾಹ್ಮಣನಾದ ತನಗೆ ಆ ಕಾರ್ಯವು ಅನುಚಿತವೆಂಬು ದನ್ನ ಯೋಚಿಸದೆ, ರಾತ್ರಿಯಲ್ಲಿ ನಿದ್ರಿಸುತಿದ್ದ ಉಪಪಾಂಡವರ ತಲೆಗೆ ಳನ್ನು ಕತ್ತರಿಸಿ ತೆಗೆದುಕೊಂಡುಹೋದನು. ಅಶ್ವತ್ಥಾಮನ ಈ ಘೋರ ಕೃತ್ಯವನ್ನು ಈಗಲೂ ಜನರು ಸಿಂಹಿಸುತ್ತಿರುವರು! ಇತ್ತಲಾಗಿ ಜಪದಿಯು ತನ್ನ ಪುತ್ರರ ಮರಣವನ್ನು ನೋಡಿ ದುಃಖವನ್ನು ತಡೆಯಲಾರದೆ, ಧಾರೆಧಾರೆ ಯಾಗಿ ಕಣ್ಣೀರನ್ನು ಬಿಡತ ವಿಲಪಿಸುತಿದ್ದಳು. ಅರ್ಜುನನು ಆಕೆಯ ದುಃಖ ವನ್ನು ಕಂಡು, ಅವಳನ್ನು ಅನೇಕ ವಿಧದಲ್ಲಿ ಸಮಾಧಾನಪಡಿಸುತ್ತ, ಪ್ರಿಯೆ! ಆದವಾಯಿತು! ಇನ್ನು ದುಸಿ ಫಲವೇನು? ಬಾಣಾಧಮನಾಗಿಯೂ, ಪಾಪಕಾಧ್ಯಕ್ಕೆ ಹೆದರದ* ಆತ ತಾಯಿ)ವನಾಗಿಯೂ ಇರುವ ಆ ಅಶ್ವತ್ಥಾಮ ನ ಶಿರಸ್ಸನ್ನು ಇನ್ನು ಕ್ಷಣಕಾಲದೊಳಗಾಗಿಯೇ, ಈ ನನ್ನ ಗಾಂಡೀವಪ್ರಯು ಕಗಳಾದ ಬಾಣಗಳಿಂದ ಕಡಿಮೆ ತರುವೆನು, ಎಲೆದೇಪಿ! ಆ ಪಾಪಿಯ ತಲೆಯ ನ್ನು ಮೊದಲು ನೀನು ನಿನ್ನ ಕಾಲಿನಿಂದ ತುಳಿದು, ಆಮೇಲೆ ಸ್ನಾನವನ್ನು

  • ಆತ ತಾಯಿಯೆಂದರೆ: “ಅಗ್ನಿ ದೋ ಮರದಶೈವ ಶಸ್ತ್ರಪಾಣಿರ್ಧನಾಪಹಃ | ಕ್ಷೇತ್ರದಾರಾಪಹರ್ತಾಚ ಷಡೇತೇಹ್ಯಾತ ತಾಯಿನಃ” ಮನೆಗೆ ಬೆಂಕಿಯಿಡುವುದು ವಿಷ ವನ್ನು ಹಾಕಿ ಕೊಲ್ಲುವುದು, ಶಸ್ತ್ರಧಾರಿಯಾಗಿ ಜೀವಹಿಂಸೆಮಾಡುವುದು, ಹಣ, ಭೂ ಮಿ, ಹೆಂಗಸು, ಇವುಗಳನ್ನಪಹರಿಸುವುದು; ಈ ಕರಕೃತ್ಯಗಳನ್ನು ನಡೆಸುವವನು ಆತಶಾಯಿಯೆನಿಸುವನು.