ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೭.] ಪ್ರಥಮಸ್ಕಂಧವು. ೧೧೧ ರಾದವರು ಮದ್ಯಪಾನಮಾಡಿ ಮದಿಸಿದವರನ್ನೂ , ಎಚ್ಚರತಪ್ಪಿದವರನ್ನೂ, ಪಿತ್ತವಿಕಾರಾದಿಗಳಿಂದ ಮೈಮರೆತವರನ್ನೂ , ನಿದ್ರಿಸುವವರನ್ನೂ, ಸ್ತ್ರೀ ಬಾಲವೃದ್ಧರನ್ನೂ , ಜಡಸ್ವಭಾವವುಳ್ಳವರನ್ನೂ, ಶರಣಾಗತರಾದವರನ್ನೂ, ಯುದ್ಧದಲ್ಲಿ ವಿರಥರಾದವರನ್ನೂ, ಭಯಪಟ್ಟವರನ್ನೂ ಕೊಲ್ಲಲಾರರು. ಈ ಧರ್ಮವನ್ನಾ ಲೋಚಿಸದೆ ಈ ದುರಾತ್ಮನು ನಿದ್ರಿಸುತ್ತಿದ್ದ ಬಾಲಕರನ್ನು ಕೊಂದಿರುವನು. ದಯಾಗುಣವಿಲ್ಲದ ಯಾವ ದುರಾತ್ಮನು ಇತರರ ಪ್ರಾಣಿಗ ಳನ್ನು ತೆಗೆದು ತನ್ನ ಪ್ರಾಣಗಳನ್ನು ಕಾಪಾಡಿಕೊಳ್ಳಬೇಕೆಂಬ ಪ್ರಯತ್ನವನ್ನು ನಡೆಸುವನೋ, ಅಂತವನನ್ನು ಸಂಹರಿಸುವುದೇ ಕ್ಷತ್ರಿಯಧರ್ಮವು! ಈ ಕಾರ ವು ರಾಜರಿಗೆ ಶ್ರೇಯಸ್ಕರವಾದುದೇ ಹೊರತು ದೋಷಾಸ್ಪದವಲ್ಲ! ಆ ದುಷ್ಕಾ ವ್ಯವನ್ನು ನಡೆಸಿದ ಮನುಷ್ಯನೂಕೊಡ * ಈ ವಿಧವಾದ ರಾಜದಂಡನವನ್ನು ಹೊಂದದಿದ್ದ ಪಕ್ಷದಲ್ಲಿ ಪಾಪಕ್ಕೆ ಬೇರೆ ಪ್ರಾಯಶ್ಚಿತ್ತವಿಲ್ಲದೆ ನರಕಕೂಪದ ಫಿ ಬೀಳುವನು. ಅರ್ಜುನಾ! ಈಗ ನೀನು ಈ ಅಶ್ವತ್ಥಾಮನನ್ನು ಕೊಲ್ಲುವುದ ರಿಂದ,ನಿಮ್ಮಿಬ್ಬರಿಗೂ ಶ್ರೇಯಸ್ಸುಂಟು!ಆದುದರಿಂದ ಒಡನೆಯೇ ಈತನ ತಲೆ ಯನ್ನು ಕತ್ತರಿಸಿಬಿಡು! ಈ ಧರ್ಮಸೂಕ್ಷವಿಚಾರವೂ ಹಾಗಿರಲಿ! ನಿನು ಹಿಂದೆ ದಾಸರಿಯನ್ನು ಸಮಾಧಾನಪಡಿಸುವಾಗ, ಅವಳ ಮುಂದೆ ಪ್ರತಿಜ್ಞೆ ಮಾಡಿ ಬಂದುದನ್ನು ಮರೆತೆಯಾ? (ಪತ್ರಘಾತುಕನಾದ ಈ ಪಾಪಿಯ ತಲೆಯನ್ನು ಕಡಿದುತರುವುದಾಗಿ ನನ್ನಿ ವಿರಾಗಿಯೇ ಪ್ರತಿಜ್ಞೆ ಮಾಡಿಬಂದೆಯಲ್ಲವೆ! ಆ ಪ್ರತಿ ಜ್ಞೆಗೆ ಭಂಗವುಂಟಾಗದಹಾಗೆ ನೋಡು ! ಈ ಪಾಪಾತ್ಮನಾದರೋ ನಿನ್ನ ಮಕ್ಕಳೆಲ್ಲರನ್ನೂ ಕೊಂದಿರುವನು. ನಿದ್ರೆಯಿಂದ ಮೈಮರೆತವರನ್ನೂ ಕೊಂ ಹದರಿಂದ ಆತತಾಯಿಯೆನಿಸುವನು. ಧೃತರಾಷ್ಟ್ರನಿಗೆ ಸಮ್ಮತವಲ್ಲದಿದ್ದ ರೂ, ಅವನನ್ನು ಸಂತೋಷಪಡಿಸುವುದಕ್ಕಾಗಿ, ಈ ದುಷ್ಕಾರವನ್ನು ನಡೆಸಿ ರುವನು. ಈ ಕಾರಣಗಳಿಂದ ವಧ್ಯನಾದ ಈತನನ್ನು ಕೊಲ್ಲದೆ ಬಿಡುವುದು ಸ ರೈಧಾ ಯುಕ್ತವಲ್ಲ!” ಎಂದನು. ಹೀಗೆ ಕೃಷ್ಣನು ಅರ್ಜುನನ ಮನಸ್ಸನ್ನು ಪ

  • “ರಾಜಭಿಧ್ರ್ರತದಂಡಾಸು, ಕೃತಾ ಪಾಪಾನಿ ಮಾನವಾಃ | ವಿಧೂತಕ ಮಾಯಾಂತಿ ಸ್ವರ್ಗ೦ ಸುಕೃತಿನೋ ಯಥಾ” ಎಂಬಂತೆ ರಾಜದಂಡನವನ್ನು ಹೊಂದಿದ ಗರಿಗೆ ನರಕಶಿಕ್ಷೆಯಿಲ್ಲವೆಂದು ಸ್ಮತಿಯು: