ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೨ ಶ್ರೀಮದ್ಭಾಗವತವು ಅಧ್ಯಾ. ೭. ರೀಕ್ಷಿಸಬೇಕೆಂಬುದಕ್ಕಾಗಿ,ಎಷ್ಟೆಷ್ಟು ವಿಧದಿಂದ ಬೋಧಿಸಿದರೂ, ಅರ್ಜುನನು ದ್ರೋಣಾಚಾರರಿಂದ ತನಗುಂಟಾದ ಮಹೋಪಕಾರವನ್ನು ಸ್ಮರಿಸಿಕೊಂ ಡು, ಪುತ್ರಘಾತುಕನಾಗಿದ್ದರೂ ಆ ಗುರಪುತ್ರನನ್ನು ಕೊಲ್ಲುವುದಕ್ಕೆ ಸಮ್ಮ ತಿಸಲಿಲ್ಲ. ಕೊನೆಗೆ ಅಶ್ವತ್ಥಾಮನನ್ನು ಕಂಬಕ್ಕೆ ಕಟ್ಟಿವಹಾಗೆಯೇ,ತನ್ನ ಶಿಬಿರ ಕೈ ತಂದು, ಪುತ್ರಶೋಕದಿಂದ ವಿಲಪಿಸುತ್ತಿದ್ದ ದಪಡಿಯ ಮುಂದೆ ನಿಲ್ಲಿಸಿ ದನು. ಆಗ ದಪಡಿಯು ಮೆಲ್ಲಗೆ ಮುಂದೆಬಂದು, ಪಶುವಿನಂತೆ ಹಗ್ಗಗಳಿಂದ ಬಿಗಿಯಲ್ಪಟ್ಟು ಲಜ್ಜೆಯಿಂದ ತಲೆಯೆತ್ತದೆ ನಿಂತಿರುವ ಆತನ ಸ್ಥಿತಿಯನ್ನು ನೋಡಿದಳು ಆಕೆಯು ಅತ್ಯಂತಸುಶೀಲೆಯಾದುದರಿಂದ, ಅಶ್ವತ್ಥಾಮನು ಮ ಹಾಪರಾಧಿಯಾಗಿದ್ದರೂ, ಅವನನ್ನು ನಿಂದಿಸದೆ, ಅವನಲ್ಲಿ ಕೋಪವನ್ನೂ ತೋ ರಿಸದೆ, ವಿನಯದಿಂದ ನಮಸ್ಕರಿಸಿದಳು. ಹೀಗೆ ಗುರುಪುತ್ರನನ್ನು ನಮಸ್ಕರಿಸಿ ದಮೇಲೆ, ಅರ್ಜುನನಕಡೆಗೆ ತಿರುಗಿ “ನಾಥಾ! ಈ ನಮ್ಮ ಗುರುಪುತ್ರನನ್ನು ಹೀಗೆ ಸಿನು ಕಂಬಕ್ಕೆ ಕಟ್ಟಿ ತಂದಿರುವೆಯಲ್ಲಾ!ಇವನ ಕಷ್ಟವನ್ನು ನೋಡಿ ನಾ ನುಸಹಿಸಲಾರೆನು ಈತನಾದರೋ!ಜಾತಿಮಾತ್ರದಿಂದಲೇನಮಗೆ ಪೂಜ್ಯನು. ಇದರಮೇಲೆ ಗುರುಪುತ್ರನಾದುದರಿಂದ ಗುರುವಿಗೆ ಸಮಾನನು ಆದುದರಿಂ ದ ಈ ಕ್ಷಣವೇ ನೀನು ಇವನ ಸೆರೆಯನ್ನು ಬಿಡಿಸಬೇಕು! ನೀನು ಪ್ರಯೋಗೋ ಪಸಂಹಾರಮಂತ್ರಗಳೊಡನೆ, ಅನೇಕಾಸ್ತ್ರಸಮೂಹಗಳನ್ನೂ, ಧನುರ್ವೇದ ರಹಸ್ಯವನ್ನೂ, ಆ ದ್ರೋಣಾಚಾರನಿಂದಲೇ ಕಲಿತವನಲ್ಲವೆ? ಈ ಅಶ್ವತ್ಯಾಮ ನೂಕೂಡ ಪುತ್ರರೂಪದಿಂದಿರುವ ಆ ದ್ರೋಣಾಚಾರನೆಂದೇ ತಿಳಿಯಬೇಕು. ಇದಲ್ಲದೆ ನಿನ್ನ ಗುರುವಾದ ದ್ರೋಣನಿಗೆ ಅರ್ಧಶರೀರಭೂತೆಯಾಗಿಯೂ,ವೀರ ಪುತ್ರವತಿಯಾಗಿಯೂ ಇರುವ ಕೃಪಿಯು, ತನ್ನ ಪತಿಯೊಡನೆ ಸಹಗಮನಮಾ ಡದೆ ಇನ್ನೂ ಇವನಿಗಾಗಿಯೇ ಜೀವಿಸಿರುವಳು ಈ ಸ್ಥಿತಿಯಲ್ಲಿ ನೀನು ಈತನಿಗೆ ಅಪಕಾರವನ್ನು ಮಾಡಿದ ಪಕ್ಷದಲ್ಲಿ, ನಿನ್ನ ಗುರುವಿಗೂಗುರುಪತ್ನಿಗೂ ದ್ರೋ ಹಮಾಡಿದಂತಾಗುವುದು. ಎಲೈಧರ್ಮಜ್ಞನೆ ! ನಮಗೆ ಪರಮಪೂಜ್ಯವಾಗಿ ಯೂ, ವಂದನೀಯವಾಗಿಯೂ ಇರುವ ಗುರುಕುಲಕ್ಕೆ ದುಃಖವನ್ನು ತರು ವುದು ಎಂದೆಂದಿಗೂ ಯುಕ್ತವಲ್ಲ. ಈಗ ನಾನು ಪತ್ರದುಃಖದಿಂದ ಕಣ್ಣೀರು ಬಿಟ್ಟು ದುಃಖಿಸುವಂತೆಯೇ, ಪತಿವ್ರತೆಯಾಗಿಯೂ, ಗುರುಪತ್ನಿಯಾಗಿಯೂ