ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೭.) ಪ್ರಥಮಸ್ಕಂಧವು ೧೧ ಇರುವ ಆ ಬಾಹ್ಮಣಮಾತೆಯೂ, ಪುತ್ರದುಃಖದಿಂದ ಕೊರಗುವಂತಾಗುವು ದಲ್ಲವೆ? ಇದಕ್ಕೆ ನೀನು ಅವಕಾಶವನ್ನು ಕೊಡಬಾರದು. ಇದರಮೇಲೆ ಯಾವ ರಾಜನು ಬಾಹ್ಮಣಕುಲಕ್ಕೆ ಅಪಕಾರವನ್ನು ಮಾಡುವನೋ, ಆ ರಾಜನು ತನ್ನ ಬಂಧುಮಿತ್ರಪರಿವಾರಗಳೊಡನೆ ದುಃಖಾಗ್ನಿ ಯಿಂದ ಬೇ ಯುವುದಲ್ಲದೆ, ಅವನ ವಂಶವೂ ನಿರ್ಮಲವಾಗುವುದು” ಎಂದಳು. ಹೀಗೆ ಧರ್ಮಯಕವಾಗಿಯೂ, ನ್ಯಾಯಸಮ್ಮತವಾಗಿಯೂ, ದಯಾಸೂಚಕವಾ ಗಿಯೂ, ಅಸತ್ಯವೂ ಅಪ್ರಿಯವೂ ಅಲ್ಲದೆ ಕಾಮಾನುಗುಣವಾಗಿಯೂ,ಗಂಭೀ ರವಾಗಿಯೂ ಇರುವ ಆ ಗೌಪದಿಯ ಮಾತುಗಳನ್ನು ಕೇಳಿ,ಸಮೀಪದಲ್ಲಿದ್ದ ಧರ್ಮರಾಜನು ಆಕೆಯನ್ನು ಕುರಿತು, ದೇವಿ!ನಿನ್ನ ಮಾತಿಗಾಗಿ ನಾನು ಬಹಳ ಸಂತೋಷಪಟ್ಟನು. ಈ ಸಿನ್ನ ವಾಕ್ಯವು ಧರ್ಮಯುಕ್ತವಾಗಿಯೂ, ನ್ಯಾಯ ಸಮ್ಮತವಾಗಿಯೂ ಇರುವುದು. ದಯಾವಿಶಿಷ್ಟವಾದ ಈ ನಿನ್ನ ಮಾತು ಸರಾಭಿವಂದ್ಯವಾದುದು” ಎಂದು ಅವಳನ್ನು ಬಹಳವಾಗಿ ಕೊಂಡಾಡುತಿದ್ದ ಮ, ನಕುಲಸಹದೇವ, ಸಾತ್ಯಕಿ ಯೂ, ಶ್ರೀಕೃಷ್ಣನೂ, ಇನ್ನೂ ಅಲ್ಲಿದ್ದ ಇತರ ಜನರೆಲ್ಲರೂ ಪಡಿಯನ್ನು ಬಹಳವಾಗಿ ಸ್ತೋತ್ರ ಮಾಡುತಿದ್ದರು ! ಈ ಮಾತುಗಳೆಲ್ಲವನ್ನೂ ಕೇಳುತಿದ್ದ ಹಾಗೆಲ್ಲಾ ಭೀಮನಿಗೆ ಮೇಲೆಮೇಲೆ ಕೋಪವು ಉಕ್ಕಿಬರುತಿತ್ತು. ಕೋಪದಿಂದ ಜ್ವಲಿಸುವಂತೆ ಕಣ್ಣುಗಳಿಂದ ಕಿಡಿಗಳನ್ನು ಕೆದರುತ್ತ, “ಹೋ!ಸಾಕು!ಸುಮ್ಮನಿರಿ! ಈ ಪದಿಯು ಹೇಳಿದ ಮಾತು ಸತ್ಯಧಾ ಯುಕ್ತವಲ್ಲ! ಈದುರ್ಮಾರ್ಗನು, ತನಗಾಗಲಿ, ತನ್ನ ಪ್ರಭುವಾದ ಧೃತರಾಷ್ಟ್ರನಿಗಾಗಲಿ, ಹಿತವಲ್ಲ ವೆ ತಿಳಿದೂಕೂಡ, ನಿದ್ರೆಯಿಂದ ಮೈಮರೆತಿದ್ದ ಮಕ್ಕಳನ್ನು ನಿಷ್ಟ್ರಯೋಜನವಾಗಿ ಕೊಂದಿರುವನು.ಇವನನ್ನು ಕೊಲ್ಲುವುದೇ ಯುಕ್ತ ವೇಹೊರತು,ಇವನನ್ನು ಮನ್ನಿಸುವುದು ಸರೋಧಾಯುಕ್ತವಲ್ಲ” ಎಂದನು. ಆಗ ಸಮೀಪದಲ್ಲಿ ನಿಂತಿದ್ದ ಶ್ರೀಕೃಷ್ಣನು, ಕೋಪಯುಕ್ತವಾದ ಭೀಮನವಾ ಕ್ಯವನ್ನೂ ,ದಯಾದ್ರ್ರವಾದ ದ್ರೌಪದಿಯ ಮಾತನ್ನೂ ಕೇಳಿ, ತನ್ನಲ್ಲಿತಾನು ಮುಗುಳ್ಳಗೆಯಿಂದ ನಗುತ್ತ, ತನ್ನ ಮಿತ್ರನಾದ ಅರ್ಜುನನ ಮುಖವನ್ನು ನೋ ಡಿ, ಅರ್ಜುನಾ!ಇದುವರೆಗೆ ನಡೆದ ಸಂಭಾಷಣೆಗಳೆಲ್ಲವನ್ನೂ ಕೇಳಿದೆಯಷ್ಟೆ?