ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೪ ಶ್ರೀಮದ್ಭಾಗವತವು [ಅಧ್ಯಾ. ೭. ಇವನು ಜಾತಿಯಲ್ಲಿ ಬ್ರಾಹ್ಮಣನಾಗಿಯೂ, ಇವರಮೇಲೆ ಗುರುಪುತ್ರನಾಗಿ ಯೂ ಇರುವುದರಿಂದ, ಇವನನ್ನು ಕೊಲ್ಲಬಾರದು ! ಕೊಲೆಗೆ ಯೋಗ್ಯವಾ ದ ಕಾರವನ್ನು ನಡೆಸಿರುವುದರಿಂದ,ಇವನನ್ನು ಕೊಲ್ಲದೆಯೂ ಬಿಡಬಾರದು. ಹೀಗೆ ಈ ಧರ್ಮಸಂಕಟವು ಬಂದೊದಗಿರುವದಷ್ಟೆ? ಇವೆರಡನ್ನೂ ನಾನು ಮೊದಲೇ ನಿನಗೆ ತಿಳಿಸಿರುವೆನಲ್ಲವೆ? ಇವೆರಡುಪಕ್ಷಕ್ಕೆ ವಿರೋಧವಿಲ್ಲದ ರೀತಿ ಯಲ್ಲಿ ಕಾರವನ್ನು ಹೇಗೆ ನಡೆಸಬೇಕೋ ಅದನ್ನು ಸಿನೇ ಯೋಚಿಸಿನೋಡು! ಪರಸ್ಪರೆವಿರುದ್ಧವಾದ ಈ ಧರ್ಮಸೂಕ್ಷಗಳೆರಡಕ್ಕೂ ಹಾನಿಯುಂಟಾಗ ಬಾರದು!ನಿನ್ನ ಪ್ರತಿಜ್ಞೆಯನೆರವೇರಬೇಕು!ದಶ್ರಪರಯ ಮತ್ತು ಭೀಮಸೇನ ನ ಮಾತುಗಳಿಗೂ ವಿರೋಧವುಂಟಾಗಬಾರದು. ಆ ರೀತಿಯಾಗಿ ನಡೆಸುವುದ ಕೈ ಉಪಾಯವನ್ನು ಯೋಚಿಸು, ಅರ್ಜುನಾ*ಮುಖ್ಯವಾಗಿ ನನಗೂ ನಿನಗೂ ಈ ದಾಸರಿಗೂ, ಈ ಭೀಮನಿಗೂ, ಈ ನಾಲ್ವರಿಗೂ ಸಮ್ಮತವಾದ ರೀತಿ ಯಲ್ಲಿ ಕಾವ್ಯವನ್ನು ನಡೆಸು!” ಎಂದನು. ಈ ಮಾತನ್ನು ಹೇಳುವಾಗಲೇ ಅರ್ಜುನನು ಶ್ರೀಕೃಷ್ಣನ ಮನೋಭಿಪ್ರಾಯವನ್ನು ತಿಳಿದು, ಖಡ್ಗವ ನ್ನು ಕೈಗೆತ್ತಿಕೊಂಡು, ಅಶ್ವತಮನ ತಲೆಯಲ್ಲಿದ್ದ ಮಾಣಿಕ್ಯವನ್ನು ಅವನ ತಲೆಕೂದಲಿನೊಡನೆ ಕಿತ್ತುಕೊಂಡು, ಅವನ ಕುಗಳನ್ನು ಬಿಡಿಸಿಕಳುಹಿಸಿ ಬಿಟ್ಟನು. ಮೊದಲೇ ತಿಶುಹತ್ಯಾ ಪಾತಕtಂದ ಕಳೆಗೆಟ್ಟಿ ಅಶ್ವತ್ಥಾಮನಿಗೆ ತಲೆಯಲ್ಲಿ ಸಹಜವಾಗಿ ಹುಟ್ಟಿದ ಮಾಣಿಕ್ಯವೂ ಹೋದಮೇಲೆ, ಅವನ ತೇಜ

  • ಇಲ್ಲಿ ಅರ್ಜುನನು ಅಶ್ವತ್ಥಾಮನ ಶಿರೋರತ್ನವನ್ನು, ಅವನ ತಲೆಕೂದ ಲೋಡನೆ ಕತ್ತರಿಸಿಕೊಂಡು ಕಳುಹಿಸುವುದರಿಂದ, ಶ್ರೀ ಕೃಷ್ಣಜ್ಞೆಯಂತೆ ಎಲ್ಲರ ಅಭಿ ಮತವನೂ ನೆರವೇರಿಸಿದಂತಾಗುವುದು. ಹೇಗೆಂದರೆ---- ಅಶ್ವತ್ಥಾಮನ ) ಡನೆ ಅವನಿಗೆ ಸಹಜವಾದ ಶಿರೋರತ್ನವನ್ನು ಕಿತ್ತುಕೊಳ್ಳುವುದರಿಂದ ಅವನ ತಲೆ ಯನ್ನು ಕಡಿದು ತಂದಂತೆಯೇ ಆಗುವುದು. ಇದರಿಂದ ಅರ್ಜುನ ಪ್ರತಿಜ್ಞೆಯು ನೆರ ನೇರಿದಂತಾಗುವುದು. ಪ್ರಾಣಹಾನಿಯಿಲ್ಲದೆ ಬಿಡುವುದರಿಂದ ದೌಪದಿಯ ಇಷ್ಟವೂ ನೆರವೇರುವುದು. ಅಶ್ವತ್ಥಾಮನಿಗೆ ಆ ವಿಧವಾದ ಮಾನಭಂಗವು ಮರಣಪ್ರಾಯವೇ ಆದುದರಿಂದ ಭೀಮನ ಕೋರಿಕೆಯನ್ನೂ, ಕೃಷ್ಣನ ಆಜ್ಞೆಯನ್ನೂ ನಡೆಸಿದಂತಾಗು ವುದು, ಇವೆಲ್ಲಕ್ಕೂ ಅನುಗುಣವಾಗಿಯೇ ಅರ್ಜುನನು ಅಶ್ವತ್ಥಾಮನ ಶಿರೋಮಣಿ ಯನ್ನು ಕಿತ್ತುಕೊಂಡು ಕಳುಹಿಸಿದುದಾಗಿ ಗ್ರಾಹ್ಯವು.