ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು [ಅಧ್ಯಾ. ೮. ದಲ್ಲಿ ಸಮಸ್ತಪ್ರಾಣಿಗಳಿಗೂ ಜನನಮರಣಾದಿಗಳನ್ನು ಂಟುಮಾಡುತ್ತಿರುವ ಕಾಲಗತಿಯು ಯಾರಿಗೂ ತಪ್ಪಿದುದಲ್ಲವೆಂಬ ತತ್ವವನ್ನು ತಿಳಿಸಿ, ಅವರೆಲ್ಲರಿ ಗೂ ಸಮಾಧಾನವನ್ನು ಹೇಳಿದನು. ಅಲ್ಲಿದ್ದ ಋಷಿಗಳೆಲ್ಲರೂ ಹಾ ಗೆಯೇ ತತ್ರೋಪದೇಶವನ್ನು ಮಾಡಿ ಸಮಾಧಾನವನ್ನು ಹೇಳುತಿದ್ದರು. ಎಲೈ ಶೌನಕಾದಿಗಳೇ! ದುರೊಧನಾಥಿಗಳು ಹಿಂದೆ ದಪಡಿಯ ಮಾನಭಂಗವ ನ್ನು ಮಾಡಿದಾಗಲೇ ಅವರ ಆಯುಸ್ಸು ತೀರಿತು! ಹೀಗೆ ಮೊದಲೇ ಮೃತಪ್ಪಾ ಯರಾಗಿದ್ದ ಆ ಕೌರವರನ್ನು ಶ್ರೀಕೃಷ್ಣನು ಅರ್ಜುನಾದಿಗಳ ಕೈಯಿಂದ ತಿರುಗಿ ಕೊಲ್ಲಿಸಿದಂತಾಯಿತೇಹೊರತು ಬೇರೆಯಲ್ಲ. ಆ ದುರಾತ್ಮರು ಜೂ ಜಿನ ನೆವದಿಂದ ಸಾಧಿಸಿದ ರಾಜ್ಯವೂ ತಿರುಗಿ ಧರ್ಮರಾಜನ ವಶವಾಯಿತು . ಆಮೇಲೆ ಶ್ರೀಕೃಷ್ಣನು ಧರ್ಮರಾಜನಿಂದ ವಿದ್ಯುಕ್ತವಾಗಿ ಆಶ್ವಮೇಧ ಯಾಗಗಳನ್ನು ಮಾಡಿಸಿದನು. ದೇವೇಂದ್ರನ ಕೀರ್ತಿಯಂತೆ ಆ ಧರ್ಮರಾಜನ ಕೀರ್ತಿಯು ತ್ರೈಲೋಕ್ಯವನ್ನೂ ವ್ಯಾಪಿಸಿತು. ಶ್ರೀಕೃಷ್ಣನ ಕೃಪೆಯಿಂದಲೇ ಧರ್ಮರಾಜನಿಗೆ ಈ ಅಭ್ಯುದಯಗಳೆಲ್ಲವೂ ಕೈಗೂಡಿದುವು. ಆಮೇಲೆ ಕೃಷ್ಣ ನು ಪಾಂಡವರಿಂದ ಅನುಮತಿಯನ್ನು ಪಡೆದು, ಸಾತ್ಯಕಿಯನ್ನೂ, ಉದ್ಯವನ ನ್ಯೂ ಸಂಗಡ ಕರೆದುಕೊಂಡು, ದ್ವಾರಕೆಗೆ ಹೊರಡಲುದ್ಯುಕ್ತನಾದನು. ವ್ಯಾಸಾದಿಮಹರ್ಷಿಗಳೆಲ್ಲರೂ ಅವನನ್ನು ಸ್ವಲ್ಪ ದೂರವರೆಗೆ ಹಿಂಬಾಲಿಸಿ ಬಂದರು. ಶ್ರೀಕೃಷ್ಣನು ಅವರೆಲ್ಲರನ್ನೂ ಯಥೋಚಿತವಾಗಿ ಪೂಜಿಸಿ, ಅವ ರಸತ್ಕಾರಗಳನ್ನು ಪ್ರೀತಿಯಿಂದ ಕೈಕೊಂಡು.ರಥವನ್ನೇರಿ ಮುಂದಕ್ಕೆ ಹೊರ ಡುವಷ್ಟರಲ್ಲಿ, ಉತ್ತರೆಯುಇದ್ದಕ್ಕಿದ್ದ ಹಾಗೆಭಯಾತುರೆಯಾಗಿ,ಶ್ರೀಕೃಷ್ಣನ ರಥವನ್ನು ಬಿಡದೆ ಹಿಂಬಾಲಿಸಿಹೊರಟಳು. ಹೀಗೆ ಭಯದಿಂದ ಹಿಂಬಾ ಲಿಸಿ ಬರುತ್ತಿರುವ ಉತ್ತರೆಯನ್ನು ಕಂಡೊಡನೆ ಕೃಷ್ಣನು, ರಥವನ್ನು ನಿಲ್ಲಿಸಿದ ನು.ಆಗ ಉತ್ತರೆಯುಕೃಷ್ಣನನ್ನು ನೋಡಿ ವಿಜ್ಞಾಪಿಸುವಳು. ಕೃಷ್ಣಾ ರಕ್ಷಿ ಸು! ರಕ್ಷಿಸು! ನೀನು ಬ್ರಹ್ಮಾದಿದೇವತೆಗಳಿಗೂ ದೇವಯನಿಸಿಕೊಂಡವನು? ಸಮಸ್ತಪ್ರಪಂಚಗಳನ್ನೂ ರಕ್ಷಿಸತಕ್ಕವನು. ಸಮಸ್ತಸೂಕ್ಷಾರ್ಥಗಳನ್ನೂ ತಿಳಿದವನು. ನಿನ್ನೊಬ್ಬನನ್ನು ಹೊರತು ಲೋಕದಲ್ಲಿಜರಾಮರಣಾದಿಭಯಗಳು ಬೇರೆಯಾರನ್ನೂ ಬಿಟ್ಟುದಲ್ಲ. ಆ ಮೃತ್ಯುಭಯವನ್ನು ತಪ್ಪಿಸುವುದಕ್ಕೆ ಬೇರೆ