ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೦ ಶ್ರೀಮದ್ಭಾಗವತವು [ಅಧ್ಯಾ. ೮. ಗಳಿಲ್ಲದವನು! ಹಸಿವು, ಬಾಯಾರಿಕೆ, ಶೋಕ ಮೋಹ, ಜರಾಮರಣಗಳೆಂಬ ಆರುಬಗೆಯ ಬಾಧೆಗಳಿಲ್ಲದವನು! ಆತ್ಮಾರಾಮನು! ಮೋಕ್ಷಪ್ರದನು. ನಿನಗೆ ನಮಸ್ಕರಿಸುವೆನು.ದೇವದೇವಾ'ಕಾಲವೆಂಬುದಕ್ಕೆ ಕೊನೆಮೊದಲಿಲ್ಲ! ಅದು ಸತ್ವ ಸಮವಾಗಿ ವರ್ತಿಸತಕ್ಕುದು. ಆ ಕಾಲದಿಂದಲೇ ಭೂತಗಳಿಗೆ ಅನ್ನೊವ್ಯಕಲ ಹವು ಸಂಭವಿಸುತ್ತಿರುವುದು!ಬ್ರಹ್ಮಾದಿದೇವತೆಗಳನ್ನಾದರೂ ಅದು ವಶೀಕರಿ ಸದೆ ಬಿಡುವುದಿಲ್ಲ. ಆ ಕಾಲವೇ ನಿನಗೆ ಶರೀರರೂಪವಾಗಿರುವುದೆಂದು ತಿಳಿಯು ವೆನು.ಎಲೈ ಮಹಾತ್ಮನೆ!ನೀನು ಮನುಷ್ಯರನ್ನು ಹೋಲುತ್ತಿರುವಾಗಲೂನಿನ್ನ ವ್ಯಾಪಾರಗಳನ್ನು ಯಾವನೂ ಕಂಡುಕೊಳ್ಳಲಾರನು. ನಿನಗೆ ಒಬ್ಬನು ಪ್ರಿಯ ನೆಂದೂ, ಮತ್ತೊಬ್ಬನು ದ್ವೇಷಿಯೆಂದೂ ಭೇದಬುಟ್ಟಲ್ಲ. - ನು ತೋ ರಿಸತಕ್ಕೆ ನಿಗ್ರಹವೂಕೂಡ ಕೊನೆಗೆ ಪರಮಾನುಗ್ರಹರೂಪವಾಗಿ ಮುಕ್ತಿ ಯನ್ನೇ ಕೈಗೂಡಿಸುವುದು. ಯಮಳಾರ್ಜುನಾಡಿಗಳು ನಿನ್ನಿಂದ ನಿಗ್ರಹಿಸಲ್ಪ ಟ್ಟು ಮುಕ್ತಿಯನ್ನು ಹೊಂದಿದುದೇ ಇದಕ್ಕೆ ನಿದರ್ಶನವು.ಆದುದರಿಂದ ನಿನಗೆ ಯಾರಲ್ಲಿಯೂ, ಯಾವ ವಿಧವಾದ ವೈಷಮ್ಯವೂ ಇರದು! ಹೀಗೆ ಸತ್ವಸಮ ನಾಗಿರುವ ನಿನ್ನಲ್ಲಿ ವೈಷಮ್ಯವನ್ನಾ ರೂಪಿಸಬೇಕಾದರೆ ಅವರ ಬುದ್ಧಿಯೇ ವಿಷಮವಾಗಿರಬೇಕಲ್ಲದೆ ಬೇರೆಯಲ್ಲ ! ಓ ವಿಶ್ವಾತ್ಮಾ! ನೀನು ಕರ್ಮಸಂಬಂ ಧವಿಲ್ಲದವನು. ಕರ್ಮಾಧೀನವಾದ ಜನ್ಮವಿಲ್ಲದವನು, ನೀನು ತಿರಕ್ಕುಗಳಲ್ಲಿ ಯೂ, ಋಷಿಗಳಲ್ಲಿಯೂ, ಮನುಷ್ಯರಲ್ಲಿಯೂ ಬೇರೆಬೇರೆ ಅವತಾರಗಳನ್ನೆತ್ತಿ ನಡೆಸಿದ ಕಾವ್ಯಗಳೆಲ್ಲವೂ ಕೇವಲನಟನಗಳಲ್ಲದೆ ಬೇರೆಯಲ್ಲ. ಚಿಕ್ಕಂದಿನಲ್ಲಿ ನೀನು ಯಾವುದೋ ಒಂದು ತಪ್ಪನ್ನು ಮಾಡಿದುದಕ್ಕಾಗಿ,ಯಶೋದೆಯುನಿ ಇನ್ನು ಹಗ್ಗದಿಂದ ಕಟ್ಟುವಸಂದಭ್ರದಲ್ಲಿ ನಿನ್ನ ಕೈಯನ್ನು ಹಿಡಿದಾಗ,ಕಾಲಮ್ಮ ತ್ಯುವಿಗೂ ನೀನು ಭಯವನ್ನುಂಟುಮಾಡಬಲ್ಲವನಾಗಿದ್ದರೂ, ಅಬಲೆಯಾದ ಆಕೆಯೊಬ್ಬಳಿಗೆ ಎಷ್ಟೋಭಯಪಟ್ಟವನಂತೆ ನಟಿಸುತ್ತ, ಕಾಡಿಗೆಯೆಲ್ಲವೂ ಕೆದರುವಂತೆ ಕಣ್ಣೀರುಬಿಟ್ಟು, ಬೆದರಿದ ದೃಷ್ಟಿಗಳಿಂದ ನೋಡುತ್ತ ನಿಂತೆ ಯಲ್ಲವೆ? ಆಗ ಮುಖದಲ್ಲಿ ಭಯವನ್ನು ನಟಿಸಿದ ನಿನ್ನ ಸ್ಥಿತಿಯು ನನ್ನನ್ನು ಸೂಚಿತವಾಗುವುದು, ಜರಾಮರಣಾದಿಗಳಿಲ್ಲವೆಂಬುದರಿಂದ 'ಬದ್ಧ ಜೀವನಿಗೂ, ಆತ್ಮಾರಾ ಮತ್ವಮೋಕ್ಷಪ್ರದಗಳಿಂದ ನಿತ್ಯಮುಕ್ತ ಜೀವರಿಗೆ ವ್ಯಾವೃತ್ತಿಯು ಹೇಳಲ್ಪಡುವುದು,