ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೮. | ಪ್ರಥಮಸ್ಕಂಧವು. ೧೨೧ ಮೋಹಸಮುದ್ರದಲ್ಲಿ ಮುಳುಗಿಸುತ್ತಿರುವುದು. ಕೃಷ್ಣಾ ! ಆ ನಿನ್ನ ಭಯ ವು ಕೇವಲನವನವಲ್ಲದೆ ನಿಜವೆಂದು ಹೇಳುವುದಕ್ಕಾದೀತೇ ? ನೀನು ಜನ್ಮಾ ದಿಗಳಿಲ್ಲದವನಾದರೂಕೂಡ, ಕೆಲವರು ನಿನ್ನನ್ನು , ಪುಣ್ಯಶ್ಲೋಕನಾಗಿಯೂ, ನಿನಗೆ ಪರಮಭಕ್ತನಾಗಿಯೂ ಇರುವ ಯದುವಿನ ಕೀರ್ತಿಯನ್ನು ಹರ ಡಿಸುವುದಕ್ಕಾಗಿ ಮಲಯಪವ್ವತದಲ್ಲಿ ಚಂದನವೃಕ್ಷದಂತೆ ಆತನ ವಂಶದಲ್ಲಿ ಹಟ್ಟಿದುವಾಗಿ ಹೇಳುವರು, ಬೇರೆಕೆಲವರು ಪರಮಪುರುಷನಾದ ನೀನು ದುಷ್ಟರಾಕ್ಷಸರ ವಧಾರ್ಥವಾಗಿಯೂ,ಲೋಕಕ್ಷೇಮಕ್ಕಾಗಿಯೂ, ದೇವಕೀ ವಸುದೇವರ ಪ್ರಾರ್ಥನೆಯಮೇಲೆ ಅವರಿಗೆ ಕುಮಾರನಾಗಿ ಜನಿಸಿದೆ ಯೆಂದು ಹೇಳುವರು. ಇನ್ನು ಕೆಲವರು, ನೀನು ಬ್ರಹ್ಮಾದಿದೇವತೆಗಳಿಂದ ಪ್ರಾರ್ಥಿತನಾಗಿ, ಸಮುದ್ರದಲ್ಲಿ ಭಾರದಿಂದ ಮುಳುಗಿ ಹೋಗುತ್ತಿರುವ ಹಡಗಿನಿಂದ, ಅದರ ಭಾರವನ್ನಿಳಿಸುವಂತೆ, ಭೂಭಾರವನ್ನು ತಪ್ಪಿಸುವುದಕ್ಕಾ ಗಿಯೇ ಹುಟ್ಟಿದೆಯೆಂದು ಹೇಳುವರು, ತತ್ವಜ್ಞಾನಿಗಳಾದ ಮತ್ತೆ ಕೆಲವರು, ಈ ಲೋಕದಲ್ಲಿ ಅಜ್ಞಾನದಿಂದಲೂ, ವಿಷಯಾಭಿಲಾಷೆಯಿಂದಲೂ, ಆದ ಹೈನುಕೂಲಗಳಾದ ಕಾರಗಳಿಂದಲೂ ಬದ್ಧರಾಗಿ, ಸಂಸಾರಸಮುದ್ರದಲ್ಲಿ ಸಿಕ್ಕಿ ನರಳುತ್ತಿರುವ ಮನುಷ್ಯರಿಗೆ, ನಿನ್ನ ಚರಿತ್ರಗಳನ್ನು ಕೇಳುವುದಕ್ಕೂ, ನಿನ್ನ ರೂಪವನ್ನು ಧ್ಯಾನಿಸುವುದಕ್ಕೂ ಆಶೆಹುಟ್ಟಿಸುವಂತೆ, ಈ ಅವತಾರಗಳ ನೈತಿರುವೆಯೆಂದು ಹೇಳುವರು. ದೇವಾ! ನಿನ್ನ ಚರಿತ್ರಗಳನ್ನು ಯಾರು ಕೇ ಳುವರೋ, ಯಾರು ಹೇಳುವರೋ, ಯಾರು ಗಾನಮಾಡುವರೋ, ಯಾರು ಆಗಾಗ ಸ್ಮರಿಸುವರೋ, ಯಾರು ನಿನ್ನ ಗುಣವರ್ಣನದಿಂದಾನಂದಿಸುವರೋ, ಅಂತವರುಮಾತ್ರವೇ ಶೀಘ್ರಕಾಲದಲ್ಲಿ ಸಂಸಾರತಾರಕವಾದ ನಿನ್ನ ಪಾ ದಪದ್ಮಗಳನ್ನು ನೋಡಬಲ್ಲರು. ಎಲೈ ಮಹಾತ್ಮನೆ! ನಿನ್ನ ಪಾದಾಶ್ರಯದಿಂ ದಸಮಸ್ತದುಃಖಗಳನ್ನೂ ಜಯಿಸಿದ ನಮಗೆ, ಈ ನಿನ್ನ ಪಾದಪದ್ಮಗಳು ಹೊರತು ಬೇರೆ ದಿಕ್ಕಿಲ್ಲ. ಹೀಗೆ ಸತ್ವವಿಧದಲ್ಲಿಯೂ ನಿನ್ನನ್ನೇ ನಂಬಿ, ನಿನ್ನಲ್ಲಿ ಸ್ನೇಹವನ್ನು ಬೆಳಸಿ, ನಿನಗೆ ಅನುಜೀವಿಗಳಾಗಿರುವ ನಮ್ಮನ್ನು ಈಗ ಬಿಟ್ಟು ಹೋಗಬೇಕೆಂದೆಣಿಸುವೆಯಾ? ಜೀವನಿಲ್ಲದಮೇಲೆ ಇಂದ್ರಿಯಗಳ ವ್ಯಾಪಾರ ವು ಹೇಗೆ ನಿಂತುಹೋಗುವುವೋ, ಹಾಗೆ ನಿನ್ನ ಸಾನ್ನಿಧ್ಯವಿಲ್ಲದಮೇಲೆ, ನಾ