ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಶ್ರೀಮದ್ಭಾಗವತವು ಅಧ್ಯಾ. ೮. ವಾಗಲಿ, ಯಾದವರಾಗಲಿ, ಯಾವ ಕಾರಕ್ಕೂ ಬೇಡದೆ ಹೋಗುವೆವು. ನಾವು ಕೇವಲನಾಮರೂಪಗಳನ್ನು ಹೊತ್ತಿದ್ದ ಮಾತ್ರಕ್ಕೆ ನಮ್ಮಿಂದೇನಾಗು ವುದು? ಸತ್ತಮಗಳಾದ ಶುಭಲಕ್ಷಣಗಳಿಂದ ಶೋಭಿತವಾದ ಈ ನಿನ್ನ ಪಾದದ ಗುರುತುಗಳು ಈ ನೆಲದಲ್ಲಿ ಕಾಣುತ್ತಿರುವವರೆಗೆ ಮಾತ್ರವೇ ಈ ದೇಶವು ಶೋಭಿಸುತ್ತಿರುವುದೇಕೊರತು, ಅದಿಲ್ಲದಿದ್ದಾಗ ಇದರ ಕಳೆಯೇ ಕೆ ಟ್ಟುಹೋಗುವುದು. ಕೃಷ್ಣಾ ! ನಿನ್ನ ಕಟಾಕ್ಷಮಾತ್ರದಿಂದಲ್ಲವೇ ಈ ಪ್ರದೇಶ ಗಳೆಲ್ಲವೂ ಸಸ್ಯಸಮೃದ್ಧಿಯಿಂದಲೂ, ಪುಷ್ಟಫಲಗಳಿಂದಲೂ ಅಲಂಕೃತವಾ ಗಿರುವುವು. ಅನುಗ್ರಹಪೂರಕವಾದ ನಿನ್ನ ಈ ನೋಟದಿಂದಲ್ಲವೇ ಇಲ್ಲಿನ ಉ ವ್ಯಾನವನಗಳೂ, ನದಿಗಳೂ, ಪತಗಳೂ ವೃದ್ಧಿ ಹೊಂದುತ್ತಿರುವುವು ! ಎಲೈ ವಿಶ್ವಾತ್ಮನೆ! ಎಲೈ ವಿಶ್ವಶರೀರನೆ! ಸಮಸ್ತ ಪ್ರಾಣಿಗಳ ಅಂತಃಕರಣ ಗಳನ್ನೂ ನಿಯಮಿಸತಕ್ಕವನು ನೀನೇ ಅಲ್ಲವೆ? ಇದೇನು? ನೀನು ನಿನ್ನ ವರಾದ ಈ ಪಾಂಡವರಲ್ಲಿಯೂ, ನನ್ನಲ್ಲಿಯೂ, ಯಾದವರಲ್ಲಿಯೂ ಇರತಕ್ಕೆ ದೃಢ ವಾದ ಸ್ನೇಹಪಾಶವನ್ನು ಭೇದಿಸುವುದಕ್ಕೆ ಪ್ರಯತ್ನಿ ಸುವೆಯಾ ? ಮುಂದೆ ನಮ್ಮ ಗತಿಯೇನು ? ನಿನಗಿಂತಲೂ ಬೇರೆ ಗತಿಯಿಲ್ಲವೆಂದು ನಂಬಿರುವ ಈ ನಮ್ಮ ಬದ್ದಿಯು, ಗಂಗಾಪ್ರವಾಹವು ಅವಿಚ್ಛಿನ್ನವಾಗಿ ಸಮುದ್ರವನ್ನು ಸೇರು ವಂತೆ, ಬಾರಿಖಾರಿಗೂ ನಿನ್ನಲ್ಲಿಯೇ ಲಯಹೊಂದಿ, ಅಮಿತಾನಂದವನ್ನು ಹೊಂದುತ್ತಿರುವುದು. ಸಮದ್ರವನ್ನು ಬಿಟ್ಟರೆ ಗಂಗಾಪ್ರವಾಹಕ್ಕೆ ಬೇರೆ ಆಶ್ರಯವೇ ಇಲ್ಲದಂತೆ, ನಿನ್ನನ್ನು ಬಿಟ್ಟರೆ ನಮಗೆ ಬೇರೆ ಆಶ್ರಯಪಿಲ್ಲವು. ಹೇ ಕೃಷ್ಣಾ ! ನನ್ನ ಪುತ್ರನಾದ ಅರ್ಜುನನಿಗೆ ನೀನು ಪರಮಮಿತ್ರನಲ್ಲವೆ ? ಭೂಮಿಗೆ ಭಾರಭೂತರಾದ ದುಷ್ಕ್ಷತ್ರಿಯರ ವಂಶವನ್ನು ದಹಿಸುವುದರಲ್ಲಿ ನಿನ್ನ ವೀರವು ಅಗ್ನಿ ಪ್ರಾಯವಾದುದು. ನೀನು ಯಾದವಕುಲಕ್ಕೆ ತಿಲಕದಂತಿ ರುವವನು. ಎಣೆಯಿಲ್ಲದ ವೀರವುಳ್ಳವನು. ಗೋಬ್ರಾಹ್ಮಣರ ಮತ್ತು ದೇವತೆ ಗಳ ಹಿತಕ್ಕಾಗಿಯೇ ಈ ಅವತಾರವನ್ನೆತ್ತಿದವನು. ಯೋಗೀಶ್ವರರೆಲ್ಲರಿಗೂ ನೀನೇ ಗುರುವೆನಿಸಿಕೊಂಡವನು. ಲೋಕದಲ್ಲಿ ನಿನ್ನನ್ನು ಯಾರುತಾನೇ ಸ್ತುತಿ ಸಬಲ್ಲರು? ಗೋವಿಂದಾ! ನಿನಗೆ ಆನೇಕವಂದನೆಗಳನ್ನು ಸಮರ್ಪಿಸುವೆನು. ನನ್ನ ಪ್ರಣಾ ಮಗಳನ್ನು ಸ್ವೀಕರಿಸು!” ಎಂದು ಕೈಮುಗಿದು ನಿಂತಿದ್ದಳು. ಹೀಗೆ