ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೪ ಶ್ರೀಮತ್ಸಾಗವತವು [ಅಧ್ಯಾ ೯. ವನು.ಅಂತಹ ಸ್ಥಿತಿಯಲ್ಲಿಯೂ ನಾನು ರಾಜ್ಯಲೋಭದಿಂದಲ್ಲವೇ ಅವನನ್ನೂ, ಅವನ ಪರಿವಾರವೆಲ್ಲವನ್ನೂ ಕೊಲ್ಲಿಸಿದಂತಾಯಿತು. ಈಪಾಪವು ನನ್ನನ್ನಂದದಿ ರುವುದೆ?ಒಂದುವೇಳೆ ಯುದ್ಧದಲ್ಲಿ ನಿಂತಶತ್ರುರಾಜರನ್ನು ಕೊಲ್ಲುವುದುಧರ್ ವೆಂದೇ ಎಣಿಸಿಕೊಂಡರೂ, ಪತಿಗಳನ್ನೂ, ಪುತ್ರರನ್ನೂ, ಬಂಧುಗಳನ್ನೂ, ಕಳೆದುಕೊಂಡು ದುಃಖಿಸುತ್ತಿರುವ ಸ್ತ್ರೀಯರ ವಿಷಯದಲ್ಲಿ ನಾನು ಮಾಡಿದ ದ್ರೋಹವನ್ನು ಅಷ್ಟಿಷ್ಟೆಂದು ಹೇಳುವುದಕ್ಕಿಲ್ಲ. ಕ್ಷತ್ರಿಯನಾಗಿಯೂ, ಗ್ಯ ಹಸ್ಥನಾಗಿಯೂ ಇರತಕ್ಕವನು ನಡೆಸತಕ್ಕ ಧರ್ಮಗಳೆಲ್ಲವನ್ನೂ ನಾನುನನ್ನ ಜೀವಾವಧಿಯಾಗಿ ತಪ್ಪದೆ ನಡೆಸುತ್ತ ಬಂದರೂ, ಈ ಪಾಪವು ನನ್ನನ್ನು ಬಿ ಮೈು ಹೋಗತಕ್ಕುದಲ್ಲ. ಯಜ್ಞಾದಿಕರ್ಮಗಳಿಂದ ಈ ಪಾಪವನ್ನು ನೀಗಿಸಿಕೊಳ್ಳಬಾರದೆ?” ಎಂದರೆ, ಕರ್ಮದಿಂದಲೇ ಕರ್ಮವನ್ನು ನೀಗಿಸಿಕೊಳ್ಳುವುದು ಹೇಗೆತಾನೇ ಸಾಧ್ಯವು ! ಕೊಳೆಯ ನೀರಿನಿಂದಲೇ ಕೊಳೆಯನ್ನು ನೀಗಿಸುವುದಕ್ಕಾದೀತೇ? ಮದ್ಯಪಾತ್ರವನ್ನು ಮದ್ಯದಿಂದಲೇ ತೊಳೆದು ಶುದ್ಧ ಮಾಡುವುದು ಸಾಧ್ಯವೆ ? ಹಾಗೆಯೇ ಬಂಧುಮಿತ್ರರನ್ನು ಕೊಲ್ಲಿಸಿದುದರಿಂದುಂಟಾದ ಈ ನನ್ನ ಮಹಾಪಾತಕವನ್ನು ಯಾಗವೆಂಬ ನೆ ವದಿಂದ ಮತ್ತೊಂದು ಪಶುವನವನ್ನು ಮಾಡಿ ಹೋಗಲಾಡಿಸಿಕೊಳ್ಳುವುದೆಂ ದರೇನು? ಆದುದರಿಂದ ಈ ನನ್ನ ಮಹಾಪಾಪವು ಯಜ್ಞಯಾಗಾದಿಗಳಿಂದ ಲೂ ನೀಗತಕ್ಕುದಲ್ಲವೆಂದೆಣಿಸುವೆನು” ಎಂದನು. ಇದು ಎಂಟನೆಯ ಅಧ್ಯಾ ಯವು. ಧರ್ಮರಾಜನು ತನ್ನ ತಮ್ಮಂದಿರೊಡನೆಯೂ, ಶ್ರೀ (ಕೃಷ್ಣನೊಡನೆಯೂ ಭೀಷ್ಮಾಚಾಯ್ಯನ ಬಳಿಗೆ ಬಂದು ) 43 ಅವನಿಂದ ಧರ್ಮೋಪದೇಶವನ್ನು ಹೊಂದಿದುದು. ಭೀ (ಸ್ಮನು ಶ್ರೀಕೃಷ್ಣನನ್ನು ಸ್ತುತಿಸುತ್ತ ದೇಹತ್ಯಾಗ )

  • ವನ್ನು ಮಾಡಿದುದು. ಹೀಗೆ ಧರ್ಮರಾಜನು ತಾನು ನಡೆಸಿದ ದ್ರೋಹಕಾರಕ್ಕಾಗಿ ಮನಸ್ಸಿ ನಲ್ಲಿ ಭಯಪಡುತ್ತ, ಪಾಪನಿವೃತ್ತಿ ಪೂರೈಕವಾಗಿ ಪುಣ್ಯಲೋಕಪ್ರಾಪ್ತಿಗೆ ಬೇಕಾದ ಧರ್ಮಗಳನ್ನು ಕೇಳಿ ತಿಳಿಯಬೇಕೆಂಬ ಅಪೇಕ್ಷೆಯಿಂದ, ಕುರುಕ್ಷೇ