ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

SUN + + . d . € d = = = ಶ್ರೀ, ಶ್ರೀಕೃಷ್ಣಾಯ ಪರಬ್ರಹ್ಮಣೇ ನಮಃ ಶ್ರೀ ಮ ಾ ಗ ವ ತ ಮಾ ಹಾ ತ್ಮ ವು. ಪೂರದಲ್ಲಿ ಒಮ್ಮೆ ಶೌನಕಮಹಾಮುನಿಯು,, ನೈಮಿಶಾರಣ್ಯದಲ್ಲಿ ಸೂತಪರಾಣಿಕನ ಬಳಿಗೆ ಬಂದು ನಮಸ್ಕರಿಸಿ “ಎಲೈ ಮಹಾತ್ಮನೆ ! ಕರ್ಣರಸಾಯನರೂಪವಾದ ಕಥೆಯೊಂದನ್ನು ನನಗೆ ವಿಸ್ತರಿಸಿ ತಿಳಿಸಬೇಕು. ಅಜ್ಞಾನವನ್ನು ನೀಗಿಸಿ, ಭಕ್ತಿಜ್ಞಾನವೈರಾಗ್ಯಗಳನ್ನು ಹೆಚ್ಚಿಸಿಕೊಳ್ಳುವು ದಕ್ಕೆ ದಾರಿಯಾವುದು? ಈ ಕಲಿಯುಗದ ಪ್ರಾಬಲ್ಯದಿಂದ ಸಮಸ್ತ ಜೀವ ರಾಶಿಗಳೂ ರಾಕ್ಷಸಪ್ರಕೃತಿಯನ್ನು ಹೊಂದಿ ಕೆಡುತ್ತಿರುವುವು. ಈ ದೋಷ ನಿವೃತ್ತಿಗೆ ಮಾರ್ಗವಾವುದು ? ಪರಮಯೋಗಿಗಳಿಗೂ ದುರ್ಲಭವಾದ ಮೋಕ್ಷವನ್ನು ಸಾಧಿಸುವುದಕ್ಕೆ ಉಪಾಯವಾವುದು?” ಎಂದನು. ಅದಕ್ಕಾ ಸೂತನು ಶೌನಕನನ್ನು ಕುರಿತು 'ಎಲೈ ಮುನಿಶ್ರೇಷ್ಟನೆ ! ಈ ಕಲಿಯುಗ ದಲ್ಲಿ ಶ್ರೀ ಶುಕಮಹಾಮುನಿಯಿಂದುಪದೇಶಿಸಲ್ಪಟ್ಟ ಭಾಗವತವೇ ಸರಾರ್ಥ ಸಿದ್ದಿಯನ್ನುಂಟುಮಾಡತಕ್ಕುದು.ಕಲಿಕಾಲವೆಂಬ ಕ್ರೂರಸರ್ಪದ ಬಾಯಿಂದ ತಪ್ಪಿಸಿ ಕಾಪಾಡುವುದಕ್ಕೆ, ಶ್ರೀಮದ್ಭಾಗವತಕಥಾನುಸಂಧಾನವೇ ಸರೋ ತಮವಾದ ಸಾಧನವು. ಮನಶ್ಯುಗೆ ಇದಕ್ಕಿಂತಲೂ ಮೇಲಾದ ಉಪಾಯಾಂತರವಿಲ್ಲ. ಜನ್ಮಾಂತರದಲ್ಲಿ ವಿಶೇಷಸುಕೃತಗಳನ್ನು ಮಾ ಡಿದ್ದವರಿಗಲ್ಲದೆ ಆ ಭಾಗವತವೆಂಬ ಶಾಸ್ತ್ರವು ಸುಲಭವಲ್ಲ. ಹಿಂದೆ ಶುಕ ಮುನಿಯು ಪರೀಕ್ಷಿದ್ರಾಜನಿಗೆ ಭಾಗವತವನ್ನು ಪದೇಶಿಸುವುದಕ್ಕಾಗಿ ಸಭೆಗೆ ಬಂದು ಕುಳಿತೊಡನೆ, ದೇವತೆಗಳೆಲ್ಲರೂ ತಮ್ಮಲ್ಲಿದ್ದ ಅಮೃತಕಲಶ ದೊಡನೆ ಬಂದು, ಆ ಮಹರ್ಷಿಗೆ ನಮಸ್ಕರಿಸಿ “ಎಲೈ ಮಹಾಮುನಿಯೆ ? ಇದೋ! ನಾವು ತಂದಿರುವ ಈ ಅಮೃತಕಲಶವನ್ನು ಸ್ವೀಕರಿಸು! ಇದನ್ನು ನಿನ್ನ