ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧ್ಯಾ. ೯ ] ಪ್ರಥಮಸ್ಕಂಧವು. ೧೨೫ ತ್ರದಲ್ಲಿ ಮರಣೋನ್ಮುಖನಾಗಿ ಮಲಗಿದ್ದ ಭೀಷ್ಮಾಚಾರರನ್ನು ನೋಡುವು ದಕ್ಕಾಗಿ ಹೊರಟನು. ಇವನಹಿಂದೆ ಭೀಮಾರ್ಜುನರೇ ಮೊದಲಾದ ಇವನ ತಮ್ಮಂದಿರೆಲ್ಲರೂ, ಉತ್ತಮಾಶ್ವಗಳಿಂದಲೂ, ಸುವರ್ಣಭೂಷಣಗಳಿಂದ ಲೂ ಅಲಂಕೃತವಾದ ರಥವನ್ನೇರಿ ಹೊರಟರು. ಹಾಗೆಯೇ ವ್ಯಾಸರ್‌ ಮ್ಯರೇ ಮೊದಲಾದ ಬ್ರಾಹ್ಮಣೋತ್ತಮರೂ ಅವನನ್ನು ಹಿಂಬಾಲಿಸಿದರು. ಭಗವಂತನಾದ ಶ್ರೀಕೃಷ್ಣನೂಕಡ ಅರ್ಜುನಸಹಿತನಾಗಿ ರಥವನ್ನೇರಿ ಹೊರಟನು. ಹೀಗೆ ಧರ್ಮರಾಜನು,ಯಕ್ಷರಿಂದ ಪರಿವೃತನಾದ ಕುಬೇರನಂ ತೆ, ಸಮಸ್ತಪರಿವಾರಗಳೊಡಗೂಡಿ ಪ್ರಯಾಣಮಾಡಿ ಬಂದನು. ಇತ್ತ ಲಾಗಿ ಕುರುಕ್ಷೇತ್ರದಲ್ಲಿ ಆಕಾಶದಿಂದ ಕೆಳಗಿಳಿದ ದೇವತೆಯಂತೆ ಪ್ರಕಾಶಿಸು ತಿದ್ದ ಭೀಷ್ಮಾಚಾದ್ಯರನ್ನು ನೋಡಿ, ಪಾಂಡವರೆಲ್ಲರೂ ಶ್ರೀಕೃಷ್ಣನೊಡನೆ ನಮಸ್ಕರಿಸಿದರು. ಈ ಸಮಯಕ್ಕೆ ಸರಿಯಾಗಿ ಆಕಾಶದಿಂದ ದೇವರ್ಷಿಗ ಳೂ, ಬ್ರಹ್ಮರ್ಷಿಗಳೂ, ಅನೇಕರಾಜರ್ಷಿಗಳೂ, ಕುರುಪಿತಾಮಹನಾದ ಭೀಷ್ಮನನ್ನು ನೋಡುವುದಕ್ಕಾಗಿ ಬಂದು ನೆರೆದಿದ್ದರು. ಅನೇಕಮಹಾತ್ಮರು ಸಭೆಗೂಡಿದರು. ಪಕ್ವತನಾರದರೆಂಬ ಮಹರ್ಷಿಗಳೂ, ಪೂಜ್ಯನಾದ ವ್ಯಾ ಸನೂ, ಧಮ್ಯ, ಬೃಹದಪ್ಪ, ಭಾರದ್ವಾಜರೂ, ಶಿಷ್ಯರಿಂದ ಪರಿ ವೃತನಾದ ಪರಶುರಾಮನೂ, ಶುಕ, ವಸಿಷ್ಟ, ಇಂದ್ರಪ್ರಮದೆ, ತ್ರಿತ, ನೃತ್ಸಮದ, ಅಸಿತ ಕಕ್ಷೀವಂತ, ಗೌತಮ, ಅತ್ರಿಮುನಿ, ವಿಶ್ವಾಮಿತ್ರ, ಸುದರ್ಶನ, ತಿಷ್ಯವರ್ಗದಿಂದ ಪರಿವೃತರಾದ ಕಶ್ಯಪ್ರಾಂ ಗಿರಸರೇ ಮೊದಲಾ ಮಹರ್ಷಿಗಳು, ಬ್ರಹ್ಮರಾತನು, ಇವರೆಲ್ಲರೂ ಬಂದು ಸೇರಿದ್ದರು. ಹೀಗೆ ತನ್ನನ್ನು ನೋಡುವುದಕ್ಕಾಗಿ ಬಂದ ಈ ಮಹರ್ಷಿಗಳೆಲ್ಲರ ನ್ಯೂ, ಧರ್ಮಜ್ಞನಾಗಿಯೂ, ಕಾಲದೇಶವಿಭಾಗಗಳನ್ನು ಚೆನ್ನಾಗಿ ತಿಳಿದ ವನಾಗಿಯೂ ಇರುವ ಭೀಷ್ಮನು, ಯಥಾವಿಧಿಯಾಗಿ ಪೂಜಿಸಿದನು.ಮತ್ತು ಮುಂದೆ ನಿಂತಿದ್ದ, ಶ್ರೀಕೃಷ್ಣನನ್ನು ನೋಡಿ, ಲೀಲಾಮಾನುಷವಿಗ್ರಹವನ್ನು ಧರಿಸಿದ ಆತನ ನಿಜಸ್ವರೂಪವನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಮಾ ನಸಪೂಜೆಯಿಂದ ಆತನನ್ನು ಧ್ಯಾನಿಸಿದನು. ಆಮೇಲೆ ಸಮೀಪದಲ್ಲಿ ವಿನೀ ತರಾಗಿ ನಿಂತಿದ್ದ ಧರ್ಮರಾಜಾದಿಗಳನ್ನು ನೋಡಿ,ಪ್ರೀತಿಪೂರೈಕವಾದಆನಂದ