ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೬ ಶ್ರೀಮದ್ಭಾಗವತವು (ಅಧ್ಯಾ. ೯. ಬಾಷ್ಪವನ್ನು ಸುರಿಸುತ್ತ, ಅವರ ಕ್ಷೇಮಲಾಭಗಳನ್ನು ವಿಚಾರಿಸಿ, ಗೌರವಪೂ ರ್ವಕವಾಗಿ 4 ಎಲೈ ವತ್ಸರೆ ! ವೇದೋಕ್ತಧರ್ಮಗಳಿಗೂ, ಬ್ರಾಹ್ಮಣರಿಗೂ, ಭಗವಂತನಾದ ಶ್ರೀಕೃಷ್ಣನಿಗೂ, ವಿಧೆ: ಮೊರಾಗಿ ನಡೆದುಕೊ ಳ್ಳುತ್ತಿರುವ ನಿಮಗೂಕೂಡ, ಹೀಗೆ ಕಷ್ಟಜೀವನವುಂಟಾಯಿತೆಂಬುದು ಬಹಳ ದುಃಖಕರವಾದ ವಿಷಯವು. ಆಹಾ ! ಇದೇಪನ್ಯಾಯವು : ನಿಮ್ಮ ತಾಯಿಯಾದ ಕುಂತೀದೇವಿಯು ನಿಮ್ಮಂತಹ ಪುತ್ರರನ್ನು ಪಡೆದೂಕೂಡ ತನ್ನ ಪತಿಯಾದ ಪಾಂಡುರಾಜನು ಮೃತನಾದಂದಿನಿಂದಲೂ ದುಃಖದಲ್ಲಿ ಯೇ ಕಾಲವನ್ನು ಕಳೆಯುತ್ತಿರುವಳು. ನೀವು ಇನ್ನೂ ಎಳೆವಯಸ್ಸಿನವರಾದು ದರಿಂದ ನಿಮಗಾಗಿಯೇ ಅವಳು ಎಷ್ಟೋ ದೆ.ಖವನ್ನನುಭವಿಸಬೇಕಾಯಿ ತು. ಆದರೇನು? ಆ ವಿಷಯವನ್ನು ಕುರಿತು ನೀವು ಸ್ವಲ್ಪ ಮಾತ್ರವೂದುಖಿ ಸಬಾರದು! ವಾಯುವಿಗಧೀನವಾಗಿ ಮೇಘಗಳು ಸಂಚರಿಸುವಂತೆ ಸಮಸ್ತ ಪ್ರಾಣಿಗಳೂ ಕಾಲ ಧೀನರಾಗಿಯೇ ನಡೆಯಬೇತಿ. ಆದುದರಿಂದ ಇದುವ ರೆಗೆ ನಿಮಗೆ ಬಂದಕಷ್ಟಗಳೆಲ್ಲವೂ ಕಾಲವಶದಿಂದ ಬಂದುದಲ್ಲದೆ ಬೇರೆಯ ಲ್ಲ. ಆಹಾ! ಕಾಲವೆಂಬುದು ದುರ್ಘವವಾದ ವಸ್ತುವನ್ನಾ ದರ ಫುಟಿ ಸುವಂತೆ ಮಾಡುವುದಲ್ಲವೆ? ಇದಕ್ಕೆ ನಿಮಗಿಂತ ಬೇರೆ ನಿದರ್ಶನವೇಕೆ ? ಸಾಕ್ಷಾತ್ ಧರ್ಮದೇವತೆಯ ಪುತ್ರನಾದ ಯುಧಿಷ್ಠಿರನೇ ಇಲ್ಲಿನ ರಾಜನು ! ಯಾವ ಯುದ್ಧದಲ್ಲಿಯೂ ಅಪ್ರತಿಹತವದ ಗ: ... 'ಬಡವನ್ನು ಧರಿಸಿದ ಭೀಮನೂ, ಗಾಂಡೀವವೆಂಬ ಮಹಾಧನುಸ್ಸನ್ನು ಹಿಡಿದ ಅರ್ಜುನನೂ, ಆತನಿಗೆ ಬೆಂಬಲವಾಗಿ ಒಡಹುಟ್ಟಿ ... ತಮ್ಮ ಲವ ! ಲೋಕನಾಥ ನಾದ ಶ್ರೀಕೃಷ್ಣನೇ ಪರಮಮಿತ್ರನು ! ಹೀಗೆ ದೇಹಬಲದಲ್ಲಿಯ ಶಸ್ತ್ರಸೈಪುಣ್ಯದಲ್ಲಿಯೂ, ದೈವಾನುಕೂಲ್ಯದಲ್ಲಿಯ., ಬೇರೆ ಯಾವ ಭಾಗದಲ್ಲಿಯೂ 'ನ್ಯೂನತೆಯಿಲ್ಲದ ಈ ಸ್ಥಳದಲ್ಲಿ ಕೂಡ, ಇಂತಹ ವಿಪತ್ತು ಬಂದೊದಗಿತೆಂದರೆ ಕಾಲಗತಿಯನ್ನು ಮೀರುವುದಕ್ಕೆ ಬೇರೆಯಾ ರಿಂದ ತಾನೇ ಸಾಧ್ಯವು? ಎಲೈ ಕುಮಾರರೇ ! - ಸಮಸ್ತಲೋಕಗಳ ನ್ಯೂ ತನ್ನ ಸ್ವಾಧೀನವಾಗಿ ಮಾಡಿಕೊಂಡಿರ.ವ ಶ್ರೀ ಕೃಷ್ಣನ ದಯೆಗೆ ನಾವು ಪಾತ್ರರಾಗಿರುವಾಗ, ಆ ಕಾಲಗತಿಯನ್ನು ಆತನು ತಪ್ಪಿಸಲಾರನೆ ?”