ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೯. ಪ್ರಥಮಸ್ಕಂಥವು, ೧೨೭ ಎಂದು ನೀವು ಶಂಕಿಸಬಾರದು. ಈ ಶ್ರೀಕೃಷ್ಣನು ನಡೆಸತಕ್ಕ ವಿಚಿತ್ರ ವ್ಯಾಪಾರಗಳನ್ನು ತಿಳಿಯಬೇಕೆಂದಪೇಕ್ಷಿಸಿ, ಬ್ರಹ್ಮಾದಿಗಳೂ ಮೋಹವನ್ನು ಹೊಂದುವರು. ಹೀಗಿರುವಾಗ ಅದನ್ನು ಬೇರೆ ಯಾವ ಮನುಷ್ಯನು ತಾನೇ ತಿಳಿಯಬಲ್ಲನು. ಎಲೈ ಧರ್ಮರಾಜನೆ ಸಮಸ್ತ ಪ್ರಾಣಿ. 'ಳ ಸುಖದುಃಖಗ ಭೂ ಕಾಲಾಧೀನಗಳು. ಆ ಸುಖದುಃಖಕ್ಕೆ ಕಾರಣಗಳ ದಿ ಕರ್ಮಗಳೆಲ್ಲವೂ ಈ ಕೃಷ್ಣನಿಗಧೀನವಾದುವು ಕೃಷ್ಣನೂಕೂಡ ಕಾಲಾದಿಗಳನ್ನೇ ಆನು ವರ್ತಿಸುತ್ತಿರುವನು. ಆದುದರಿಂದ ಸುಖದುಃಖಾಸಗಳೆಲ್ಲವೂ ದೈವಾಯತ್ತೆ ವೆಂದೂ, ಆ ಕಾಲಕರಾಟಗಳಿಗೆ ಪ್ರೇರಕನಾಗಿಯೂ ಅದನ್ನ ನುವ ರ್ತಿಸತಕ್ಕವನಾಗಿಯೂ ಇರುವ ಈ ಶ್ರೀ ಕೃಷ್ಣನೇ ಸವಿ ಥದಲ್ಲಿಯೂ, ನಿಮಗೆ ಪ್ರೇರಕನೆಂದೂ ತಿಳಿದುಆತನ ಪ್ರವಾಸಿಗೊಳಪಟ್ಟಿರುವುದೇನಿಮಗೆ ""ತ್ರ -- ದುದರಿಂದ ಮೊದಲೇ ಶ್ರೀಕೃಷ್ಣನು ನಿನಗೆ ನಿಯಮಿಸಿರುವಂ ಕಿ, ಒಲ್ಲದ ನಿಮ್ಮ ಪ್ರಜೆಗಳೆಲ್ಲರನ್ನೂ ಪ್ರೇಮದಿಂದ ರಕ್ಷಿಸುತ್ತಿರಿ! ರಾ ಜಾ? ಇಲ್ಲಿ ಮನುಷ್ಯರೂಪದಿಂದ ನಿನ್ನ ಕಣ್ಣಿದಿರಿಗೆ ನಿಂತಿದ್ಮ ಮಾತ್ರಕ್ಕೆ ಈತ ನನ್ನು ನೀನು ಸಾಮಾನ್ಯವಾದ ಪ್ರಾಕೃತಮನುಷ್ಯನೆಂದೆಣಿಸಬೇಡ! ಈತನೇ ಸೌ ಕಾಲ್ಬಗವಂತನು! ಈತನೇ ಆದಿಪ್ರರುಷನಾದ ಆ ನಾರಾಯಣಮೂ ರ್ತಿಯು ಇವನು ತನ್ನ ಮಾಯೆಯಿಂದ ಲೋಕವನ್ನು ಮರುಳುಗೊಳಿಸು ವುದಕ್ಕಾಗಿ ರಹಸ್ಯವಾಗಿ ಒಂದು, ಯಾದವರಲ್ಲಿ ತಾನೂ ಒಬ್ಬನಂತೆ ನಟಿ ಸುತ್ತಿರುವನು. ದುರ್ಜ್ಞೆಯವಾದ ಈತನ ಮಹಿಮೆಯನ್ನು ಪೂಜ್ಯನಾದ ಆ ಪರಮಶಿವನೊಬ್ಬನು ಬಲ್ಲನು! ದೇವರ್ಷಿಯಾದ ನಾರದನೊಬ್ಬನುಬಲ್ಲ ನು! ಮಹಾತ್ಮನಾದ ಆ ಕಪಿಲಮುಸಿಯೊಬ್ಬನು ಬಲ್ಲನು ! ಈ ಮೂವರು ಹೊರತು ಬೇರೆಯಾರೂ ಇವನ ನಿಜವನ್ನು ಕಂಡುಕೊಳ್ಳಲಾರರು! ಥರ ರಾಜಾ! ಇನ್ನು ಹೆಚ್ಚು ಮಾತಿನಿಂದೇನು? ಯಾವನನ್ನು ನೀನು ನಿನ್ನ ಮಾವ ನ ಮಗನೆಂದು ಕರೆಯುವೆಯೋ,ಯಾವನಲ್ಲಿ ನಿನಗಿರುವ ವಿಶೇಷವಾದ ಸಲಿಗೆ ಯಿಂದ, ಒಮ್ಮೆ ಮಂತ್ರಿಯನ್ನಾಗಿಯೂ,ಒಮ್ಮೆ ದೂತನನ್ನಾಗಿಯೂ,ಒಮ್ಮೆ ಬಂಡಿಯಾಳನ್ನಾಗಿಯೂ ಮಾಡಿಕೊಂಡು, ಅವನಿಂದ ಕೆಲಸವನ್ನು ತೆಗೆಯುತ್ತಿ ರುವೆಯೋ, ಆ ಈ ಕೃಷ್ಣನು, ಸಾಕ್ಷಾತ್ಪರಮಪುರುಷನಲ್ಲದೆ ಬೇರೆಯಲ್ಲ! ಆ