ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೮ ಶ್ರೀಮದ್ಭಾಗವತವು [ಅಧ್ಯಾ. ೯. ದರೆ ಅಂತಹ ಪರಮಪುರುಷನಾದವನು ನಿನಗಧೀನನಾಗಿ ಕೆಲಸಮಾಡುವು ದೇಕೆಂದು ನೀವು ಕೇಳಬಹುದು!ಧರ್ಮರಾಜಾ!ಆತನು ಸತ್ಯಾತ್ಮಕನು! ಸಮ ಸ್ವಪ್ರಪಂಚವನ್ನೂ ಸಮವಾಗಿ ನೋಡತಕ್ಕವನು.ಎಣೆಯಿಲ್ಲದವನು.ಸೇವಕರ ಲ್ಲಿರುವ ನಿಕೃಷ್ಟತ್ಪಾದಿ ದೋಷಗಳೊಂದೂ ಇವನಲ್ಲಿ ಸೇರವು. ಅವನಲ್ಲಿ ನೀ ನು ಸಾಮಾನ್ಯಭಾವನೆಯನ್ನಿಟ್ಟು, ಈ ಅಲ್ಪಕಾರಗಳನ್ನು ಮಾಡಿಸಿದಮಾತ್ರ ಕೈ ಅವನ ಮನಸ್ಸು ನಿನ್ನಲ್ಲಿ ಕಲಗಲಾರದು ಎಲ್ಲರನ್ನೂ ಒಂದೇ ವಿಧವಾದ ಸೌಲಭ್ಯದಿಂದ ನೋಡುವವನು. ಆತನು ಹೀಗೆ ಸತ್ವ ಸಮಾನನೆನಿಸಿಕೊಂಡಿದ್ದ ರೂ, ತನ್ನ ಏಕಾಂತಭಕ್ತರಲ್ಲಿ ಮಾತ್ರ,ಅಸಾಧಾರಣವಾದ ದಯೆಯನ್ನು ತೋ ರಿಸದೆಬಿಡನು. ಧರ್ಮಪತ್ತಾ.ಇದಕ್ಕೆ ಬೆರೆಸಿದರ್ಶನವಕೆ?ಇದೋ ನೋಡು! ನಾನು ಪ್ರಾಣವನ್ನು ಬಿಡುವುದಕ್ಕೆ ಸಿದ್ಧವಾಗಿರುವ ಕಾಲದಲ್ಲಿ, ತಾನೇ ಪ್ರ ತ್ಯಕ್ಷವಾಗಿ ಬಂದು ನನಗೆ ದರ್ಶನವನ್ನು ಕೊಡುತ್ತಿರುವನಲ್ಲವೆ? ಈತನ ದರ್ಶನ ದಿಂದುಂಟಾಗುವ ಫಲವು ಸಾಮಾನ್ಯವಲ್ಲ ! ಯೋಗೀಶ್ವರರೆಲ್ಲರೂ ಯಾವನ ಲ್ಲಿ ಭಕ್ತಿಯುಕ್ತವಾದ ಮನಸ್ಸನ್ನು ಸೇರಿಸಿ, ಯಾವನ ಪ್ರಣ್ಯ ಕೀರ್ತನೆಗಳನ್ನು ಬಾಯಿಂದ ಹೇಳುತ್ತ, ತಮ್ಮ ದೇಹವನ್ನು ತ್ಯಜಿಸಿ, ಕಾಮದಿಂದಲೂ, ಕರ್ಮ ಗಳಿಂದಲೂ ಮುಕ್ತರಾಗುವರೋ, ಆಪರಮಾತ್ಮನೇ ಈ ಕೃಷ್ಣನು! ಹೀಗೆ ತ ೩ ನಾಮಕೀರ್ತನದಿಂದಲೇ ಮೋಕಸುಖವನ್ನು ಕೊಡತಕ್ಕ ಈ ಮಹಾತ್ಮನ ಪ್ರತ್ಯಕ್ಷದರ್ಶನದಿಂದುಂಟಾಗತಕ್ಕ ಫಲವನ್ನು ಹೇಳತಕ್ಕದೇನು ? ಆದುದ ರಿಂದ ದೇವದೇವನಾಗಿಯೂ, ಚತುರುಜನಾಗಿಯೂ ಇರುವ ಆ ಭಗವಂತ ನು, ಈಗ ಇಲ್ಲಿ ಕಾಣುವಂತೆಯೇ, ಪ್ರಸನ್ನ ವಾದ ಮಂದಹಾಸದಿಂದಲೂ, ರಕ್ರಾಂತನೇತ್ರಗಳಿಂದಲೂ ಶೋಭಿತವಾದ ಮುಖಕಮಲವುಳ್ಳವನಾಗಿ, ನಾನು ಈ ದೇಹವನ್ನು ತ್ಯಜಿಸುವವರೆಗೆ ನನ್ನ ಧ್ಯಾನವಿಷಯವಾಗಿ ಇಲ್ಲಿಯೇ ಪ್ರತೀಕ್ಷಿಸುತ್ತಿರಲಿ! ಎಂದು ಪ್ರಾರ್ಥಿಸುತ್ತಿದ್ದನು. ಹೀಗೆ ಶರಪಂಜರದಲ್ಲಿ ಮಲಗಿ ಶ್ರೀ ಕೃಷ್ಣಸ್ಮರಣೆಯಲ್ಲಿರುವ ಭೀಷ್ಮಾಚಾಯ್ಯನನ್ನು ನೋಡಿ ಥರ ರಾಜನು, ಅಲ್ಲಿದ್ದ ಮಹರ್ಷಿಗಳೆಲ್ಲರೂ ಕೇಳುತ್ತಿರುವಹಾಗೆಯೇ ನಾನಾವಿಧ ಧರ ಸೂಕ್ಷ್ಮಗಳೆಲ್ಲವನ್ನೂ ಕ್ರಮವಾಗಿ ಪ್ರಶ್ನೆ ಮಾಡಿ, ಅವನಿಂದ ಕೇಳಿ ತಿಳಿದು ಕೊಂಡನು, ಮನುಷ್ಯರ ಶಕ್ತಿಸ್ವಭಾವಗಳಿಗೂ, ಅವರವರ ವರ್ಣಾಶ್ರಮಗಳಿ