ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೯.] ಪ್ರಥಮಸ್ಕಂಧವು. ೧೨೯ ಗೂ ಅನುಸಾರವಾಗಿ, ಅವರವರು ನಡೆಸಬೇಕಾದ ಕಠ್ಯಗಳಲ್ಲಿ, ಕೇವಲವಿರಕ್ಕಿ ಯಿಂದ ನಡೆಸತಕ್ಕವುಗಳೆಂದೂ, ಫಲಾಪೇಕ್ಷೆಯಿಂದ ನಡೆಸತಕ್ಕವುಗಳೆಂ ದೂ, ಎರಡುವಿಧವಾಗಿರುವ ಪ್ರವೃತ್ತಿ ನಿವೃತ್ತಿಧಮ್ಮಗಳ ಭೇದವನ್ನು ತಿಳಿದು ಕೊಂಡನು. ಹಾಗೆಯೇ ದಾನಧಗಳನ್ನೂ, ರಾಜನೀತಿಗಳನ್ನೂ ಪಾಂಚ ರಾತ್ರೋಕ್ತಗಳಾದ ಮೋಕ್ಷಧರ ವಿಭಾಗಗಳನ್ನೂ, ಧಾರಕಾಮಮೋಕ್ಷ ಗಳೆಂಬ ಪುರುಷಾರಗಳನ್ನೂ, ಅವುಗಳ ಸಾಧನಗಳನ್ನೂ, ಸ್ತ್ರೀಧರಗಳ ನ್ಯೂ , ಹರಿಕಥಾಶ್ರವಣಕೀರ್ತನಾರೂಪಗಳಾದ ಭಗವದರಗಳನ್ನೂ , ಸಂ ಕ್ಷೇಪವಾಗಿಯ, ವಿಸ್ತರವಾಗಿಯೂ ಕ್ರಮವಾಗಿ ಪ್ರಶ್ನೆ ಮಾಡಿ ಕೇಳಿ ತಿಳಿ ಯುತ್ತಿದ್ದನು. ತತ್ತ್ವಜ್ಞನಾದ ಭೀಷ್ಮಾಚಾರನು, ಆಯಾ ಧರಗಳಿಗೆ ನಿದರ್ಶಕಗಳಾದ ಬೇರೆಬೇರೆ ಉಪಾಖ್ಯಾನಗಳನ್ನೂ ಇತಿಹಾಸಗಳನ್ನೂ ಹೇಳಿ, ಅವೆಲ್ಲವನ್ನೂ ವಿವರಿಸಿ ತಿಳಿಸಿದನು. ಸ್ವಚ್ಛಾಮರಣಿಯಾದ ಆ ಭೀ ಮೂನು, ಹಿಗೆ ಧರರಾಜನಿಗೆ ಧರೋಪದೇಶವನ್ನು ಮಾಡಿ ಮುಗಿಸುವಷ್ಟ ರಲ್ಲಿ, ಅವನು ತನ್ನ ಮರಣಕ್ಕಾಗಿ ನಿರೀಕ್ಷಿಸುತ್ತಿದ್ದ ಉತ್ತರಾಯಣವು ಸಮೀ ಪಿಸಿತು. ಸಹಸ್ತಸಂಖ್ಯಾತರಾದ ಕಾರವಪಾಂಡವರೆಲ್ಲರಿಗೂ ನಿಯಾಮ ಕನಾದ ಆ ಭೀಷ್ಮನು, ತಾನು ನಿರೀಕ್ಷಿಸುತ್ತಿದ್ದ ಕಾಲವು ಬಂದೊದಗಿದು ದನ್ನು ತಿಳಿದು, ಅದುವರೆಗೆ ತಾನಾಡುತಿದ್ದ ಮಾತನ್ನು ಅಷ್ಟರಲ್ಲಿಯೇ ಸಿ ಸಿ, ದೇಹಾಲಸಂಬಂಧವನ್ನು ಮರೆತು, ಕೇವಲವೈರಾಗ್ಯವನ್ನು ವಹಿಸಿ, ತನ್ನ ಮುಂದೆ ಪೀತಾಂಬರಧಾರಿಯಾಗಿ ನಿಂತಿದ್ದ ಪರಮಪುರುಷನಾದ ಶ್ರೀ ಕೃ ವ್ಯನನ್ನು ಎವೆಮುಚ್ಚದೆ ನೋಡುತ್ತ, ಆ ಪರಮಾತ್ಮನ ರೂಪವನ್ನು ಮನ ಸ್ಸಿನಲ್ಲಿ ಧ್ಯಾನಿಸತೊಡಗಿದನು. ಹೀಗೆ ಭೀಷ್ಮಾಚಾಯ್ಯನು ಶ್ರೀಕೃಷ್ಣನನ್ನು ಶುದ್ಧವಾದ ಮನಸ್ಸಿನಿಂದ ಧ್ಯಾನಿಸುವುದಕ್ಕೆ ತೊಡಗಿದೊಡನೆ, ಅವನ ಮನಸ್ಸಿನಲ್ಲಿ ಭಗವತ್ಪಾಪ್ತಿಗೆ ಪ್ರತಿಬಂಧಕಗಳಾಗಿದ್ದ ಕಲ್ಮಷಗಳೆಲ್ಲವೂ ನೀಗಿದುವು. ಆ ಶ್ರೀಕೃಷ್ಣನ ದಿವ್ಯರೂಪವನ್ನು ಕಣ್ಣಿಂದ ನೋಡಿದಾಗಲೇ ಅವನಿಗಿದ್ದ ಶಸ್ತ್ರಬಾಧೆಗಳೆಲ್ಲವೂ ನಿವೃತ್ತವಾದುವು. ವಿಷಯಾಂತರಗಳಲ್ಲಿದ್ದ ಇಂದ್ರಿಯವ್ಯಾಪಾರಗಳೆಲ್ಲವೂ ಅಡಗಿದುವು. ಅವನ ಮನಸ್ಸಿನಲ್ಲಿದ್ದ ದೇಹಾ ಭ್ರಮವೂ ನಿವರ್ತಿಸಿತು. ಹೀಗೆ ನಿಷ್ಕಲ್ಮಷನಾದ ಭೀಷ್ಮನು, ತನ್ನ ದೇ