ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೦ ಶ್ರೀಮದ್ಭಾಗವತವು (ಅಧ್ಯಾ. ೯. ಹವನ್ನು ಬಿಟ್ಟು ಹೊರಡುವುದಕ್ಕೆ ಸಿದ್ಧನಾಗಿ, ಭಗವಂತನನ್ನು ಸುತ್ತಿ ಸುವನು. w ಭೀಷ್ಮನು ದೇಹಾವಸಾನಕಾಲದಲ್ಲಿ ಶ್ರೀಕೃಷ್ಣನನ್ನು + ಸ್ತುತಿಸಿದುದು. ಶ್ಲೋ|| ಇತಿ ಮತಿರುಪಕಲ್ಪಿತಾ ವಿತೃಷ್ಣಾ ಭಗವತಿ ಸಾತಪುಂಗವೇ ವಿಭೂಮಿ | ಸ್ವಸುಖಮುಷಗಳೇ ಕ್ಲಚಿಹರ್ತು೦ ಪ್ರಕೃತಿಮುಪೇಯುಷಿ ಯದ್ಬವಪ್ರವಾಹ: - ಯದುಕುಲೋತ್ತಮನಾಗಿಯೂ, (ಭಕ್ತಪಾಲಕನಾಗಿಯೂ) ವಿಲ ಕ್ಷಣಮಹಿಮೆಯುಳ್ಳವನಾಗಿಯೂ, ಸಹಜವಾಗಿ ನಿತ್ಯಾನಂದಪರಿಪೂರ್ಣ ನಾಗಿದ್ದರೂ ಲೀಲಾರ್ಥವಾಗಿ ಒಂದೊಂದುಕಡೆಯಲ್ಲಿ ಪ್ರಾಕೃತದೇಹ ವನ್ನು ಹೊಂದಿ ಅವತರಿಸುವವನಾಗಿಯೂ, ತನ್ನ ಸಂಕಲ್ಪದಿಂದಲೇ ಚೇತ ನರಿಗೆ ಸಂಸಾರಪ್ರವೃತ್ತಿಯನ್ನುಂಟುಮಾಡತಕ್ಕವನಾಗಿಯೂ ಇರುವ ಭಗ 'ವಂತನಾದ ಈ ಶ್ರೀಕೃಷ್ಣನಲ್ಲಿ, ನನ್ನ ಬುದ್ಧಿಯು ಎಂದೆಂದಿಗೂ ತೃಪ್ತಿ ಹೊಂದದೆ ಸ್ಥಿರವಾಗಿ ನೆಲೆಗೊಂಡಿರಲಿ ! ಶ್ಲೋll ತ್ರಿಭುವನಕಮನಂ ತಮಾಲವರ್ಣಂ ರವಿಕರಗೌರವರಾಂಬರಂ ದಧಾನೇ | ವಪದಲಕಕುಲಾವೃತಾನನಾಬೈ ವಿಜಯಸಬೇ ರತಿರಸ್ತು ಮೇನವದ್ಯಾ||೨|| ತಮಾಲಶ್ಯಾಮಲವಾದ ಮೈಮೇಲೆ, ಸರಕಾಂತಿಗೆ ಸಮಾನವಾದ ಪೀತಾಂಬರದಿಂದಲೂ, ಮುಂಗುರುಳುಗಳಿಂದ ಮರೆಸಲ್ಪಟ್ಟ ಮುಖಕಮಲ ದಿಂದಲೂ, ತೈಲೋಕ್ಯಮೋಹಕವಾದ ದಿವ್ಯರೂಪವುಳ್ಳ ಅರ್ಜುನ ಮಿತ್ರನಾದ ಈ ಶ್ರೀಕೃಷ್ಣನಲ್ಲಿ ನನ್ನ ಭಕ್ತಿಯು ಅನನ್ಯ ಪ್ರಯೋಜನವಾಗಿ ನೆಲೆಗೊಳ್ಳಲಿ ! ಶ್ಲೋ|| ಯುಧಿ ತುರಗರಜೋನಿಧಮ್ರವಿಷಕ್ಕಚಲುಲಿತಶ್ರಮವಾಸ್ಯಲಂಕೃತಾ! ಮಮ ನಿಶಿತಶರೆರಿಭಿದ್ಯಮಾನತ್ವಚಿ ವಿಲಸತ್ಕವಚೇಸ್ತು ಕೃಷ್ಣ ಆತ್ಮಾ ||೩|| ಕುದುರೆಯ ಕಾಲಿನ ಧೂಳಿನಿಂದ ಕೊಳೆಮುಚ್ಚಿದ ತಲೆ! ಕದಲಿದ ಕೂ ದಲು! ಮುಖದಲ್ಲಿ ಸುರಿಯುತ್ತಿರುವ ಬೆವರು! ನನ್ನ ತೀಕ್ಷಬಾಣಗಳಿಂದ ಮೈ ಮೇಲಿನ ಚರ್ಮವು ಕಿತ್ತು, ಕವಚದಮೇಲೆ ಅಲ್ಲಲ್ಲಿ ಶೋಭಿಸುತ್ತಿರುವ ರಕ್ತ