ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೨ ಶ್ರೀಮದ್ಭಾಗವತವು [ಅಧ್ಯಾ. ೯. ಶ್ಲೋ||ವಿಜಯರಥಕುಟುಂಬಆತ್ರತೋತೇ ದೃತಹಯರಶ್ಮಿನಿ ತಟ್ಸ್ಯೇಕ್ಷಣೀಯೇ ಭಗವತಿ ರತಿಸುಮೇಮಮೂರ್ಷೋಲ್ಯಮಿಹ ನಿರೀಕ್ಷ ಹತಾಗತಾಸ್ಕೃರೂಪಮ್ | ಅರ್ಜುನನ ರಥಕ್ಕೆ ಕಾವಲಾಗಿ, ಒಂದು ಕೈಯಿಂದ ಚಾಟೆಯನ್ನೂ , ಮತ್ತೊಂದು ಕೈಯಿಂದ ಕುದುರೆಯ ಹಗ್ಗವನ್ನೂ ಹಿಡಿದು, ಲೋಕಮೋಹ ಕವಾದ ವಿಲಕ್ಷಣರೂಪದಿಂದ ಶೋಭಿಸುತ್ತ, ಯುದ್ಧದಲ್ಲಿ ಹತರಾದ ವೀರ ರೆಲ್ಲರಿಗೂ ತನ್ನ ದರ್ಶನದಿಂದಲೇ ಮೋಕ್ಷವನ್ನು ಕೊಡುವವನಾಗಿ, ರಣಾಗ್ರ ದಲ್ಲಿ ಸಂಚರಿಸುತ್ತಿದ್ದ ಆ ಭಗವಂತನಲ್ಲಿ, ಮರಣೋನ್ಮಖನಾದ ಈ ನನಗೆ ಭಕ್ತಿಯು ನಿಶ್ಚಲವಾಗಿ ನೆಲೆಗೊಳ್ಳಲಿ ! ಶ್ಲೋರಿ ಲಲಿತಗತಿವಿಲಾಸವನ್ನು ಹಾಸಪ್ರಣೆಯ ನಿರೀಕ್ಷಣೆಕಲ್ಪಿತೋರುಮಾನಾಃ | ಕೃತಮನುಕೃತವತ್ಯ ಉನ್ಮ ದಾಂಧಾಃ ಪ್ರಕೃತಿಮಗನ್ನಿಲಯಸ್ಯ ಗೋಪವಧ್ವಃ || ಯಾವನ ಅಂದವಾದ ನಡೆ ! ಮನೋಹರಗಳಾದ ವಿಲಾಸಗಳು ! ಆ ನುರಾಗವಿಶಿಷ್ಟವಾದ ಕಣ್ಣಿನ ನೋಟಗಳು! ಮುಗುಳ್ಳಗೆ! ಇವುಗಳಿಂದಲೇ ಗೋಪಸಿಯರು, ತಾವು ಸತ್ವವಿಧದಿಂದಲೂ ಸತ್ಯತರಾದಂತಣಿಸಿ, ಮಿತಿ 'ಮೀರಿದ ಮೋಹಾಂಧತೆಯಿಂದ ಮುಂಗಾಣದೆ, ಅವನನ್ನು ತಮಗೆ ಸಮಾನ ನೆಂದು ತಿಳಿದು, ಆತನು ನಡೆಸಿದ ಅತಿಮಾನುಷಕೃತ್ಯಗಳನ್ನು ತಾವೂ ಅನುಕ ರಿಸುತ್ತಿದ್ದು, ಕೊನೆಗೆ ಈ ನೆವದಿಂದಲೇ ಕೃಷ್ಣನೊಡನೆ ಸಾಥರವನ್ನು ಹೊಂದಿದರೋ ಅಂತಹ ಶ್ರೀಕಷ್ಣನಲ್ಲಿ ನನ್ನ ಮನಸ್ಸು ನೆಲೆಗೊಳ್ಳಲಿ ! ಶೆರಿಮುನಿಗಣನೃಪವರಸಂಕುಲೇಂತಸ್ಸದಸಿ ಯುಧಿಷ್ಠಿರರಾಜಸೂಯವಿಷಾಂ! ಅರ್ಹಣಮುಪದ ಈಕ್ಷಣೀಯೋ ಮಮ ದೃಶಿ ಗೋಚರ ಏಷ ಆವಿರಾತಾ | ರಾಜಸೂಯಯಾಗದಲ್ಲಿ ಅನೇಕಮಹರ್ಷಿಗಳೂ, ರಾಜರ್ಷಿಗಳೂ ಸೇರಿರುವಾಗ, ಧರ್ಮರಾಜನು ಸಭಾಮಧ್ಯದಲ್ಲಿ ಮಾಡಿದ ಅಗ್ರಪೂಜೆಯನ್ನು ಗ್ರಹಿಸಿದಕಾಲದಲ್ಲಿ, ಆ ಶ್ರೀಕೃಷ್ಣನಿಗಿದ್ದ ಲೋಕಮನೋಹರವಾದ ಸ್ವರೂ ಪವು ನನ್ನ ಕಣ್ಣಿಗೆ ಯಾವಾಗಲೂ ಗೋಚರಿಸುತ್ತಿರಲಿ! ಶ್ಲೋಕ್ಷಿತಿಭರಮವರೋಪಿತುಂ ಕುರೂಣಾಂ ಶ್ವಸನಣವಾಗೃಜದಕ್ಷವಂಶವಹಿಂ | ತಮಿಮಮಹಮನುವ್ರತಾರ್ತಿಹಾಂಘಿಂ ಹೃದಿ ಪರಿರಭ್ಯ ಜಹಾಮಿ ಮರ್ತ್ಯಸೇಡಂ