ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೯.] ಪ್ರಥಮಸ್ಕಂಧವು. ೧೩೬ ಗಾಳಿಯು ಬಿದಿರುಮೆಳೆಯಲ್ಲಿ ಒಂದಕ್ಕೊಂದಕ್ಕೆ ಫುರ್ಷ್ಠಣವನ್ನು ಟುಮಾಡಿ, ಬೆಂಕಿಯನ್ನು ಹುಟ್ಟಿಸಿ ಕಾಡನ್ನು ಸುಡುವಂತೆ, ಯಾವನು ಪಗಡೆಯಾಟವೆಂಬ ನೆವದಿಂದ ಕೌರವರಲ್ಲಿಯೇ ಅಂತಃಕಲಹವನ್ನು ಹುಟ್ಟಿಸಿ, ಕುರುವಂಶವೆಲ್ಲವನ್ನೂ ನಾಶಮಾಡಿ, ಭೂಭಾರವನ್ನ ಪಹರಿಸಿದನೋ, ಆ ಶ್ರೀ ಕೃಷ್ಣನ ಆಶ್ರಿತದುಃಖನಿವಾರಕಗಳಾದ ಪಾದಾರವಿಂದಗಳನ್ನು ಹೃದಯ ದಿಂದಪ್ಪಿಕೊಂಡು, ಈಗ ನಾನು ಈ ನನ್ನ ಶರೀರವೆಂಬ ಹೊದ್ದಿಕೆಯನ್ನು ಬಿಟ್ಟುಬಿಡುವೆನು, ಶ್ಲೋllತಮಿಮಮಹಮಜಂ ಶರೀರಭಾಜಾಂ ಹೃದಿಹೃದಿ ಧಿಮಿತಮಾತ್ಮಕ ತಾನಾಂ | ಪ್ರತಿದೃಶಮಿವ ನೈಕಭಾರ್ಕಮೇಕಂಸಮಧಿಗತೋ ವಿಧೂತಭೇದವೋಹಂ || ಸೂರನು ಆಕಾಶದಲ್ಲಿ ತಾನೊಬ್ಬನೇ ಪ್ರಕಾಶಿಸುತ್ತಿದ್ದರೂ, ಭೂಮಿ ಯಲ್ಲಿರುವ ಸಮಸ್ತ ಜಲಾಶ್ರಯಗಳಲ್ಲಿಯೂ ಪ್ರತಿಬಿಂಬಿಸಿ, ಆ ಜಲಗತವಾ ದ ಚೇಷ್ಟೆಗಳಿಗೆ ತಾನುಮಾತ್ರ ಈಡಾಗದಿರುವಂತೆ, ಯಾವ ಭಗವಂತನು ತಾನೊಬ್ಬನಾಗಿದ್ದರೂ, ಜೀವಿಗಳ ಪ್ರತಿಹೃದಯದಲ್ಲಿಯೂ ಅಂತರಾತ್ಮ ನಾಗಿ, ನಾನಾತ್ಪವನ್ನು ಹೊಂದಿ, ಆ ಜೀವಾದಿಗತವಾದ ದೋಷಕ್ಕೆ ಮಾ ತ್ರ ತಾನು ಭಾಗಿಯಾಗದಿರುವನೋ, ಅಂತಹ ಈ ಶ್ರೀಕೃಷ್ಣನನ್ನು ನಾನು, ಮನಸ್ಸಿನ ಮೋಹಾದಿಗಳನ್ನು ಬಿಟ್ಟು ಶರಣುಹೊಂದುವೆನು. ಹೀಗೆಂದು ಭೀಷ್ಮನು ಶ್ರೀಕೃಷ್ಣ ಪರಮಾತ್ಮನನ್ನು ಸ್ತುತಿಸುತ್ತ, ಆ ಭಗವಂತನಲ್ಲಿಯೇ ಮನಸ್ಸು,ವಾಕ್ಕು, ದೃಷ್ಟಿ,ಇವೇ ಮೋಲಾದ ಸರ್ವೆಂ ದ್ರಿಯಗಳನ್ನೂ ನೆಲೆಗೊಳಿಸಿ, ಆ ಅಂತರಾತ್ಮನನ್ನು ತನ್ನ ಹೃದಯದಲ್ಲಿ ಸೇರಿಸಿ ಕೊಂಡು, ತನ್ನ ಶ್ಲಾಸವಾಯುವನ್ನು ತನ್ನೊಳಗೆ ತಾನೇ ಅಡಗಿಸಿಕೊಂಡು ಮೌನವನ್ನು ವಹಿಸಿದನು. ಹೀಗೆ ಭೀಷ್ಮಾಜಾರನು ನಿರ್ದೋಷವಾದ ಪರಬ್ರ ಹ್ಮದಲ್ಲಿ ಸೇರುತ್ತಿರುವಾಗ, ಅಲ್ಲಿದ್ದವರೆಲ್ಲರೂ ರಾತ್ರಿಯಲ್ಲಿ ಪಕ್ಷಿಗಳು ಹೇಗೋ ಹಾಗೆ ಮೌನದಿಂದ ನಿಶ್ಯಬ್ಬರಾಗಿ ನೋಡುತಿದ್ದರು. ಈ ಭೀಷ್ಮನಿಲ್ಯಾಣ ಕಾಲದಲ್ಲಿ ಆಕಾಶದಲ್ಲಿ ದೇವತೆಗಳಿಂದಲೂ, ಭೂಮಿಯಲ್ಲಿ ಮನುಷ್ಯರಿಂದ ನುಡಿಸಲ್ಪಡುತ್ತಿದ್ದ ದುಂದುಭಿವಾದ್ಯಗಳು ಮಹಾಧ್ವನಿಯಿಂದ ಮೊಳಗು ತಿದ್ದುವು. ಅಲ್ಲಲ್ಲಿ ಸಾಧುಗಳೆಲ್ಲರೂ ಭೀಷ್ಮನ ಗುಣಗಳನ್ನು ಕೊಂಡಾಡುತ್ತಿದ್ದ