ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಭಕ್ತನಾದ ಪರೀಕ್ಷಿದ್ರಾಜನಿಗೆ ಕೊಟ್ಟು, ಈಗ ನೀನು ಅವನಿಗೆ ಅನುಗ್ರಹಿಸಿ ಕೊಡಬೇಕೆಂದಿರುವ ಶ್ರೀಮದ್ಭಾಗವತಕಥಾಮೃತವನ್ನು ನಮಗೆ ಕೊಡು ! ಎಂದು ವಿನಯದಿಂದ ಪ್ರಾರ್ಥಿಸಿದರು. ಹೀಗೆ ದೇವತೆಗಳು ಕೇಳುತ್ತಿರಲು, ಶುಕಮಹಾಮುನಿಯು ತನ್ನೊಳಗೆ ತಾನು ಆ ದೇವತೆಗಳ ಸ್ವಾರ್ಥಪರತೆ ಯನ್ನೂ, ತಂತ್ರವನ್ನೂ ನೋಡಿ ನಗುತ್ತ” “ಆಹಾ! ಆ ಸುಧೆಯೆಲ್ಲಿ? ಈ ಕಥಾ ಮೃತವೆಲ್ಲಿ? ಸಾಮಾನ್ಯವಾದ ಗಾಜನ್ನು , ಬೆಲೆಯುಳ್ಳ ಆತ ದೊಡನೆ ಹೋಲಿ ಸುವುದೇ?” ಎಂದು ಚಿಂತಿಸಿ, ತಾನುದ್ದೇಶಿಸಿದ ಆ ಕಥಾಮೃತವನ್ನು , ಪರಮ ಭಕ್ತನಾದ ಪಕ್ಷಿದ್ರಾಜನಿಗಲ್ಲದೆ,ಭಕ್ತಿಹೀನರಾದ ಆ ದೇವತೆಗಳಿಗೆ ಕೊಡುವು ದಕ್ಕೆ ಇಷ್ಟಪಡಲಿಲ್ಲ. ಹೀಗೆ ಭಾಗವತವೆಂಬ ಕಥಾಮೃತವು ದೇವತೆಗಳಿಗೂ ದುರ್ಲಭವಾಯಿತು. ಕೊನೆಗೆ ಈ ಸತ್ಕಥಾಶ್ರವಣದಿಂದ ಪರೀಕ್ಷಿರಾಜನಿಗೆ ಅತಿಸುಲಭವಾಗಿ ಮೋಕ್ಷವುಂಟಾದುದನ್ನು ನೋಡಿ, ಸೃಷ್ಟಿಕರ್ತ ನಾವ ಚ ತುರ್ಮುಖಬ್ರಹ್ಮನಿಗೂ ಆಶ್ಚದ್ಯವು ಹುಟ್ಟಿತು ಆಗ ಬ್ರಹ್ಮನು ಈ ಮಹಾ ಗ್ರಂಥದ ಮಹಿಮೆಯನ್ನು ಇನ್ನೂ ಸ್ಪಷ್ಟವಾಗಿ ಪರಿ' ಕ್ಷಿಸಬೇಕೆಂದು ವಿಶ್ವ ಯಿಸಿ, ಸತ್ಯಲೋಕದಲ್ಲಿ ಒಂದು ದೊಡ್ಡ ತುಲೆಯನ್ನು ಕಟ್ಟಿ, ಸಮಸ್ಯರ ರ್ಮಸಾಧನಗಳನ್ನೂ ಒಂದು ಕಡೆಯಲ್ಲಿರಿಸಿ, ಈ ಮಹಾಗ್ರಂಥವನ್ನೇ ಬೇ ರೊಂದು ಕಡೆಯಲ್ಲಿಟ್ಟು ತೂಗಿದನು. ಆಗಲೂ ಇದರದ್ಧಿಯೇ ಭಾವವು) ಗೌರವವು ಕಂಡುಬಂದಿತು. ಇದನ್ನು ನೋಡಿ ಅಲ್ಲಿ ಸಮಸ್ಯೆಯಷಿಗಳೂ ಅತ್ಯಾಶ್ರವನ್ನು ಹೊಂದಿದರು. ಭಾಗವತವೆಂಬುದು ಸಾಕ್ಷಾದ್ಭಗವ ತೃರೂಪವಾಗಿ ಭೂಮಿಯಲ್ಲಿ ಪ್ರಚಾರಗೊಂಡಿರುವ ಶಾಸ್ತ್ರವೇ ಹೊರತು ಬೇರೆಯಲ್ಲವೆಂದು ನಿಶ್ಚಯಿಸಿದರು. ಇದರ ಪಠನಶ್ರವಣಗಳಿಂದ ತಪ್ಪದೆ ಮೋಕ್ಷ ಫಲವು ಸಿದ್ಧಿಸುವುದೆಂಬ ನಿಶ್ಚಯವೂ ಹುಟ್ಟಿತು. ಎಲೆ ಶೌನಕನೆ ! ಈ ಭಾಗವತವನ್ನು ಏಳುದಿವಸಗಳಲ್ಲಿ ಶ್ರವಣಮಾಡಿದವರಿಗೆ, ಸತ್ವಪ್ರಕಾರ ದಿಂದಲೂ ಮುಕ್ತಿಯು ಕೈಗೂಡುವುದು. ಪೂತ್ವದಲ್ಲಿ ಈ ವಿಷಯವನ್ನೇ ಪರಮದಯಾಳುಗಳಾದ ಸನಕಾದಿಗಳು ನಾರದನಿಗೆ ತಿಳಿಸಿರುವರು ಅದಕ್ಕೆ ಮೊದಲೇ ನಾರದನು ಚತುರ್ಮುಖಬ್ರಹ್ಮನಿಂದ ಈ ಪುಣ್ಯಕಥೆಯನ್ನು ಕೇಳಿದ್ದರೂ, ಸಪ್ತಾಹಶ್ರವಣವೆಂಬ ವಿಧಿಯುಮಾತ್ರ ಅವನಿಗೆ ಸನಕಾ