ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೦.] ಪ್ರಥಮಸ್ಕಂಧವು. ೧೫ ಭ್ಯುದಯವನ್ನನುಗ್ರಹಿಸಿದಮೇಲೆ, ಆ ಪರೀಕ್ಷಿತ್ತು ರಾಜ್ಯಸಮರನಾಗುವ ವರೆಗೂ ಥರರಾಜನನ್ನೇ ರಾಜ್ಯವಾಳುವಂತೆ ನಿಯಮಿಸಿ, ಈ ಕಾರದಿಂದ ತಾನು ಕೃತಕೃತ್ಯನಾದಂತೆನಿಸಿ ಸಂತೋಷದಿಂದಿದ್ದನು. ಛದ್ಮರಾಜನೂ ಕೂಡ ಶ್ರೀಕೃಷ್ಣಾಜೆಯಿಂದ ರಾಜ್ಯವನ್ನು ಸ್ವೀಕರಿಸಿದಮೇಲೆ, ಭೀಷ್ಮಾ ಚಾಲ್ಯನೂ, ಕೃಷ್ಣನೂ, ತನಗುಪದೇಶಿಸಿದ್ದ ಧಮಾರ್ಗವನ್ನನುಸರಿಸಿ ರಾಜ್ಯವನ್ನು ನಡೆಸತೊಡಗಿದನು. ಆ ಧರಪುತ್ರನು ಅಪಾರವಾದ ಜ್ಞಾನ ವುಳ್ಳವನಾದುದರಿಂದ, ಮನಸ್ಸಿನ ಅಜ್ಞಾನವನ್ನು ವಿಶೇಷವಾಗಿ ನೀಗಿ, ಶ್ರೀಮನ್ನಾರಾಯಣನ ಕೃಪಾಬಲದಿಂದ ಸ್ವರ್ಗವನ್ನು ಪಾಲಿಸುವ ದೇವೇಂ ದ್ರನಂತೆ, ಶ್ರೀಕೃಷ್ಣನನ್ನೇ ತನಗೆ ಮುಖ್ಯಗತಿಯನ್ನಾಗಿ ನಂಬಿ, ತಮ್ಮಂದಿ ರೊಡಗೂಡಿ, ಸಮುದ್ರಾಂತವಾದಸಮಸ್ತಭೂಮಂಡಲವನ್ನೂ ಧರ್ಮದಿಂದ ಪಾಲಿಸುತ್ತಿದ್ದನು. ಶೌನಕಾ! ಈ ಧರೆರಾಜನ ರಾಜ್ಯದಲ್ಲಿ ಕಾಲಕಾಲಕ್ಕೆ ಸರಿ ಯಾಗಿ ಮೇಘಗಳು ಸುವೃಷ್ಟಿಯನ್ನು ಸುರಿಸುತ್ತಿದ್ದುವು. ಭೂಮಿಯು ಸ ಮೃದವಾದ ಬೆಳೆಯನ್ನು ಕೊಡುತಿತ್ತು.ಗೋವುಗಳೆಲ್ಲವೂ ಉಬ್ಬಿದ ಕೆಚ್ಚಲು ಗಳಿಂದ ಕೂಡಿ ಬೇಕಾದಷ್ಟು ಹಾಲನ್ನು ಕರೆಯುತ್ತಿದ್ದುವು. ಎಲ್ಲಾ ಋತುಗಳ ಕ್ಲಿಯೂ ತದನುಗುಣಗಳಾದ ಓಷಧಿಗಳು ಬೆಳೆಯುತ್ತಿದ್ದುವು. ನದಿಗಳು ಯಾ ವಾಗಲೂ ನಿರ್ಮಲಜಲದಿಂದ ತುಂಬಿ ತುಳುಕುತಿದ್ದುವು. ಸಮುದ್ರವು ನಾ ನಾವಿಧರತ್ನ ಸಮೂಹಗಳಿಂದ ಶೋಭಿಸುತಿತ್ತು. ಪರೂತಪ್ರಾಂತಗಳೆಲ್ಲವೂ ಸಪ್ತವಿಧಧಾತುಗಳಿಂದ ಬೆಳಗುತಿದ್ದುವು. ವನಗಳೆಲ್ಲವೂ ಪ್ರಶಸ್ತವಾದ ಫಲ ಪುಷ್ಪಸಮೃದ್ಧಿಯಿಂದ ಶೋಭಿಸುತ್ತಿದ್ದುವು. ಧರ್ಮರಾಜನ ರಾಜ್ಯದಲ್ಲಿ ಪ್ರ ಜೆಗಳಿಗೆ ಯಾವವಿಧದ ಮನೋವ್ಯಥೆಯಾಗಲಿ, ರೋಗಗಳಾಗಲಿ, ಆಧ್ಯಾತ್ಮಿ ಕಾದಿತಾಪತ್ರಯಗಳಾಗಲಿ ಸಂಭವಿಸುತ್ತಿರಲಿಲ್ಲ. ಹೀಗೆ ಧರ್ಮರಾಜನು ಸುಖದಿಂದ ರಾಜ್ಯವನ್ನು ಪರಿಪಾಲಿಸತೊಡಗಿದಮೇಲೆ, ಶ್ರೀಕೃಷ್ಣನು ಸಂ ತುಷ್ಟನಾಗಿ, ಬ್ಯಾರಕೆಗೆ ಹೊರಡಲುದ್ಯುಕ್ತನಾದನು. ಆ ಶ್ರೀಕೃಷ್ಣನು ತನ್ನ ತಂಗಿಯಾದ ಸುಭದ್ರೆಯ ಕೋರಿಕೆಯನ್ನು ತೀರಿಸುವುದಕ್ಕಾಗಿಯೂ, ಧರ್ಮರಾಜನ ದುಃಖಸಮಾಧಾನಕ್ಕಾಗಿಯೂ ಹೀಗೆ ಹಸ್ತಿನಾಪುರದಲ್ಲಿ ಕೆ ಲವು ತಿಂಗಳಿದ್ದು, ಆಮೇಲೆ ಧರ್ಮರಾಜನ ಅನುಮತಿಯನ್ನು ಪಡೆದು, ಭೀ