ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩d ಶ್ರೀಮದ್ಭಾಗವತವು [ಅಧ್ಯಾ. ೧೦, ತಡೆದು, ಇಂದ್ರಿಯಗಳನ್ನು ನಿಗ್ರಹಿಸಿ, ಶುದ್ಧವಾದ ಮನಸ್ಸಿನಿಂದಲೂ, ಭ ಕ್ರಿಯಿಂದಲೂ ಕೂಡಿದವರಾಗಿ, ಯಾವಪರಮಾತ್ಮನ ಸ್ವರೂಪವನ್ನು ನೋ ಡುತ್ತಿರುವರೋ ಅವನೇ ಈ ಕೃಷ್ಣನು! ಎಲೆ ಸಖಿ! ವೇದವಿತ್ತುಗಳು ಯಾ ವನ ಸತ್ಕಥೆಗಳನ್ನು ಅತಿರಹಸ್ಯಾರ್ಥವುಳ್ಳ ವೇದಾಂತಗಳಿಂದ ಗಾನಮಾ ಡುತ್ತಿರುವರೋ, ಯಾವನು ತಾನೊಬ್ಬನೇ ಆಗಿದ್ದರೂ, ಜಗತ್ತಿನಸೃಷ್ಟಿಸಿ ತಿಸಂಹಾರಗಳಲ್ಲಿ ಲೀಲಾರ್ಥವಾಗಿ ಪ್ರವರ್ತಿಸುತ್ತಿರುವನೋ, ಯಾವ ಮ ಹಾನುಭಾವನು ಈ ಜಗತ್ತಿನಲ್ಲಿ ಅಂತರಾಮಿಯಾಗಿದ್ದರೂ, ಅದರಿಂದುಂ ಟಾದ ದೋಷಸಂಬಂಧವಿಲ್ಲದಿರುವನೋ, ಆ ಈಶ್ವರನೇ ಈ ಕೃಷ್ಣನು! ಇದ ಲ್ಲದೆ ಲೋಕದಲ್ಲಿ ಕುಬುದ್ಧಿಯುಳ್ಳರಾಜರು, ದುಷ್ಟವರ್ತನವುಳ್ಳವರಾಗಿ, ಆ ಧರ್ಮದಲ್ಲಿ ಪ್ರವರ್ತಿಸಿದಾಗಲೆಲ್ಲಾ, ಲೋಕವನ್ನು ರಕ್ಷಿಸುವುದಕ್ಕಾಗಿ ಮ ತ್ಯಾದೃವತಾರಗಳನ್ನು ಧರಿಸಿ, ಧರ್ಮವನ್ನೂ, ಜ್ಞಾನಾಜಸದ್ದು ಣಗಳ ನ್ಯೂ, ಸತ್ಯ,ದಯೆ, ಕೀರ್ತಿ, ಮೊದಲಾದುವುಗಳನ್ನೂ ನೆಲೆಗೊಳಿಸತಕ್ಕವನೂ ಈತನಲ್ಲದೆ ಬೇರೆಯಲ್ಲ. ಇನ್ನು ಹೆಚ್ಚಾಗಿ ಹೇಳಿದುದರಿಂದೇನು. ಈ ಕೃಷ್ಣನು ಹುಟ್ಟಿದುದರಿಂದಲೇ ಯದುಕುಲವು ಪವಿತ್ರವಾಯಿತು! ಈ ಶ್ರೀಕೃಷ್ಣಮೂ ರ್ತಿಯ ಪಾದವಿನ್ಯಾಸದಿಂದಲೇ ಮಧುರಾಪುರವು ಪವಿತ್ರವೆನಿಸಿರುವುದು. ಆಹಾ ! ದ್ವಾರಕಾಪುರದ ಭಾಗ್ಯವೇ ಭಾಗ್ಯವಲ್ಲವೆ ? ಯಾವ ಪಟ್ಟಣದಲ್ಲಿರು ವ ಪ್ರಜೆಗಳು ಸದಾ ಶ್ರೀಕೃಷ್ಣನ ದರ್ಶನದಿಂದ ಮಹಾನಂದವನ್ನನುಭವಿ ಸುತ್ತಿರುವರೋ,ಯಾವ ಪಟ್ಟಣದ ಭೂಭಾಗವು ಈತನ ಪಾದಸ್ಪರ್ಶದಿಂದ ಅತಿಪವಿತ್ರವೆನಿಸಿಕೊಂಡಿರುವುದೋ,ಯಾವ ಪಟ್ಟಣವು ಈತನ ನಿತ್ಯನಿವಾಸ ದಿಂದ ಸ್ವರ್ಗಕ್ಕಿಂತಲೂ ಅತಿಶಯವಾದ ಪ್ರಭಾವವನ್ನು ಹೊಂದಿರುವು ದೋ, ಆ ದ್ವಾರಕಾಪುರಿಯೊಂದೇ ಈ ಸಮಸ್ತಭೂಮಿಗೂ ಪುಣ್ಯವನ್ನೂ, ಯಶಸ್ಸನ್ನೂ ಕೈಗೂಡಿಸುತ್ತಿರುವುದು.ಎಲೈ ಸಖಿಯರೇ!ಯಾವಗೋಪಸ್ತಿ ಯರು ಈತನಕ್ಕೆಯನ್ನು ಹಿಡಿದು, ಈತನಲ್ಲಿಯೇ ನಟ್ಟಿ ಮನಸ್ಸುಳ್ಳವರಾಗಿರೋ ಹಪಾರವಶ್ಯದಿಂದ ಇವನ ಅಧರಾಮೃತವನ್ನು ಪಾನಮಾಡುತ್ತಿರುವರೋ, ಅವರೆಲ್ಲರೂ ಪೂಲ್ವಜನ್ಮದಲ್ಲಿ ಭಗವಂತನನ್ನು ಎಷ್ಟೊವಿಧದಿಂದ ಆರಾಧಿ ಸಿರಬೇಕು! ಅವರು ಜನ್ಮಾಂತರದಲ್ಲಿ ಎಷ್ಟೊವ್ರತಗಳನ್ನೂ, ಎಷ್ಟೋದಾ