ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪e ಶ್ರೀಮದ್ಭಾಗವತವು (ಅಧ್ಯಾ, ೧೧. ಬಳಲಿದಂತೆ ತೋರಿದುವು. ಹಾಗಿದ್ದರೂ ಪ್ರಯಾಣವನ್ನು ನಿಲ್ಲಿಸದೆ ಮುಂದೆ ಹೋಗುತ್ತ, ದಾರಿಯಲ್ಲಿ ಆಯಾದೇಶದ ಜನರು ಭಕ್ತಿಯಿಂದ ತಂದು ಸಮರ್ಪಿಸಿದ ಕಾಣಿಕೆಗಳನ್ನು ಪ್ರೀತಿಯಿಂದ ಸ್ವೀಕರಿಸುತ್ತ, ಸೂರೈನು ಪತ್ನಿ ಮಶಿಖರದಿಂದ ಹಾರಿ ಆಪರಸಮುದ್ರದಲ್ಲಿ ಧುಮುಕುವಷ್ಟರೊಳಗಾಗಿ ದ್ವಾರಕಾಪುರಪ್ರಾಂತದಲ್ಲಿರುವ ಅನರ್ತದೇಶವನ್ನು ಪ್ರವೇಶಿಸಿದನು. ಇಲ್ಲಿಗೆ ಹತ್ತನೆಯ ಅಧ್ಯಾಯವು. -+++ ಶ್ರೀಕೃಷ್ಣನು ದ್ವಾರಕೆಯನ್ನು ಪ್ರವೇಶಿಸಿದುದು +w ಹೀಗೆ ಕೃಷ್ಣನು ಸಕಲಸಂಪತ್ಸಮೃದ್ಧವಾಗಿಯೂ, ತನ್ನಿಂದ ಪರಿ ಪಾಲಿತವಾಗಿಯೂ ಇರುವ ಆನರ್ತದೇಶವನ್ನು ಪ್ರವೇಶಿಸಿದೊಡನೆ, ಅಲ್ಲಿ ಬಹುಕಾಲದಿಂದತನ್ನ ನ್ನಗಲಿದುದಕ್ಕಾಗಿ ದುಃಖಿತರಾಗಿದ್ದ ಆಪುರಜನವೆಲ್ಲಕ್ಕೂ ದುಃಖನಿವೃತ್ತಿಯಾಗುವಂತೆ, ತನ್ನ ಪಾಂಚಜನ್ಯವೆಂಬ ಮಹಾಶಂಖವನ್ನು ಪೂರಯಿಸಿ ಧ್ವನಿಮಾಡಿದನು.ಹೀಗೆ ಕೃಷ್ಣನು ಶಂಖವನ್ನು ಕೈಯಿಂದೆಬಾ ಯಲ್ಲಿಟ್ಟು ಪೂರೈಸುವಾಗ, ಆತನ ಅಧರಕಾಂತಿಯಿಂದ ಕೆಂಪಾದ ಆ ಪಾಂಚಜ ನ್ಯವು, ಆ ಕೃಷ್ಣನ ಕರಕಮಲಸಂಬಂಧದಿಂದ, ಕಮಲವನಮಧ್ಯದಲ್ಲಿ ಧ್ವನಿ ಮಾಡುತ್ತಿರುವ ಕಲಹಂಸದಂತೆ ಶೋಭಿಸುತ್ತಿತ್ತು.ಲೋಕಕಂಟಕರಾದವರಿಗೆ ಭಯವನ್ನುಂಟುಮಾಡತಕ್ಕ ಆ ಶಂಖಧ್ವನಿಯನ್ನು ಕೇಳಿದೊಡನೆ,ಆದೇಶವಾ ಸಿಗಳೆಲ್ಲರೂ ತಮ್ಮ ಪ್ರಭುವಾದ ಕೃಷ್ಣನು ಬರುವುದನ್ನು ತಿಳಿದು, ಆತನದ ನಕ್ಕಾಗಿ ಕುತೂಹಲಗೊಂಡು, ಅವನನ್ನಿ ದಿರುಗೊಳ್ಳುವುದಕ್ಕಾಗಿ ಹೊರಟು ಬಂದರು. ಮತ್ತು ಇವರೆಲ್ಲರೂ ಸೂರನಿಗೆ ಬೆಳಕನ್ನು ತೋರಿಸುವಂತೆ ನೈ ಜಾನಂದಲಾಭದಿಂದ ಪೂರ್ಣ ಕಾಮನಾಗಿಯೂ, ಆತ್ಮಾರಾಮನಾಗಿಯೂ, ನಿರಪೇಕ್ಷನಾಗಿಯೂ ಇರುವ ಆ ಶ್ರೀಕೃಷ್ಣನಿಗೆ ತಮ್ಮ ತಮ್ಮ ಶಕ್ಯನು ಸಾರವಾಗಿ ಕೈಕಾಣಿಕೆಗಳನ್ನೂ ತಂದೊಪ್ಪಿಸಿದರು. ಇವರೆಲ್ಲರೂ ಕಾಣಿಕೆಗಳ ನೊಪ್ಪಿಸಿ,ಪ್ರೀತಿಯಿಂದರಳಿದ ಮುಖವುಳ್ಳವರಾಗಿ ಮುಂದೆ ಬಂದು,ಕೃಷ್ಣ ನನ್ನು ನೋಡಿ, ಎಳಮಕ್ಕಳು, ತಮಗೆ ರಕ್ಷಕನಾಗಿಯೂ ತಮ್ಮೆಲ್ಲರಲ್ಲಿ ಸ