ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೧.] ಪ್ರಥಮಸ್ಕಂಧವು. ೧೪೧. ಮಾನಪ್ರೇಮವುಳ್ಳವನಾಗಿಯೂ ಇರುವ ತಂದೆಯಲ್ಲಿ ತಮ್ಮ ತಮ್ಮ ಮನ ಸ್ಪಂತೋಷವನ್ನು ತಿಳಿಸಿಕೊಳ್ಳುವಂತೆ ಸಂತೋಷದಿಂದ ಕುಗ್ಗಿದ ಕಂಠ ವುಳ್ಳವರಾಗಿ ಹೀಗೆಂದು ವಿಜ್ಞಾಪಿಸುವರು. ದೇವಾ ! ಬ್ರಹ್ಮಾದಿದೇವತೆಗೆ ಳಿಂದಲೂ, ಸನಕಸನಂದನಾದಿಮಹರ್ಷಿಸಮೂಹಗಳಿಂದಲೂ ವಂದನೀಯ ವಾದ ನಿನ್ನ ಪಾದಾರವಿಂದಕ್ಕೆ ವಂದಿಸುವೆವು. ಈ ನಿನ್ನ ಪಾದಕಮಲವೇ ಲೋಕದಲ್ಲಿ ಶ್ರೇಯಕಾಂಕ್ಷಿಗಳಿಗೆ ಪರಮಪ್ರಾಪ್ಯವು ! ಬಹ್ಮಾದಿದೇವತೆ ಗಳನ್ನಾದರೂ ವಶೀಕರಿಸತಕ್ಕ ಕಾಲವೂಕೂಡ ನಿನ್ನ ವಿಷಯದಲ್ಲಿ ಮಾತ್ರ ತನ್ನ ಶಕ್ತಿಯನ್ನು ತೋರಿಸಲಾರದು. ಅಂತಹ ನಿನ್ನ ಪಾದಸೇವೆಯಿಂದ ನಾವು ಧನ್ಯರಾದೆವು. ಎಲೈ ಲೋಕಕಾರಣನೇ ! ನೀನೇ ನಮಗೆ ಮಿತ್ರನು. ನೀನೇ ತಂದೆಯು ನೀನೇ ಅಧಿಪತಿ! ನೀನೇ ನಮಗೆ ಜ್ಞಾನೋಪದೇಶಕ ನಾದ ಪರಮಗುರು ! ನೀನೇ ಪರದೈವವು ! ನಿನಗಿಂತಲೂ ನಮಗೆ ಬೇರೆ ದೈವವಿಲ್ಲ ! ನಾವು ಯಾವಾಗಲೂ ನಿನ್ನನ್ನೇ ನಂಬಿ ನಿನ್ನ ಸೇವೆಯಿಂ ದಲೇ ಕೃತಕೃತ್ಯರಾಗುತ್ತಿರುವೆವು. ದೇವಾ ! ನಮಗೆ ಸತ್ವವಿಧದಲ್ಲಿಯೂ, ಆಶ್ರಯನಾದ ನೀನು ನಮಗೆ ಉತ್ತರೋತ್ತರಾಭ್ಯುದಯವನ್ನು ಅನುಗ್ರಹಿಸ ಬೇಕು. ಎಲೈ ನಾಥನೆ ! ಮೂರುಲೋಕದವರಿಗೂ ದುರಭವಾಗಿ, ಪ್ರೀತಿ ವಿಶಿಷ್ಟವಾದ ಮಂದಹಾಸದಿಂದಲೂ, ಸ್ನೇಹಪೂರಕವಾದ ನೋಟದಿಂದ ಲೂ ಕೂಡಿದ ಮುಖಾರವಿಂದವುಳ್ಳುದಾಗಿ, ಸಾತಿಶಯ ಸೌಂದಯ್ಯ ಒಂದೊಪ್ಪತ್ತಿರುವ ಈ ನಿನ್ನ ಸ್ವರೂಪವನ್ನು ಪ್ರತ್ಯಕ್ಷವಾಗಿ ನೋಡುವ ಭಾಗ್ಯವೇ ನಮಗೆ ಲಭಿಸಿದಮೇಲೆ, ಇನ್ನು ನಮ್ಮ ಪುಣ್ಯಕ್ಕೆಣೆಯೇನಿರುವುದು? ಆಹಾ ! ಲೋಕದಲ್ಲಿ ಸನಾಥರೆಂದರೆ ನಮಗೆಮಾತ್ರವೇ ಸಲ್ಲುವುದು! ಓ! ಪುಂಡರೀಕಾಕ್ಷಾ! ಇದಕ್ಕೆ ಮೊದಲು ನೀನು ನಿನ್ನ ಮಿತ್ರರನ್ನು ನೋಡುವುದ ಕ್ಯಾಗಿ, ಹಸ್ತಿನಾವತಿಗೋ, ಮಧುವನಕ್ಕೆ ಹೋಗಿದ್ದ ಕಾಲದಲ್ಲಿ, ಕಣ್ಣುಗ ಳಿಗೆ ಸೂರನಬೆಳಕಿಲ್ಲದಿದ್ದರೆ ಹೇಗೋಹಾಗೆ, ನಿನ್ನ ವಿಯೋಗದಿಂದ ನಮಗೆ ಒಂದೊಂದುಕ್ಷಣವೂ ಕೋಟಿಸಂವತ್ಸರಗಳಂತೆ ಕಾಣುತಿದ್ದುವು” ಎಂ ದರು. ಹೀಗೆ ಪ್ರಜೆಗಳು ಪ್ರೇಮಪೂರಕವಾಗಿ ನುಡಿಯುತ್ತಿರುವ ಮೃದು ಮಧುರವಾಕ್ಯಗಳನ್ನು ಕೇಳುತ್ತ, ಭಕ್ತವತ್ಸಲನಾದ ಶ್ರೀ ಕೃಷ್ಣನು, ತನ್ನ