ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ದಿಗಳಿಂದಲೇ ಉಪದೇಶಿಸಲ್ಪಟ್ಟಿತು.” ಎಂದನು. ಆಗ ಶೌನಕನು ತಿರುಗಿ ಸೂತಪೌರಾಣಿಕನನ್ನು ಕುರಿತು “ಎಲೈ ಮಹಾತ್ಮನೆ ! ಕೇವಲಯುದ್ಧ ದರ್ಶನದಲ್ಲಿಯೇ ಆಸಕ್ತನಾಗಿ, ನಿಂತ ಕಡೆಯಲ್ಲಿ ನಿಲ್ಲದೆ ಲೋಕಸಂಚಾರಿ ಯಾಗಿ ತಿರುಗುತ್ತಿರುವ ನಾರದನಿಗೆ, ಈ ಸಪ್ತಾಹವಿಧಿಯನ್ನನುಸರಿಸಿ ಭಾಗ ವತವನ್ನು ಕೇಳಬೇಕೆಂಬ ಪ್ರೀತಿಯು ಹೇಗೆ ಹುಟ್ಟಿತು ? ಸನಕಾದಿಗಳೊಡನೆ ಅವನಿಗೆ ಸಮಾಗಮಂದಾದುದು ಹೇಗೆ ? ಇದರ ವಿವರವನ್ನು ನನಗೆ ತಿಳಿಸ ಬೇಕು ” ಎಂದನು. ಅದಕ್ಕಾ ಸೂತಪ ಶಾರಾಣಿಕನು, ಶಾವಕನನ್ನು ಕುರಿತು 4 ಶೌನಾ ! ಈ ವಿಷಯದಲ್ಲಿ ಒಂದು ಪೂರೈವತಂತವುಂಟು. ಹೇಳು ವೆನು ಕೇಳು ! ಮೊದಲೊಮ್ಮೆ ನಾರದನು, ಜ್ಞಾನಭಕ್ತಿ ವೈರಾಗ್ಯಗಳ ಸಾಧ ನೆಗೆ ಭೂಮಿಯೇ ಉತ್ತಮಸ್ಥಾನವೆಂದು ತಿಳಿದು, ಈ ಭೂಲೋಕಕ್ಕೆ ಬಂ ದನು ಆಗ ಈ ಸಮಸ್ಯಭೂಮಿಯ ಕಲಿದೋಷದಿಂದ ದೂಷಿತವಾಗಿತ್ತು. ಸತ್ಯವಾಗಲಿ, ತಪಸ್ಸಾಗಲಿ, ದಾನ ಧಮ್ಮ ದಯಾ ದಾಕ್ಷಿಣಾದಿಗಳಾಗಲಿ ಯಾವುದೆಂದೂ ಕಾಣುತ್ತಿರಲಿಲ್ಲ. ಒಬ್ಬೊಬ್ಬರೂ ತಮ್ಮ ತಮ್ಮ ಹೊಟ್ಟೆ ಹೊರೆಯುವುದರಲ್ಲಿ ಯೇ ನಿರತರಾಗಿದ್ದರೇ ಹೊರತು, ಧರದಲ್ಲಿ ಯಾರೊಬ್ಬ ರಿಗೂ ದೃಷ್ಟಿಯಿಲ್ಲ. ಸಮಸ್ಯಪ್ರದೇಶವೂ ಪಾಷಂಡಪ್ರಚುರವಾಗಿದ್ದಿತು. ವಿರಕ್ತರೆನಿಸಿಕೊಂಡವರೂ ಸಿಲೆ ಲರಾಗಿರುತಿದ್ದರು. ಮನೆಯಲ್ಲಿ ಸ್ತ್ರೀಯ ರಿಗೇ ಸ್ವಾತಂತ್ರವು' ಮೈದುನನೇ ಬುದ್ಧಿ ಕಲಿಸುವವನು! ಕನ್ಯಾವಿಕ್ರಯವು ಹೆಚ್ಚಿತು! ದಂಪತಿಗಳಲ್ಲಿ ಸ್ವಲ್ಪವಾದರೂ ಸೌಮನಸ್ಯವಿಲ್ಲ ! ಪುಣ್ಯಾಶ್ರಮಗ ಭೂ ಪುಣ್ಯತಿರಗಳೂ, ದೇವಾಲಯಗಳ ನೀಚಜಾತಿಯವರಿಂದಾವೃತವಾ ಚುವು. ಹುಡುಕಿ ನೋಡಿದರೂ ಯೋಗಿಯಾಗಲಿ, ಜ್ಞಾನಿಯಾಗಲಿ, ಸಿದ್ಧ ನಾಗಲಿ, ಸದಾಚಾರಪರನಾಗಲಿ ಒಬ್ಬನಾದರೂ ಸಿಕ್ಕುತ್ತಿರಲಿಲ್ಲ. ಕಲಿದೇ ಷವೆಂಬ ಕಾಡುಗಿಚ್ಚಿನಿಂದ ಸಮಸ್ಯಸಿದ್ಧಿಗಳೂ ಭಸ್ಮವಾಗುತಿದ್ದುವು. ಜನರು ಅನ್ನ ವಿಕ್ರಯದಿಂದಲೂ, ಬ್ರಾಹ್ಮಣರು ವೇದವಿಕ್ರಯದಿಂದ, ಸ್ತ್ರೀಯ ರು ರೂಪವಿಕ್ರಯದಿಂದಲೂ ಜೀವಿಸುತಿದ್ದರು. ಹೀಗೆ ಸಮಸ್ತಭೂಭಾಗವೂ ಕಲಿದೋಷಪ್ರಚುರವಾಗಿರುವುದನ್ನು ನೋಡಿ ನಾರದನು, ಪುಷ್ಯರಪ್ರಯಾ ಗಾದಿದಿವ್ಯತೀ‌ಗಳೆಲ್ಲವನ್ನೂ ಸುತ್ತಿ, ಎಲ್ಲಿಯೂ ಮನಸ್ಸಿಗೆ ನೆಮ್ಮದಿಯಿಲ್ಲ